Breaking News

ಬೆಳಗಾವಿಯಲ್ಲಿ ಗಾಂಜಾ ಪ್ರಕರಣದಲ್ಲಿ ಸಾವನ್ನಪ್ಪಿದ ಆರೋಪಿ ಸಿಐಡಿ ತನಿಖೆಗೆ ವರ್ಗಾವಣೆ???!!!

ಬೆಳಗಾವಿಯಲ್ಲಿ ಗಾಂಜಾ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಪೊಲೀಸ್ ಕಮಿಷ್ನರ್ ಬೋರಲಿಂಗಯ್ಯ ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರ ವಶದಲ್ಲಿದ್ದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ನಿವಾಸಿ ಬಸನಗೌಡ ಪಾಟೀಲ್(೪೫) ಎಂಬ ಆರೋಪಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿತ್ತು. ಠಾಣೆಗೆ ಕರೆದುಕೊಂಡು ಬರವಾಗ ಆರೋಗ್ಯದಲ್ಲಿ ಅಸ್ವಸ್ಥತೆ ಕಂಡಿದೆ. ತಕ್ಷಣವೇ ದಾರಿ ಮಧ್ಯೆಯೇ ಖಾಸಗಿ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ …

Read More »

ಶ್ರೀ ಸಂತೋಷ್ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ರಮದುರ್ಗದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದಲ್ಲಿ ಹುನುಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …

Read More »

ಸರ್ವಧರ್ಮದ ಶಾಂತಿಯ ತೋಟ ಯರನಾಳ ಮಠ – ದುರ್ಯೋಧನ ಐಹೋಳೆ

ಹುಕ್ಕೇರಿ ತಾಲೂಕಿನ ಯರನಾಳದ ಶ್ರೀ ಮಹಾಮಾತಾ ಕಾಳಿಕಾದೇವಿ ಮಠ ಸರ್ವಧರ್ಮದ ಪಕ್ಷಾತೀತ ಆಶ್ರಮವಾಗಿದೆ ಎಂದು ರಾಯಭಾಗ ಶಾಸಕ ಧುಯೋಧನ ಐಹೋಳೆ ಹೇಳಿದರು. ಅವರು ಇಂದು ಯರನಾಳ ಕಾಳಿಕಾಮಾತೆ ರಥೋತ್ಸವದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಜಾತಿ ಮತ ಭೇಧ ಭಾವ ಇಲ್ಲದ ಏಕೈಕ ಮಠ ಶ್ರೀ ಬ್ರಹ್ಮಾನಂದ ಅಜ್ಜನವರ ಕಾಳಿಕಾ ಆಶ್ರಮ, ಮಠಕ್ಕೆ ಬರುವ ಜನರಿಂದ ಯಾವದೇ ರೀತಿಯ ಕಾಣಿಕೆ ಪಡೆಯುವದಿಲ್ಲಾ ಕೇವಲ ಭಕ್ತಿ ಶ್ರದ್ಧೆ ಇದ್ದರೆ ಸಾಕು ನಾನು ಪ್ರತಿ …

Read More »

ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆ, ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ‌ನಗರದ ಗಣೇಶ ನಗರದ ಬಳಿ ರೇಲ್ವೇ ಹಳಿಯ ಮೇಲೆ ನಡೆದಿದೆ‌.   ಗಡಗಿ ಲೇಔಟ್ ನಿವಾಸಿ ಗುರುರಾಜ ಪುರೋಹಿತ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಮುಂಬೈ ಗದಗ ಮಾರ್ಗ ಮದ್ಯೆ ಸಂಚರಿಸೋ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ರೇಲ್ವೆ ಪೊಲೀಸರ ಭೇಟಿ ನೀಡಿದ್ದಾರೆ‌. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಭಾರತ್ ಜೋಡೋ: ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

ಹಿಂಗೋಲಿ: ನೆರೆಯ ನಾಂದೇಡ್ ಜಿಲ್ಲೆಯಿಂದ ಆಗಮಿಸಿದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪಾಲ್ಗೊಂಡಿದ್ದಾರೆ. ಹಿಂಗೋಲಿಯ ಕಳಮ್ನೂರಿನಲ್ಲಿ ಯಾತ್ರೆಗೆ ಸೇರ್ಪಡೆಗೊಂಡ ಆದಿತ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ನಡೆಸಿದರು. ಆದಿತ್ಯ ಠಾಕ್ರೆ ಅವರನ್ನು ಪಕ್ಷದ ಸಹೋದ್ಯೋಗಿಗಳಾದ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮತ್ತು ಮಾಜಿ ಶಾಸಕ ಸಚಿನ್ …

Read More »

ಟಗರು ಕಾಳಗದ ಸೋಲಿಲ್ಲದ ಸರದಾರ ಗಾಂಧಿ ನಗರದ ಗೂಳಿ ಇನ್ನಿಲ್ಲ

ಕುಷ್ಟಗಿ:ರಾಜ್ಯದ ಯಾವೂದೇ ಭಾಗದಲ್ಲಿ ರಣರೋಚಕ ಟಗರಿನ ಕಾಳಗ ನಡೆದರೂ ಕುಷ್ಟಗಿಯನ್ನು ಪ್ರತಿನಿಧಿಸಿ ಗೆಲ್ಲುತ್ತಿದ್ದ “ಗಾಂಧಿ ನಗರದ ಗೂಳಿ” ಎಂದೇ ಪ್ರಖ್ಯಾತಿಯ ಟಗರು ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸಾವನ್ನಪ್ಪಿದೆ.   ಅಕಾಲಿಕವಾಗಿ ಸಾವನ್ನಪ್ಪಿದ ಟಗರು, ಬೆಂಚಮಟ್ಟಿ ಗ್ರಾಮದ ಜಂಬಣ್ಣ ಡೊಳ್ಳೀನ್ ಅವರ ಅಚ್ಚು ಮೆಚ್ಚಿನದಾಗಿತ್ತು. ಪ್ರಥಮ ಸ್ಥಾನ ಗಳಿಸುವ ಮೂಲಕ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಗಳಿಸಿತ್ತು. ಸದಾ ಗೆಲ್ಲುವ ಟಗರಿಗೆ 3 ಲಕ್ಷರೂಗೆ ಕೇಳಿದ್ದರೂ ಜಂಬಣ್ಣ ಡೊಳ್ಳೀನ್ ಕೊಟ್ಟಿರಲಿಲ್ಲ. …

Read More »

ವಿಷಕಂಠ ಶಿವನ ವಾನಪ್ರಸ್ಥಕ್ಕೆ ಶಿವರಾಮನ ಸಾಕ್ಷ್ಯ

ನ. 14ರಿಂದ 20ರ ವರೆಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರಿ ತಣ್ತೀಗಳ ಬಗೆಗೆ ಚಿಂತನೆ ನಡೆಸುವ ಕಾಲವಿದು. ಮೊಳ ಹಳ್ಳಿ ಶಿವರಾಯರು, ಪೆರಾಜೆ ಶ್ರೀನಿವಾಸ ರಾಯರು, ಜಿ.ಎಸ್‌.ಆಚಾರ್‌, ವಾರಣಾಶಿ ಸುಬ್ರಾಯ ಭಟ್‌, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಬಂಟ್ವಾಳ ನಾರಾಯಣ ನಾಯಕ್‌ರಂತಹ ನಡೆ-ನುಡಿಗಳಲ್ಲಿ ಸಹಕಾರಿಗಳಾಗಿದ್ದವರನ್ನು ಸ್ಮರಿಸಲಾಗುತ್ತಿದೆ.   ಪೆರಾಜೆ ಶ್ರೀನಿವಾಸ ರಾಯರು ಸಹಕಾರ ಕ್ಷೇತ್ರದಲ್ಲಿ ದಿಗ್ಗಜರೆನಿಸಿದ ಇತ್ತೀಚಿನವರು. ಇವರ ಇಳಿವಯಸ್ಸಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಕಾರ ರಂಗದ …

Read More »

ಸೈಬರ್ ವಂಚನೆ: ಬಸವಕಲ್ಯಾಣದ ಯುವ ಉಪನ್ಯಾಸಕಿ ಆತ್ಮಹತ್ಯೆ

ಬಸವಕಲ್ಯಾಣ: ತಾಲ್ಲೂಕಿನ ಇಸ್ಲಾಂಪುರದ ಆರತಿ ಕನಾಟೆ (28) ಎಂಬುವರು ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ, ವಂಚನೆಗೆ ಒಳಗಾಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌‌’ನಗರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಅವರು ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ಹೂಡಿಕೆ ಮಾಡಿದ್ದಾರೆ. ಮನೆಯಲ್ಲೇ ಕೂತು ಉದ್ಯೋಗ ಮಾಡಲು ಹಣ ಹೂಡಿಕೆ ಮಾಡಿ ಎಂದ ಕಾರಣ ಅವರು ₹ 1 ಸಾವಿರದಿಂದ ₹2.50 ಲಕ್ಷದವರೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ’ …

Read More »

ಕನ್ನಡಿಗರಲ್ಲಿ ಮೋದಿಗೆ ಯಾಕಿಷ್ಟು ದ್ವೇಷ: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದು, “ಆನ್ಸರ್‌ ಮಾಡಿ ಮೋದಿ’ (ಉತ್ತರ ಹೇಳಿ ಮೋದಿ) ಎಂದು ಆಗ್ರಹಿಸಿದ್ದಾರೆ. ಉತ್ತರ ಹೇಳಿ ಮೋದಿ ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಸರಣಿ ಟ್ವೀಟ್‌ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಿರುವ ಸಿದ್ದರಾಮಯ್ಯ, ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಕ್ಷೆಯಿಂದ ಕನ್ನಡವನ್ನು ಕಿಕ್‌ ಔಟ್‌ ಮಾಡಿ ಕನ್ನಡಿಗರ ಪಾಲಿನ ಉದ್ಯೋಗ ಕಿತ್ತುಕೊಳ್ಳಲಾಗಿದೆ. ಕನ್ನಡಿಗರನ್ನು ಕಂಡರೆ …

Read More »

ತಿರುಪತಿ ದೇವಸ್ಥಾನ: ಲಡ್ಡು ಪ್ರಸಾದದ ತೂಕದಲ್ಲಿ ಯಾವುದೇ ಅನುಮಾನ ಬೇಡ : ಟಿಟಿಡಿ ಸ್ಪಷ್ಟನೆ

ಹೈದರಾಬಾದ್‌:ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದ ಗಾತ್ರ ಮತ್ತು ತೂಕದಲ್ಲಿ ಬದಲಾವಣೆಯಾಗಿದೆ ಎಂಬ ಆರೋಪವನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್ಸ್‌) ತಳ್ಳಿಹಾಕಿದೆ. ಅಲ್ಲದೇ, ಸುಳ್ಳು ಸುದ್ದಿಯನ್ನು ಯಾವುದೇ ಕಾರಣಕ್ಕೂ ನಂಬದಿರಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದೆ. ದೇಗುಲದ ಅಡುಗೆ ಮನೆ “ಪೋಟು’ವಿನಲ್ಲಿ ಪ್ರತಿದಿನ ತಯಾರಾಗುವ ಲಡ್ಡುಗಳನ್ನು ಪ್ರತ್ಯೇಕ ಟ್ರೇಯಲ್ಲಿ ಇಟ್ಟು, ಅದರ ತೂಕವನ್ನು ಅಳೆಯಲಾಗುತ್ತದೆ. ಇಲ್ಲಿನ ಎಲ್ಲ ಪ್ರಕ್ರಿಯೆಯೂ ಪಾರದರ್ಶಕವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು …

Read More »