ಕೊಡಗು: ಒಂದು ವಾರದಿಂದ ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡ್ಲಿಪೇಟೆ ಸಮಿಪದ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. 13 ವರ್ಷದ ವೈಷ್ಣವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಕೊಡ್ಲಿಪೇಟೆ ಸಮಿಪದ ಶಿವರಳ್ಳಿ ಗ್ರಾಮದ ಜಿತೇಂದ್ರ-ಅಕ್ಷತ ದಂಪತಿ ಪುತ್ರಿ ವೈಷ್ಣವಿ ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಾಂಗ ಮಾಡುತಿದ್ದಳು. ಕಳೆದ ಒಂದು ವಾರದಿಂದ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದಳು. ವಿದ್ಯಾರ್ಥಿನಿ ವೈಷ್ಣವಿ ಶನಿವಾರ ಸಂಜೆ ಮನೆಯಲ್ಲಿ ನೇಣುಬಿಗಿದುಕೊಂಡು …
Read More »78 ಯೋಜನೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿಯಿಂದ ಅನುಮೋದನೆ; ಸೃಷ್ಟಿಯಾಗಲಿವೆ 13,917 ಉದ್ಯೋಗಗಳು!
ಬೆಂಗಳೂರು: ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಏಕಗವಾಕ್ಷಿ ಸಮಿತಿ, ಬಂಡವಾಳ ಹೂಡಿಕೆ ಮತ್ತು ಉದ್ಯೋಗಾವಾಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 78 ಯೋಜನೆಗಳ 5298.69 ಕೋಟಿ ರೂ. ಬಂಡವಾಳ ಹೂಡಿಕೆಗೆ ಇಂದು (ಮಾ.19) ಅನುಮೋದನೆ ನೀಡಿದೆ. ಒಟ್ಟು 78 ಯೋಜನೆಗಳಿಂದ 5298.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು ಇದರ ಪರಿಣಾಮವಾಗಿ, 13917 ಜನರಿಗೆ ಉದ್ಯೋಗಗಳು ಲಭಿಸಲಿವೆ. ಅನುಮೋದನೆ …
Read More »ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿಗೆ ಈಗ ಚಿನ್ನದ ಬೆಲೆ
ಹಾವೇರಿ/ ವೀರೇಶ ಚೌಕಿಮಠ ಬ್ಯಾಡಗಿ ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿಗೆ ಈಗ ಚಿನ್ನದ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಬ್ಯಾಡಗಿ ಕಡ್ಡಿ (ಕೆಡಿಎಲ್) ಮತ್ತು ಡಬ್ಬಿ ತಳಿಗೆ 60ರಿಂದ 65 ಸಾವಿರ ರೂ.ಗೆ ಏರಿಕೆಯಾಗಿದೆ. ಆದರೆ, ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದಾಗಿ ಮೆಣಸಿನಕಾಯಿ ಇಳುವರಿ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ವಾರದಿಂದ ವಾರಕ್ಕೆ ದರ ಏರುತ್ತಲೇ ಇದೆ. ಈ ಬೆಳವಣಿಗೆಯಿಂದ ಗ್ರಾಹಕರು ಸೇರಿ ರೈತರಲ್ಲೂ ಆತಂಕ ಸೃಷ್ಟಿಯಾಗಿದೆ. ವಿಶ್ವದಲ್ಲೇ ಮೆಣಸಿನಕಾಯಿ ಮಾರುಕಟ್ಟೆಗೆ …
Read More »ಗೋಕಾಕ: ಗೋಕಾಕ ನಲ್ಲಿ ಅಲ್ಪ ಸಂಖ್ಯಾತರ ಸಮಾವೇಶ ಅಣ್ಣ ನಿಗೆ ಸಾಥ್ ಕೊಡುವೆ ಎಂದ ಲಖನ ಜಾರಕಿಹೊಳಿ
ಗೋಕಾಕ: ಗೋಕಾಕ ನಲ್ಲಿ ಅಲ್ಪ ಸಂಖ್ಯಾತರ ಸಮಾವೇಶ ಅಣ್ಣ ನಿಗೆ ಸಾಥ್ ಕೊಡುವೆ ಎಂದ ಲಖನ ಜಾರಕಿಹೊಳಿ ಗೋಕಾಕ ನಲ್ಲಿ ರಮೇಶ್ ಹಾಗೂ ಲಖನ ಜಾರಕಿಹೊಳಿ ಅವರ್ ಜಂಟಿ ಸಮಾವೇಶ ಪಕ್ಷೇತರ ಆದ್ರೂ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡುವೆ ಎಂದ ತಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿ ಇದೆ ಅದೇ ರೀತಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರೋದಕ್ಕೆ ಕಾರಣ ವಾಗಿದ್ದೇ ಗೋಕಾಕ ಮಾಜಿ ಮಂತ್ರಿ ಹಾಗೂ …
Read More »ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕಣಬರಗಿ ಚೆಕ್ ಪೋಸ್ಟ್ ನಲ್ಲಿ 1.77 ಲಕ್ಷ ರೂಪಾಯಿ ಹಣ ಜಪ್ತಿ
ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.77 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದೆ. ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣಾ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ಸದರಿ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಜಮೆ ಮಾಡಲಾಗಿದ್ದು, ಪಂಚಾಯತ ಮುಖ್ಯ ಕಾರ್ಯನಿರ್ವಾಹಕರು ಅಧ್ಯಕ್ಷರಾಗಿರುವ ತ್ರಿಸದಸ್ಯ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಲಾಗಿರುತ್ತದೆ. ಚುನಾವಣಾಧಿಕಾರಿ ಅಕ್ರಮ್ ಇಂಫಾಲ್, ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ, ಎಫ.ಎಸ್.ಟಿ. …
Read More »ಯುವಕ್ರಾಂತಿ ರ್ಯಾಲಿಯಲ್ಲಿ ಯುವಕರಿಗೆ ಯೋಜನೆ ಘೋಷಣೆ, ಯುವಕರಿಗೆ ಬಲತುಂಬಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಣ
ಬೆಳಗಾವಿ: ” ಭರವಸೆಗಳನ್ನು ನೀಡಿ, ಯುವಕರಿಗೆ ಉದ್ಯೋಗ ನೀಡದ ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಲು ಯುವಜನತೆ ಮುಂದಾಗಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಕರೆ ನೀಡಿದರು. ಇಲ್ಲಿನ ಸಿಪಿಎಡ್ ವೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರ ನೀಡಿದ ಪೊಳ್ಳು ಭರವಸೆಯಿಂದ ಯುವಕರು ಉತ್ಸಾಹ ಕಳೆದುಕೊಂಡಿದ್ದಾರೆ. ಯುವಕರಿಗೆ ಬಲತುಂಬಲೆಂದೇ ರಾಹುಲ್ ಗಾಂಧಿ ಅವರು ಪಣತೊಟ್ಟಿದ್ದು, ಬೆಳಗಾವಿಯಿಂದ ಯುವಕಾಂತ್ರಿ ರ್ಯಾಲಿ ಮಾಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ ಎಂದರು. …
Read More »ವಿಶ್ವದ ಅತಿ ಉದ್ದದ ರೈಲ್ವೇ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್*
ಹುಬ್ಬಳ್ಳಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದರು. ಸೌತ್ ವೆಸ್ಟರ್ನ್ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಿಶೋರ್ ಅವರು ಹುಬ್ಬಳ್ಳಿ ಜಂಕ್ಷನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳು ಮತ್ತು ಭವಿಷ್ಯದ …
Read More »ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಬಲಿ
ಬೆಳಗಾವಿ: ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರು ಬಲಿಯಾಗಿದ್ದಾರೆ. ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಶು ಬಸಪ್ಪ (14) ಮತರಾದ ಬಾಲಕರು. ಭಾನುವಾರ ಸಂಜೆ 4.30ರ ಹೊತ್ತಿಗೆ ಈ ಬಾಲಕರು ಈಸಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದ. ಆತನನ್ನು ರಕ್ಷಿಸಲು ಯೇಶು ಪ್ರಯತ್ನಿಸಿದ್ದಾನೆ. ಆದರೆ ಇಬ್ಬರೂ ಬದುಕುಳಿಯಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Read More »ಕಾಂಗ್ರೆಸ್ ಮೊದಲ 80ಅಭ್ಯರ್ಥಿ ಗಳ ಪಕ್ಕಾ ಲಿಸ್ಟ್ ಬಹುತೇಕ ಖಚಿತ..?
80 ಅಭ್ಯರ್ಥಿಗಳ ಮೊದಲ ಪಟ್ಟಿ : 1. ಚಿಕ್ಕೋಡಿ – ಗಣೇಶ ಹುಕ್ಕೇರಿ 2. ಯಮಕನಮರಡಿ – ಸತೀಶ್ ಜಾರಕಿಹೊಳಿ 3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್ 4. ಖಾನಾಪುರ – ಅಂಜಲಿ ನಿಂಬಾಳ್ಕರ್ 5. ಬೈಲಹೊಂಗಲ : ಮಹಾಂತೇಶ 6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ 7. ಬಬಲೇಶ್ವರ : ಎಂ. ಬಿ. ಪಾಟೀಲ 8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್ 9. ಇಂಡಿ : …
Read More »ಫಕೀರನ ವೇಷದಲ್ಲಿ ಬಂದು ಮನೆಗೆ ಕನ್ನ ಹಾಕುತ್ತಿದ್ದ ಖದೀಮರು ಅಂದರ್; !
ಹೊಸಕೋಟೆ: ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖತರ್ನಾಕ್ಕಳ್ಳರು ಫಕೀರರ ವೇಷ ಹಾಗೂ ಪಾಲಿಶ್ ಮಾಡುವ ನೆಪದಲ್ಲಿ ಮನೆಗಳಿಗೆ ಬಂದು ಕನ್ನ ಹಾಕುತ್ತಿದ್ದವನ್ನು ಬಂಧಿಸಿದ್ದಾರೆ. ಈ ಮೂರು ಜನ ಅಂತರ್ರಾಜ್ಯ ಕುಖ್ಯಾತ ಕಳ್ಳರನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ ಒಟ್ಟು 32 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರನ್ನು ಆರೋಪಿಗಳನ್ನು ಸೈಯದ್ ಆಲಿ, ಭರತ್ ಕುಮಾರ್, ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಈ ಖದೀಮರು ಫಕೀರನ ವೇಶ ಹಾಕಿಕೊಂಡು …
Read More »
Laxmi News 24×7