Breaking News

ಛತ್ರಪತಿ ಶಿವಾಜಿ, ಹಿಂದೂ ದೇವತೆಗಳ ಅಶ್ಲೀಲ ಚಿತ್ರಣ: ಜಾಲತಾಣದಲ್ಲಿ ಪೋಸ್ಟ್‌

ಬೆಳಗಾವಿ: ಛತ್ರಪತಿ ಶಿವಾಜಿ ಹಾಗೂ ಹಿಂದೂ ದೇವತೆಗಳ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಚಿತ್ರಗಳು ಮಂಗಳವಾರ ನಗರದ ಹಲವರ ಮೊಬೈಲ್‌ಗಳಿಗೂ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್‌ ಜಿಂದಾಬಾದ್‌ 786, ಕಿಂಗ್‌ ಕಿ ಜಾನ್, ಇಟ್ಸ್‌ ಅರ್ಮಾನ್‌ ಟೈಗರ್‌, ಆರ್‌.ಎಕ್ಸ್‌.ಇಮ್ರಾನ್, ಪ್ರಸಾದ್… ಎಂಬ ಹೆಸರಿನ ಖಾತೆಗಳಲ್ಲಿ ಈ ಪೋಸ್ಟರ್‌ಗಳು ಅಪ್ಲೋಡ್‌ ಆಗಿವೆ. ಕೆಲವು ಎರಡು ದಿನಗಳ ಹಿಂದೆ ಅಪ್ಲೋಡ್‌ ಮಾಡಿದ್ದು, ಇನ್ನು ಕೆಲವನ್ನು ಮಂಗಳವಾರವೇ ಹಾಕಲಾಗಿದೆ. ಈ …

Read More »

ಹಿರೇಬಾಗೇವಾಡಿ: ಟ್ರ್ಯಾಕ್ಟರ್‌ಗೆ ಟಿಪ್ಪರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು

ಹಿರೇಬಾಗೇವಾಡಿ (ಬೆಳಗಾವಿ ತಾ): ಸಮೀಪದ ಸುವರ್ಣ ವಿಧಾನಸೌಧದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಟ್ರ್ಯಾಕ್ಟರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲ್ಲೂಕಿನ ಹಲಗಾ ಗ್ರಾಮದ ಸಂತೋಷ ಮಹಾವೀರ ಹುಡೇದ (23) ಮೃತಪಟ್ಟವರು.   ಸುವರ್ಣ ವಿಧಾನಸೌಧದ ಎದುರಿನ ಕಮಕಾರಟ್ಟಿ ರಸ್ತೆಯಲ್ಲಿ ಖಡಿ ತರಲು ಟ್ರ್ಯಾಕ್ಟರ್ ಹೊರಟಿತ್ತು. ಖಡಿ ತುಂಬಿಕೊಂಡು ಬಂದ ಟಿಪ್ಪರ್ ವಾಹನ ಟ್ರ್ಯಾಕ್ಟರನ್ನು ಹಿಂದಿಕ್ಕುವ ಭರದಲ್ಲಿ ಎರಡೂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿತು. …

Read More »

ಚುನಾವಣೆ ನಡೆಯುವುದು ಧಮ್‌, ತಾಕತ್‌ ಮೇಲಲ್ಲ ಅಭಿವೃದ್ಧಿ ಮೇಲೆ: ಬಿಸಿ ಪಾಟೀಲ್

ಹಾವೇರಿ: ಇಂದು ಹಿರೇಕೇರೂರು ಕ್ಷೇತ್ರದಲ್ಲಿ 461 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದೇವೆ. 38 ಕೋಟಿ ರೂಪಾಯಿ ಮಡ್ಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡುತ್ತಾ ಇದ್ದೇವೆ. ಇದರಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗುತ್ತಿದ್ದಾರೆ ಎಂದು ಸಚಿವ ಬಿಸಿ ಪಾಟೀಲ್‌ ಹೇಳಿದರು.   ಹಿರೇಕೇರೂರಿನಲ್ಲಿ ಮಾತನಾಡಿದ ಅವರು, 2018 ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ತಾಲೂಕಿಗೆ 6 ನೀರಾವರಿ ಯೋಜನೆ ತಂದಿದ್ದೇನೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು …

Read More »

ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

  *ವಡೇರಹಟ್ಟಿ (ಮೂಡಲಗಿ)-* ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಹಮ್ಮಿಕೊಂಡಿದ್ದ ಮತಗಟ್ಟೆ ಶಕ್ತಿಕೇಂದ್ರ, ಪೇಜ್ …

Read More »

ಮಹದಾಯಿ ನದಿ ನೀರು ತಿರುಗಿಸುವುದರಿಂದ ಜನಜೀವನದ ಮೇಲೆ ಪರಿಣಾಮ: ಮಧು ಗಾಂವಕರ್

ಪಣಜಿ: ಕರ್ನಾಟಕದ ಕಳಸಾ ಉಪನದಿಯಾದ ಮಹದಾಯಿಯನ್ನು ತಿರುಗಿಸುತ್ತಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರವಾದಿ ಮಧು ಗಾಂವಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು- ಮಹದಾಯಿಯ ಉಪನದಿಯಾದ ಹಲ್ತಾರಾದಲ್ಲಿ ಕರ್ನಾಟಕ ಅಣೆಕಟ್ಟು ಅಥವಾ ಬ್ಯಾರೇಜ್ ನಿರ್ಮಿಸಿದರೆ, ಈ ಭಾಗದಿಂದ ಬರುವ ನೀರಿಗೆ ತೊಂದರೆಯಾಗುತ್ತದೆ. ನೀರು ಕಡಿಮೆಯಾದರೆ ಭವಿಷ್ಯದಲ್ಲಿ ಗೋವಾದ ವಜರಾ-ಸಕಾಲ ಜಲಪಾತ ಕಣ್ಮರೆಯಾಗುತ್ತದೆ. ಏಕೆಂದರೆ ಹಲ್ತಾರ್ ನಿಂದ ಬರುವ ನೀರು ವಿರ್ಡಿ ಪ್ರದೇಶಕ್ಕೆ ಬರುತ್ತದೆ. ಇದು ಕಟ್ಟಿಕಾ …

Read More »

ಮಳೆಯಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ದಾನಿಗಳಿಂದಲೇ ನಿರ್ಮಾಣವಾಗುತ್ತಿದೆ ಸೂರು

ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡಿನಲ್ಲಿ ಮಳೆಯಿಂದ ವೃದ್ದೆಯ ಬಿದ್ದ ಮನೆಗೆ ಸರ್ಕಾರದಿಂದ ಜನಪ್ರತಿನಿಧಿಗಳಿಂದ ಸಿಗದ ನೆರವು ಹೆಸರು ಹೇಳಲಿಚ್ಚಸದ ದಾನಿಗಳಿಂದ ಸಿಕ್ಕಿದ್ದು ಮನೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿರುವ ಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.   ಮನೆ ಮನೆಯಲ್ಲಿ ಮುಸುರಿ ತಿಕ್ಕಿಕೊಂಡು ಜೀವನೋಪಾಯ ಮಾಡಿಕೊಂಡಿದ್ದ ನೀಲಮ್ಮ ಹಾಬಲಕಟ್ಟಿ ವಯೋವೃದ್ದೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಮನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮನೆ ಮಳೆಗೆ ಮನೆ ಬಿದ್ದಿದ್ದು ಮಗ, ಸೊಸೆ ಹಾಗೂ ಈ ವೃದ್ದೆ ಸಮೇತ …

Read More »

ಫೆ.13ರಿಂದ ಬೆಂಗಳೂರಲ್ಲಿ ಏರ್‌ ಶೋ: C.M.ಬೊಮ್ಮಾಯಿ

ಕಲಬುರಗಿ: ಬೆಂಗಳೂರಿನ ಯಲಹಂಕದಲ್ಲಿ ಫೆ.13ರಿಂದ 17ರವರೆಗೆ “ಏರೋ ಇಂಡಿಯಾ’ ಏರ್‌ ಶೋ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅತಿದೊಡ್ಡ ಏರ್‌ ಶೋ ಮತ್ತು ಏರ್‌ ಸ್ಪೇಷ್‌ ಎಕ್ಸಿಬಿಷನ್‌ ಆಯೋಜಿಸಲಾಗುತ್ತಿದೆ. ಸ್ಪೇಸ್‌ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. 1996ರಿಂದಲೂ ಕರ್ನಾಟಕ ಏರ್‌ ಶೋಗೆ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯವಾಗಿದೆ ಎಂದರು. ಬಜೆಟ್‌ಗೆ ಸಿದ್ಧತೆಗಳು …

Read More »

ಸಿದ್ದು ಮಾಡಿದ ಪಾಪದಿಂದ ನಾನು ಕಾಂಗ್ರೆಸ್‌ ಬಿಟ್ಟೆ: ಸುಧಾಕರ್‌

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾ ದಳದಲ್ಲಿದ್ದು ಎಲ್ಲ ಬಗೆಯ ಅಧಿಕಾರ ಅನುಭವಿಸಿ, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು. ತಾಲೂಕಿನ ಅಜ್ಜವಾರದಲ್ಲಿ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ …

Read More »

74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧ

74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧಗೊಳ್ಳುತ್ತಿದೆ. ಈ ಬಾರಿ ಹಲವು ಪ್ರಥಮಗಳು ಇರಲಿವೆ. ಗನ್‌ ಸೆಲ್ಯೂಟ್‌ಗೆ ಬ್ರಿಟಿಷರ ಕಾಲದ ಗನ್‌ ಬದಲಾಗಿ ದೇಶೀಯವಾಗಿ ನಿರ್ಮಾಣಗೊಂಡ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇದೆಲ್ಲಾ ಮೊದಲು * ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಅಗ್ನಿವೀರರ ಮೊದಲ ತಂಡ * ಒಂಟೆಗಳ ತುಕಡಿಯ ಭಾಗವಾಗಿ ಮಹಿಳಾ ಯೋಧರು * ನೌಕಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್‌ ನೇತೃತ್ವ ಮೊದಲ ಮತ್ತು ಕೊನೆಯ ಹಾರಾಟ ! …

Read More »

ಬೆಳಗಾವಿ: 26, 27ರಂದು ಸಿರಿಧಾನ್ಯ-ಸಾವಯವ ಮೇಳ

ಬೆಳಗಾವಿ: 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಜ. 26 ಹಾಗೂ 27ರಂದು ಸಿರಿಧಾನ್ಯ ಮತ್ತು ಸಾವಯುವ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ನಿತೇಶ ಪಾಟೀಲ ತಿಳಿಸಿದರು.   ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಸರದಾರ ಹೈಸ್ಕೂಲ್‌ ಮೈದಾನದಲ್ಲಿ ಜ.26 ಹಾಗೂ 27 ರಂದು ಸಿರಿಧಾನ್ಯ ಮೇಳ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜ.26ರಂದು …

Read More »