ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ವಿಶೇಷ ಸ್ಥಾನಮಾನವಿದೆ. ರಾಜ್ಯಪಾಲರು ಆಯಾಯ ರಾಜ್ಯಗಳ ಪ್ರಥಮ ಪ್ರಜೆಯಾಗಿದ್ದು ಇವರನ್ನು ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಅವರು ನೇಮಕ ಮಾಡುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಣ ಕೊಂಡಿಯಾಗಿ ರಾಜ್ಯಪಾಲರು ಕರ್ತವ್ಯ ನಿರ್ವಹಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದಾಗ ರಾಜ್ಯಪಾಲರ ಪಾತ್ರ ಅತೀ ಮಹತ್ವದ್ದಾಗಿರುತ್ತದೆ. ರವಿವಾರದಂದು ಕೇಂದ್ರ ಸರಕಾರದ ಶಿಫಾರಸಿನಂತೆ ಹೊಸದಾಗಿ …
Read More »ಚುನಾವಣ ಸೇತುವೆ ಮೇಕೆದಾಟು
ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾದ ಮೇಕೆದಾಟು ಯೋಜನೆ ಈ ಬಾರಿಯ ಚುನಾವಣ ಅಸ್ತ್ರವಾಗುವ ಸಾಧ್ಯತೆಗಳಿವೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ರಾಜಕೀಯ ಮತ್ತು ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗುವ ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳಿಗೆ ಆಯಾ ಸಂದರ್ಭದಲ್ಲಿ ರಾಜಕೀಯ ದಾಳ ಮತ್ತು ಚುನಾವಣ ಅಸ್ತ್ರವೂ ಆಗಿರುತ್ತದೆ. ಈ ಬಾರಿಯೂ ಅಷ್ಟೇ ದಕ್ಷಿಣ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯನ್ನು ಚುನಾವಣೆ ಅಸ್ತ್ರವನ್ನಾಗಿಸಲು ಎಲ್ಲ ಪಕ್ಷಗಳು ಪ್ರಯತ್ನಿಸಿವೆ. …
Read More »JDS ಶಾಸಕರು ಕಾಂಗ್ರೆಸ್ ಸೇರುವುದು ಖಚಿತ
ರಾಯಚೂರು: ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದು, ನೂರಕ್ಕೆ ನೂರರಷ್ಟು ಅವರು ಕಾಂಗ್ರೆಸ್ ಗೆ ಬರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರು 100 ಪರ್ಸೆಂಟ್ ಕಾಂಗ್ರೆಸ್ ಗೆ ಬರ್ತಾರೆ. ಯಾಕೆ ಅನುಮಾನಾನಾ? ಎಂದು ಪ್ರಶ್ನಿಸಿದ್ದಾರೆ. ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಯಾವತ್ತು ಬೇಕಾದರೂ ಅವರು ಕಾಂಗ್ರೆಸ್ ಗೆ ಬರುತ್ತಾರೆ ಎಂದು ತಿಳಿಸಿದ್ದಾರೆ. ಅರಸಿಕೆರೆ ಜೆಡಿಎಸ್ ಶಾಸಕರಾಗಿರುವ ಶಿವಲಿಂಗೇಗೌಡರಿಗೆ …
Read More »ಚಿನ್ನ ಗಿರವಿ ಇಡಲು ಅಂಗಡಿಗೆ ಬಂದ ಗ್ರಾಹಕ ಚಿನ್ನದ ಶಾಪ್ ಗೆ ಬೆಂಕಿ ಇಟ್ಟ
ಬೆಂಗಳೂರು: ಚಿನ್ನ ಗಿರವಿ ಇಡಲು ಅಂಗಡಿಗೆ ಬಂದ ಗ್ರಾಹಕ ಚಿನ್ನದ ಶಾಪ್ ಗೆ ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ಚಿನ್ನ ಗಿರವಿ ಇಟ್ಟಿದ್ದಕ್ಕೆ ಕೇವಲ 50 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿ ಗಿರವಿ ಅಂಗಡಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಿರವಿ ಅಂಗಡಿ ಮಾಲೀಕ ಭರತ್ ಲಾಲ್ (54) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಶಿವಮೊಗ್ಗ ಏರ್ ಪೋರ್ಟ್ ಗೆ ‘ಕುವೆಂಪು’ ಹೆಸರಿಡಲು ನಿರ್ಧಾರ : B.S ಯಡಿಯೂರಪ್ಪ
ಶಿವಮೊಗ್ಗ : ಶಿವಮೊಗ್ಗ ಏರ್ ಪೋರ್ಟ್ ಗೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ಶಿವಮೊಗ್ಗ ಏರ್ ಪೋರ್ಟ್ ಗೆ ನನ್ನ ಹೆಸರು ಇಡಬೇಡಿ ಎಂದು ಈಗಾಗಲೇ ಮನವಿ ಮಾಡಿದ್ದೇನೆ. ಶಿವಮೊಗ್ಗ ಏರ್ ಪೋರ್ಟ್ ಗೆ ಕುವೆಂಪು ಹೆಸರಿಡುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಫೆ.27 ರಂದು ಶಿವಮೊಗ್ಗ ಏರ್ ಪೋರ್ಟ್ ಗೆ ಮೋದಿ ಬರುತ್ತಾರೆ. ಮೋದಿ …
Read More »ಕಲಿ ದಾಖಲೆಗಳನ್ನು ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಮಾಡುವ ಕಾಯ್ದೆ ಶೀಘ್ರವೇ ಜಾರಿ
ಬೆಂಗಳೂರು : ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಮಾಡುವ ಕಾಯ್ದೆ ಶೀಘ್ರವೇ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್. ಶೀಘ್ರವೇ ಕರ್ನಾಟಕ ನೋಂದಣಿ ಕಾಯ್ದೆಯನ್ನು ಮಾರ್ಪಾಡು ಮಾಡಲಿದ್ದು, ನಕಲಿ ದಾಖಲೆ ಸೃಷ್ಟಿಸಿದ ನೋಂದಣಿಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲಾಗುವುದು ಇದರಿಂದ …
Read More »ಕುಮಾರಸ್ವಾಮಿ ಸೂಚಿಸಿದ ಕಡೆ ಭವಾನಿ ಸ್ಪರ್ಧಿಸುತ್ತಾರೆ: ಎಚ್.ಡಿ.ರೇವಣ್ಣ
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಒಡಕಿಲ್ಲ. ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಸೂಚಿಸುವ ಕ್ಷೇತ್ರದಿಂದಲೇ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದ್ದಾರೆ. ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಶನಿವಾರ ನಡೆದ ಹಳ್ಳಿಕಾರ ಮಠ ಸಮರ್ಪಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಭವಾನಿ ರೇವಣ್ಣ ಅವರ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಭವಾನಿ ಅಷ್ಟೇ ಏಕೆ ಪಕ್ಷದ …
Read More »ಲಿಂಗಾಯತ ‘ಸ್ವತಂತ್ರ ಧರ್ಮ’ ಬೆಂಬಲಿಸುವ ಪಕ್ಷಕ್ಕೆ ಮತ: ಚನ್ನಬಸವಾನಂದ ಸ್ವಾಮೀಜಿ
ಹುಬ್ಬಳ್ಳಿ: ‘ಲಿಂಗಾಯತ ಸ್ವತಂತ್ರ ಧರ್ಮವಾಗಲು ಕೇಂದ್ರಕ್ಕೆ ಶಿಫಾರಸು ಸಲ್ಲಿಸುವುದಾಗಿ ಪ್ರಣಾಳಿಕೆಯಲ್ಲಿ ದಾಖಲಿಸುವ ಪಕ್ಷಕ್ಕೆ ಮತ ಹಾಕುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ‘ವೀರಶೈವ ಲಿಂಗಾಯತರು ಮಹಾರಾಷ್ಟ್ರದಲ್ಲಿ ಹೋಗಿ ತಾವು ‘ಹಿಂದೂಗಳು’ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು ಹಿಂದೂಗಳಲ್ಲ’ ಹಿಂದೂ ಎಂಬುದು ಧರ್ಮ ಅಲ್ಲ, ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಪ್ರಧಾನಿ ಮೋದಿಯವರೂ ಹೇಳಿದ್ದಾರೆ. 500 ವರ್ಷಗಳ …
Read More »ಯಕ್ಷಗಾನ ಸಮ್ಮೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಮುದಾಯದ ಪ್ರತಿಭಟನೆ
ಉಡುಪಿ: ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಲೇಖಕ ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳ ಮುಖಂಡರು ಶನಿವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು ಗುರುಗಳಿಗೆ ಹಾಗೂ ಬಿಲ್ಲವ ಸಮಾಜಕ್ಕೆ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದು ಸಮ್ಮೇಳನದಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು. ಸಮ್ಮೇಳನ ನಡೆಯುವ ಸ್ಥಳದ ಕಡೆಗೆ ಹೊರಟ ಪ್ರತಿಭಟನಾಕಾರರನ್ನು ರಾಷ್ಟ್ರೀಯ …
Read More »ಚುನಾವಣೆ ರೂಪುರೇಷೆ: ಆಯೋಗ ಸಿದ್ಧತೆ- ಮತಗಟ್ಟೆ ವರದಿ ಸಿದ್ಧಪಡಿಸಲು ಸೂಚನೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ರೂಪುರೇಷೆ ಸಿದ್ಧಪಡಿಸುತ್ತಿರುವ ಚುನಾವಣಾ ಆಯೋಗ, ರಾಜ್ಯದ ವಲಯವಾರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತಿದೆ. ಮೈಸೂರು, ಕಲಬುರಗಿಯಲ್ಲಿ ಒಂದು ಸುತ್ತಿನ ಸಭೆ ನಡೆಸಿರುವ ಆಯೋಗದ ಅಧಿಕಾರಿಗಳು, ಚುನಾವಣೆ ಸಿದ್ಧತೆ ಕೆಲಸ ಆರಂಭಿಸುವಂತೆ ಜಿಲ್ಲಾಧಿಕಾರಿಗಳು, ಎಸ್‌ಪಿಗಳು ಹಾಗೂ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಕಮಿಷನರ್ ಹಾಗೂ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ಆಯೋಗ, ಮತಗಟ್ಟೆ ಹಂತದಲ್ಲಿ …
Read More »