Breaking News

ಪ್ರಮೋದ್ ಮುತಾಲಿಕ್ ಗೆ ಸಿಎಂ ಟಾಂಗ್

ವಿಜಯಪುರ; ; ರಾಜ್ಯದ ಇತಿಹಾಸದಲ್ಲಿ 5 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಜಯಪುರದ ಸೈನಿಕ್ ಸ್ಕೂಲ್ ಹೆಲಿಪ್ಯಾಡ್‍ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಕಳೆದ ಬಜೆಟ್ ಘೋಷಣೆ ಗಳ ಪೈಕಿ ಕೇವಲ 10 ರಷ್ಟು ಕಾಮಗಾರಿಗಳು ಜಾರಿಯಾಗಿವೆ 3 ಲಕ್ಷ ಕೋಟಿ ಸಾಲ ಇದೆ ಎಂದಿರು. ಬಜೆಟ್ …

Read More »

ವಾಣಿ ಜಯರಾಂ ಖ್ಯಾತ ಹಿನ್ನೆಲೆ ಗಾಯಕಿ ಅನುಮಾನಾಸ್ಪದ ಸಾವು

ಚೆನ್ನೈ: ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಚೆನ್ನೈನ ನಿವಾಸದಲ್ಲಿ ವಾಣಿ ಜಯರಾಂ ಅವರ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ. ವಾಣಿಜಯರಾಂ ಅವರಿಗೆ 77 ವರ್ಷ ವಯಸ್ಸಾಗಿತ್ತು. ಕನ್ನಡ, ತೆಲುಗು,ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ವಾಣಿ ಜಯರಾಂ ಇದೀಗ ಶವವಾಗಿ ಪತ್ತೆಯಾಗಿರುವುದು ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. 2023ರ ಗಣರಾಜ್ಯೋತ್ಸವದ ದಿನದಂದು …

Read More »

ಆಂಬುಲೆನ್ಸ್ ಹಾಗೂ ಟ್ರ್ಯಾಕ್ಟರ್ ಭೀಕರ ಅಪಘಾತ; ರೋಗಿ ದುರ್ಮರಣ

ಬೆಳಗಾವಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಆಂಬ್ಯುಲೆನ್ಸ್ ನಡುವೆ ಸಂಭವಿದ ಭೀಕರ ಅಪಘಾತದಲ್ಲಿ ರೋಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬಳಿ ನಡೆದಿದೆ. ಅಕ್ಬರಸಾಬ್ ನೇಸರಗಿ (28) ಮೃತ ದುರ್ದೈವಿ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಅಕ್ಬರ್ ಸಾಬ್ ನೇಸರಗಿಯನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಾಗೂ ಆಂಬುಲೆನ್ಸ್ ಡಿಕ್ಕಿಹೊಡೆದಿದ್ದು, ಅದಾಗಲೇ ಅಪಘಾತದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅಕ್ಬರಸಾಬ್ ಕೊನೆಯುಸಿರೆಳೆದಿದ್ದಾನೆ. ಉಳಿದ …

Read More »

 ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ 3 ಜನರ ಬಂಧನ

ಸವದತ್ತಿ: ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸವದತ್ತಿ ಪೊಲೀಸರು ಸರಣಿ ದಾಳಿ ಮುಂದುವರಿಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ ಈವರೆಗೆ 5 ಪ್ರಕರಣ ದಾಖಲಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದಾಳಿ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಸುತ್ತಮುತ್ತ ಮತ್ತು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ …

Read More »

ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ

ಬೆಳಗಾವಿ: ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ ಕೂಡಿ ಬಂದಿದೆ. ಫೆ. 6ರಂದು ಮೇಯರ್‌- ಉಪ ಮೇಯರ್‌ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸ್ಮಾರ್ಟ್‌ಟಿಸಿಯ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.   ಚುನಾವಣಾ ಪ್ರಕ್ರಿಯೆಗೆ ಕೋರ್ಟ್‌ ಅನುಮತಿ ನೀಡಿ ಎರಡು ವಾರಗಳಾಗಿದ್ದು, ಅಂದಿನಿಂದಲೂ ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಯಾರಿಗೆ ಕುರ್ಚಿ ಎಂಬುದನ್ನು ಈಗಲೇ ಘೋಷಣೆ …

Read More »

ಬೆಳಗಾವಿ: ಜಿ.ಪಂ ಕಚೇರಿ ಮುಂದೆ ಹಿರಿಯರ ಧರಣಿ

ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಆಯಾಗಳ ಬೇಸಿಗೆ ರಜೆಯ ಬಾಕಿ ವೇತನ ನೀಡಬೇಕು ಹಾಗೂ ತಡೆಹಿಡಿಯಲಾದ ಆರು ತಿಂಗಳ ವೇತನವನ್ನೂ ಕೊಡಮಾಡಬೇಕು ಎಂದು ಆಗ್ರಹಿಸಿ, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಹಿರಿಯರು ಜಿಲ್ಲಾ ಪಂಚಾಯಿತಿ ಮುಂದೆ ಶುಕ್ರವಾರ ಇಡೀ ದಿನ ಧರಣಿ ನಡೆಸಿದರು.   ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ನೇತೃತ್ವದಲ್ಲಿ ಸೇರಿದ ಹಲವು ಮಹಿಳೆಯರು ಧರಣಿ ಕುಳಿತರು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ …

Read More »

ದ.ರಾ.ಬೇಂದ್ರೆ ಕಾವ್ಯದಲ್ಲಿದೆ ಹಲವು ವೈಶಿಷ್ಟ್ಯ; ಪ್ರೊ.ಎನ್‌.ಬಿ. ಝರೆ

ಕಾಗವಾಡ: ಬೇಂದ್ರೆಯವರ ಕಾವ್ಯ ಹಲವು ವೈಶಿಷ್ಟ್ಯ ಗಳಿಂದ ಕೂಡಿದೆ. ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ. ಬೇಂದ್ರೆಯವರ ಕಾವ್ಯದಲ್ಲಿ ತಾಯಿ, ಅಜ್ಜಿ, ಹೆಂಡತಿ, ಪರಿಸರ, ಸಾಹಿತ್ಯದ ಹಲವು ಪ್ರಕಾರಗಳು ಪ್ರಭಾವವನ್ನು ಬೀರಿವೆ ಎಂದು ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್‌.ಬಿ. ಝರೆ ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ರವಾರ ಸ್ಥಳೀಯ ಶಿವಾನಂದ ಮಹಾ ವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಕನ್ನಡ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಡಾ|ದ.ರಾ.ಬೇಂದ್ರೆಯವರ 127ನೆ ಜನ್ಮದಿನಾಚರಣೆಯ ಪ್ರಯುಕ್ತ …

Read More »

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಲು ಅಗತ್ಯದ ಅನುದಾನ ನೀಡುತ್ತೇನೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳಕ್ಕೂ ಕ್ರಮ‌ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಶನಿವಾರ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನಕ್ಕೆ ಚಾಲನೆ ಮಾತನಾಡಿದ ಅವರು, ಆದರೆ ನಕಲಿ ಪತ್ರಕರ್ತರಿಗೆ ಕಡಿವಾಣ ಅಗತ್ಯ ಎಂದರು.   ಪತ್ರಕರ್ತರನ್ನು ಕಾರ್ಮಿಕರನ್ನಾಗಿ ಪರಿಗಣಿಸಿ ಕಾರ್ಮಿಕ ಇಲಾಖೆಯ ಮೂಲಕ …

Read More »

ರಾಜ್ಯದ ರೈಲು ಯೋಜನೆಗೆ ದಾಖಲೆ ಅನುದಾನ ಹಂಚಿಕೆ

ಹುಬ್ಬಳ್ಳಿ: ಕೇಂದ್ರ ಬಜೆಟ್​ನಲ್ಲಿ ಈ ಬಾರಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಅಂದಾಜು 7,561 ಕೋಟಿ ರೂ. ದಾಖಲೆ ಪ್ರಮಾಣದ ಅನುದಾನ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 2014ರಲ್ಲಿನ 835 ಕೋಟಿ ರೂ.ಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಅಂದಾಜು 49,536 ಕೋಟಿ ರೂ. ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ …

Read More »

ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

ಹೈದರಬಾದ್​: ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.   ಇಬ್ಬರು ಸಹ ಗಸ್ತು ವಾಹನದ ಸಿಬ್ಬಂದಿ ಎಂದು ತಿಳಿದುಬಂದಿದೆ. ವಾಹನವನ್ನು ಪಕ್ಕದಲ್ಲಿ ಪಾರ್ಕ್​ ಮಾಡಿ ಮನೆಯ ಮುಂದಿನ ಸಣ್ಣದಾಗ ಗೋಡೆಯ ಮೇಲೆ ಕುಳಿತು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಇಬ್ಬರು ಕೂಡ ಹೈದರಾಬಾದ್​ನ ಪಂಜಗುಟ್ಟ ಠಾಣಾ ಪೊಲೀಸರು ಎಂದು …

Read More »