ಬೆಂಗಳೂರು, ಡಿಸೆಂಬರ್ 9: ಗಡಿ ವಿವಾದದಲ್ಲಿ ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರು ಬಸವರಾಜ ಬೊಮ್ಮಾಯಿ ಅವರು, ಈ ಹಿಂದೆಯೂ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ …
Read More »Y.S.R. ಪಕ್ಷ ಸೇರ್ತಾರಾ ಜನಾರ್ಧನ ರೆಡ್ಡಿ…!
ಕೊಪ್ಪಳ- ಸದ್ಯ ರಾಜಕೀಯ ವಿಶ್ರಾಂತಿಯಲ್ಲಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಚರ್ಚೆಯಂತೂ ಶುರುವಾಗಿದೆ. ಈಗಾಗಲೇ ಅನೇಕ ಬಾರಿ ಬಿಜೆಪಿ ವಿರುದ್ಧ ಮಾತನಾಡಿದ್ದ ಜನಾರ್ಧನ ರೆಡ್ಡಿ, ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಜನಾರ್ಧನ ರೆಡ್ಡಿ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಹೌದು, ಬಿಜೆಪಿಗೆ ಮತ್ತೆ ಮರಳೋದಿಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡ್ತಾ ಇಲ್ಲವಂತೆ. …
Read More »ರಾಜ್ಯ ವಿಧಾನಸಭೆ ಚುನಾವಣಾ ವಿಶ್ಲೇಷಣೆ: ಕಾಂಗ್ರೆಸ್ ಪಕ್ಷಕ್ಕೆ 55-60 ಸ್ಥಾನ ಖಚಿತ; ಬಿಜೆಪಿ 70-75 ಕ್ಷೇತ್ರ ಗೆಲ್ಲಲು ಶಕ್ತ; 15-20ಕ್ಕೆ ಜೆಡಿಎಸ್ ತೃಪ್ತ!
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಕನಸು ನನಸಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್ ಕೇವಲ 55 ರಿಂದ 60 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯ ಎಂದು ವಿಶ್ಲೇಷಣೆ ತಿಳಿಸಿದೆ. ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಕನಸು ನನಸಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್ ಕೇವಲ 55 ರಿಂದ 60 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯ …
Read More »ವೇದಿಕೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಶ್ರೀ ರಾಮುಲು..!?
ಬಳ್ಳಾರಿ: ಬಾಯ್ತಪ್ಪಿ ಎಲ್ಲರೂ ಒಮ್ಮೆಯಾದರೂ ಏನನ್ನಾದರು ಮಾತನಾಡಿರುತ್ತಾರೆ. ನಾಯಕರಾದವರು ಬಾಯ್ತಪ್ಪಿ ಮಾತನಾಡಿದರೆ ಮುಗಿದೇ ಹೋಯಿತು! ಎದುರಾಳಿ ಪಕ್ಷದವರು, ವಿರೋಧಿಗಳು, ಎಲ್ಲರೂ ಸೇರಿ ಇದನ್ನು ಖಂಡಿಸುತ್ತಾರೆ. ಆದರೆ ಇಲ್ಲಿ ಸಚಿವ ಶ್ರೀರಾಮುಲು, ವೇದಿಕೆ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಉಪಸ್ಥಿತರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಅಷ್ಟೇ ಸಾಲಲ್ಲ ಎಂದು ತಾವು ಯುವಕನಾಗಿದ್ದಾಗ ಮಾಡುತ್ತಿದ್ದ ಗೂಂಡಾಗಿರಿಯ ಬಗ್ಗೆಯೂ ಹೇಳಿದ್ದಾರೆ. ಸಚಿವ ಶ್ರೀ ರಾಮುಲು, ಬಳ್ಳಾರಿಯ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಉದ್ದೇಶಿಸಿ …
Read More »ಖಾನಾಪೂರ ತಾಲೂಕಿನ ರಾಮಗುರವಾಡಿ ಗ್ರಾಮದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ
ಖಾನಾಪೂರ ತಾಲೂಕಿನ ರಾಮಗುರವಾಡಿ ಗ್ರಾಮದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಅದು ಎಲ್ಲಿ ಅಂತೀರಾ ಖಾನಾಪುರ ತಾಲೂಕಿನ ರಾಮಗುರವಾಡಿ ಗ್ರಾಮದಲ್ಲಿ 2023 ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕಲಾಗಿದೆ. ಇದರ ಕುರಿತು ಗ್ರಾಮಸ್ಥರು ಸೂಚನಾ ಫಲಕ ಅಳವಡಿಸುವ ಮೂಲಕ ಯಾವುದೇ ಪಕ್ಷ ಅಥವಾ ಸ್ವತಂತ್ರ ವ್ಯಕ್ತಿಗಳು ಚುನಾವಣಾ ಪ್ರಚಾರಕ್ಕಾಗಿ ಗ್ರಾಮದಲ್ಲಿ ಪ್ರಚಾರ ಅಥವಾ ಸಭೆ ನಡೆಸಬಾರದು, ಖಾನಾಪುರ ತಾಲೂಕಿನ ಶಾಸಕರು ಹಾಗೂ ಇತರೆ ಪಕ್ಷಗಳ …
Read More »535 ನೇ ಕನಕದಾಸ ಜಯಂತಿ ಉತ್ಸವ ಸವದತ್ತಿ ಪಟ್ಟಣದಲ್ಲಿ ಉದ್ಘಾಟಿಸಿದರು.
ಸವದತ್ತಿ ಪಟ್ಟಣದಲ್ಲಿ ಕನಕದಾಸ ಜಯಂತಿ ಉತ್ಸವ ಸಮಿತಿ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ ಸಮಿತಿ ಸವದತ್ತಿ ವತಿಯಿಂದ ಆಯೋಜಿಸಿದ ದಾಸ ಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಅವರ ಜೊತೆಯಾಗಿ ಉದ್ಘಾಟಿಸಿದರು. ದಾಸ ಶ್ರೇಷ್ಠ ಕನಕದಾಸರ ವೈಚಾರಿಕ ಚಿಂತನೆ, ಸಾಮಾಜಿಕ ಕಳಕಳಿ, ಸಮ ಸಮಾಜ ನಿರ್ಮಾಣದ ಆಶಯ ಹಾಗೂ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ತೋರಿದ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿವೆ. …
Read More »ಕೊರೆಯುವ ಚಳಿಗೆ ವೃದ್ಧ ಬಲಿ
ಕೊರೆಯುವ ಚಳಿಗೆ ವೃದ್ಧ ಬಲಿಯಾಗಿರುವ ಘಟನೆ ಸಂಭವಿಸಿದೆ. ಕಳೆದ ಮೂರು ದಿನಗಳಿಂದ ಕೊರೆಯುವ ಚಳಿಯಿಂದ ವಿಜಯಪುರ ಜಿ. ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭೀಮಪ್ಪ ಹಾದಿಮನಿ (75) ಎಂ ವೃದ್ಧ ಸಾವನ್ನಪ್ಪಿದ್ದಾನೆ. ಪಟ್ಟಣದ ನೇತಾಜಿ ನಗರ ನಿವಾಸಿಯಾಗಿರುವ ಭೀಮಪ್ಪ ನವರತ್ನ ಬಾರ್ ಎದುರು ವೃದ್ಧನ ಶವ ಪತ್ತೆಯಾಗಿದೆ. ಕೈ ಮುಷ್ಟಿ ಮಾಡಿ ಹಿಡಿದು ಬೊರಲು ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »ರಸ್ತೆಗೆ ಇಳಿದು ಸಂಚಾರ ಸೇವೆ ಸಲ್ಲಿಸಬೇಕಿದ್ದ ಬಸ್ಸುಗಳು ಈಗ ಡಿಪೋದಲ್ಲಿಯೇ ನಿಂತು ಪ್ರಯಾಣಿಕ ಪರದಾಡುತ್ತಿದ್ದಾರೆ.
ಅದು ಉತ್ತರ ಕರ್ನಾಟಕದ ಜನರಿಗೆ ಜೀವನಾಡಿ ಆಗಬೇಕಿದ್ದ ಸಾರಿಗೆ ಸಂಸ್ಥೆ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಜನರ ಜೀವ ಹಿಂಡಲು ಮುಂದಾಗಿದೆ. ದಿನದಿಂದ ದಿನಕ್ಕೆ ಜನದಟ್ಟಣೆ, ಜನರ ಸಂಚಾರ ಹೆಚ್ಚಾಗುತ್ತಿದೆ. ಜನರಿಗೆ ಅವಶ್ಯಕ ಇರುವ ಸಂದರ್ಭದಲ್ಲಿಯೇ ಸಾರಿಗೆ ಸಂಸ್ಥೆ ಬೇರೆ ಬೇರೆ ನೆಪವೊಡ್ಡಿ ಆಟ ಆಡುತ್ತಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುವುದು ಮಾತ್ರವಲ್ಲದೆ ಜನಜೀವನದ ಜೊತೆಗೆ ಆಟವಾಡುತ್ತಿದೆ. ರಸ್ತೆಗೆ ಇಳಿದು …
Read More »ನಮಸ್ಕಾರ್ ರೀ. ನಾನ ಎಸ್ಪಿ ಮಾತಾಡಾತ್ತೇನಿ ಹೇಳ್ರಿ.. ಎಂದು ಮಾತನಾಡುತ್ತಲೇ ಬೆಳಗ್ಗೆ ಸರಿಯಾಗಿ 11 ಗಂಟೆಗೆ ಫೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಿದ ಎಸ್ಪಿ ಡಾ. ಸಂಜೀವ ಪಾಟೀಲ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಎರಡನೇ ಹಾಗೂ ಕೊನೆಯ ಶನಿವಾರದಂದು ನಡೆಸುತ್ತಿರುವ ಫೋನ್ ಇನ್ ಮೂರನೇ ಕಾರ್ಯಕ್ರಮದಲ್ಲಿಯೂ ಜನರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಎಸ್ಪಿ ಸ್ಪಂದನೆ ಮಾಡಿದ್ದಕ್ಕೆ ಜನರು ಕೃತಜ್ಞತೆ ತಿಳಿಸಿದರು. ನಮಸ್ಕಾರ್ ರೀ. ನಾನ ಎಸ್ಪಿ ಮಾತಾಡಾತ್ತೇನಿ ಹೇಳ್ರಿ.. ಎಂದು ಮಾತನಾಡುತ್ತಲೇ ಬೆಳಗ್ಗೆ ಸರಿಯಾಗಿ 11 ಗಂಟೆಗೆ ಫೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಿದ ಎಸ್ಪಿ …
Read More »ರಜೆಗಾಗಿ ಮನೆಯಕಡೆಗೆ ಬರುತ್ತಿದ್ದ ನಿಪ್ಪಾಣಿಯ ಯೋಧ ರೈಲು ಅಪಘಾತದಲ್ಲಿ ಸಾವು
ನಿಪ್ಪಾಣಿಯ ಯೋಧ ರಜೆಗಾಗಿ ಮನೆಯಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ರೈಲು ಅಪಘಾತದಲ್ಲಿ ರಾಜೇಂದ್ರ ಪಾಂಡುರಂಗ್ ಕುಂಬಾರ್ ಸಾವನ್ನಪ್ಪಿದ ಉತ್ತರ ಪ್ರದೇಶ ದಲ್ಲಿನ ತುಂಡ್ಲಾದಲ್ಲಿ ನಡೆದಿದೆ ಹೌದು, ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಪ್ಪಾಣಿ ನಗರದ ಸಾಖರವಾಡಿಯ ಭಾರತೀಯ ಸೇನಾ ಯೋಧ ರಾಜೇಂದ್ರ ಪಾಂಡುರಂಗ್ ಕುಂಬಾರ್ (45) ಮೃತಪಟ್ಟಿದ್ದಾರೆ. ಏತನ್ಮಧ್ಯೆ, ಕುಂಬಾರನ ಆಕಸ್ಮಿಕ ಸಾವಿನಿಂದ, ನಗರ ಮತ್ತು ಸಾಖರವಾಡಿ ಪ್ರದೇಶದಲ್ಲಿ ಶೋಕ ಮಡುಗಟ್ಟಿದ್ದು, ಶನಿವಾರ ಸಂಜೆ ಅಥವಾ ರವಿವಾರ …
Read More »