Breaking News

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಗಣತಿ ವಿಷಯದಲ್ಲಿ ಯಾವುದೇ ಸದುದ್ದೇಶ ಇಲ್ಲ : ಬಿ.ವೈ. ವಿಜಯೇಂದ್ರ

ಬೆಂಗಳೂರು: ಜಾತಿ ಗಣತಿ ಮೂಲಕ ಸಮ ಸಮಾಜದ ನಿರ್ಮಾಣದ ಕನಸು ನರೇಂದ್ರ ಮೋದಿ ಅವರ ಸರ್ಕಾರಕ್ಕಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಗಣತಿ ವಿಷಯದಲ್ಲಿ ಯಾವುದೇ ಸದುದ್ದೇಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಹಿಂದುಳಿದ ವರ್ಗದ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ದುರುದ್ದೇಶ ಇದೆ. ಕಾಂಗ್ರೆಸ್ಸಿನವರು ಮತ್ತು …

Read More »

ಶಕ್ತಿ ನಗರದಲ್ಲಿ ಮಾಕ್ ಡ್ರಿಲ್ ಮಾಡಲಿದ್ದೇವೆ : ಡಿಸಿ ನಿತೀಶ್ ಕೆ

ರಾಯಚೂರು : ಕೇಂದ್ರದ ಗೃಹ ಇಲಾಖೆಯಿಂದ ಮಾಕ್ ಡ್ರಿಲ್​ಗೆ ಆದೇಶ ಬಂದಿರುವ ಹಿನ್ನೆಲೆ ನಾಳೆಯೇ ಮಾಕ್ ಡ್ರಿಲ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ‌ನಿತೀಶ್ ಕೆ. ತಿಳಿಸಿದ್ದಾರೆ. ಈ ಕುರಿತು ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಬೆಳಗ್ಗೆ ಕೇಂದ್ರ ಸರ್ಕಾರದ ಹೋಂ ಸೆಕ್ರಟರಿಯವರು, ನಮ್ಮ ರಾಜ್ಯದ ಚೀಫ್ ಸೆಕ್ರಟರಿಯವರು, ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಈಗಾಗಲೇ ವಿಡಿಯೋ ಸಂವಾದ ಮಾಡಿ ಇದರ ಬಗ್ಗೆ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಮಾಕ್ …

Read More »

ಆಟವಾಡುತ್ತಿದ್ದ 5 ವರ್ಷದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟಣೆ ನಡೆದಿದೆ. ತುಮಕೂರಿನಲ್ಲಿ ಈ ದುರಂತ ಸಂಭವಿಸಿದೆ. ಚಂದ್ರಯ್ಯ ಎಂಬುವವರ ಮಗ ಪೋಷಕ ಶೆಟ್ಟಿ (5) ಮೃತ ಬಾಲಕ. ಮನೆ ಮುಂದಿನ ತಂತಿ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿತ್ತು. ಬಾಲಕ ತಂತಿ ಬೇಲಿ ಮುಟ್ಟಿದ್ದರಿಂದ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Read More »

ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿ

ನವದೆಹಲಿ: ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ. ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ ಮಹತ್ವದ ಸುದ್ದಿಗೋಷ್ಟಿ ಕರೆದಿದೆ. ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಭಾರತ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಮೂರು ಉಗ್ರ ಸಂಘಟನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಜೈಶ್ ಎ ಮೊಹ್ಮದ್ ಉಗ್ರನ ನೆಲೆಯಾಗಿದ್ದ ಸುಬಾನ್ ಅಲ್ಲಾ …

Read More »

ಕಾರಿನ ಟೈರ್​ ಸ್ಫೋಟಗೊಂಡು ಭೀಕರ ರಸ್ತೆ ಅಪಘಾತ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಹಾವೇರಿ: ಚಲಿಸುತ್ತಿದ್ದ ಇನ್ನೋವಾ ಕಾರಿನ ಟೈರ್ ಬ್ಲಾಸ್ಟ್​ ಆದ ಪರಿಣಾಮ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತನನ್ನು 46 ವರ್ಷದ ಕುರಿಯನ್ ಚಾಕೊ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಾಮಿಯಲ್ ಚಾಕೊ, ಜುನಾತನ್ ಫ್ರಾನ್ಸ್ ಎಂದು ಗುರುತಿಸಲಾಗಿದೆ. ಮೃತ ಕುರಿಯನ್ ಚಾಕೊ ಮತ್ತು ಗಾಯಾಳುಗಳು ಕೇರಳದ …

Read More »

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಯಲ್ಲಿ 600 ಎಕರೆ ಭೂಸ್ವಾಧೀನ

ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಯಲ್ಲಿ 600 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಟೆಂಡರ್ ಕರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಬೆಳಗಾವಿ ಜಿಲ್ಲೆಯ 600 ಏಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ. ಬೆಳಗಾವಿ-ಧಾರವಾಡ ಮಧ್ಯೆ ಸದ್ಯ ಲೋಂಡಾ ಮಾರ್ಗವಾಗಿ ರೈಲು …

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದ ಬಳಸಿದ ಕೇಂದ್ರ ಕಾರಾಗೃಹದ ವಾರ್ಡನ್‌ ಮಧುಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮೈಸೂರು ನಗರ ಕೇಂದ್ರ ಕಾರಾಗೃಹದ ವಾರ್ಡನ್‌ ಮಧುಕುಮಾರ್ ಅವರನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕುಡಿದ ಮತ್ತಿನಲ್ಲಿ ಮಧುಕುಮಾರ್ ಅವಾಚ್ಯ ಪದ ಬಳಸಿ ರೆಕಾರ್ಡ್ ಮಾಡಿದ್ದ 5.33 ನಿಮಿಷಗಳ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಗರಂ ಆದ ಘಟನೆ ಉಲ್ಲೇಖಿಸಿ ಏಪ್ರಿಲ್ 28ರಂದು ಮಧುಕುಮಾರ್ ವಿಡಿಯೋ …

Read More »

ಯಾಕಪ್ಪ ನಮ್ಮಲ್ಲಿ ಹೆಣ್ಣು ಗಂಡು ಸಿಗಲ್ವಾ ಪಾಕಿಸ್ತಾನದವರನ್ನೇಕೆ ಮದುವೆಯಾಗ್ತೀರಿ??

ಯಾಕಪ್ಪ ನಮ್ಮಲ್ಲಿ ಹೆಣ್ಣು ಗಂಡು ಸಿಗಲ್ವಾ ಪಾಕಿಸ್ತಾನದವರನ್ನೇಕೆ ಮದುವೆಯಾಗ್ತೀರಿ?? ಪಾಕಿಸ್ತಾನದ ವಿರುದ್ಧ ಇನ್ನು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು; ಸಂಪೂರ್ಣ ಮೆಟ್ಟಿಗೆ ಹಚ್ಚಬೇಕು ಪಿಒಕೆ ಖಾಲಿ ಮಾಡಿಸಿ ; ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪಾಕಿಸ್ತಾನದ ವಿರುದ್ಧ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸಂಪೂರ್ಣ ಮೆಟ್ಟಿಗೆ ಹಚ್ಚಬೇಕು. ಪಿಒಕೆ ಖಾಲಿ ಮಾಡಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬಾಗಲಕೋಟೆಯಲ್ಲಿ ಸೋಮವಾರ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಪೆಹಲ್’ಗಾಮ್ …

Read More »

ಕಾರು ಹಾಗೂ ಲಾರಿ ನಡುವೆ ಅಪಘಾತ ಒಂದೇ ಕುಟುಂಬದ 5 ಜನ ದುರ್ಮರಣ

ಹುಬ್ಬಳ್ಳಿ: ಕಾರು ಹಾಗೂ ಲಾರಿ ನಡುವೆ ಅಪಘಾತ ಒಂದೇ ಕುಟುಂಬದ 5 ಜನ ದುರ್ಮರಣ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿಯ ಇಂಗಳಹಳ್ಳಿ ಕ್ರಾಸ್ ಬಳಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಶ್ವೇತಾ (29), ಅಂಜಲಿ (26),ಸಂದೀಪ್ (26), ವಿಠ್ಠಲ್ (55), ಶಶಿಕಲಾ (40) ಮೃತ ದುರ್ದೈವಿಗಳು. ಬಾಗಲಕೋಟದಿಂದ ಸಾಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ …

Read More »

ಸಿ.ಟಿ ರವಿ – ಹೆಬ್ಬಾಳ್ಕರ್ ಪ್ರಕರಣ: ನೀತಿ ನಿರೂಪಣಾ ಸಮಿತಿಯ ವರದಿ ಬಂದ ಮೇಲೆ ತೀರ್ಮಾನ-ಸಭಾಪತಿ ಬಸವರಾಜ್ ಹೊರಟ್ಟಿ

ಸಿ.ಟಿ ರವಿ – ಹೆಬ್ಬಾಳ್ಕರ್ ಪ್ರಕರಣ: ನೀತಿ ನಿರೂಪಣಾ ಸಮಿತಿಯ ವರದಿ ಬಂದ ಮೇಲೆ ತೀರ್ಮಾನ-ಸಭಾಪತಿ ಬಸವರಾಜ್ ಹೊರಟ್ಟಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಅಶ್ಲೀಲ ಪದ ಬಳಕೆ ಪ್ರಕರಣವನ್ನು ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಿದ್ದು ಅದರ ವರದಿ ಬಂದಮೇಲೆ ನಿರ್ಣಯ ಪ್ರಕಟಿಸಲಾಗುವುದೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ …

Read More »