ಬೆಳಗಾವಿ: ತಾಲ್ಲೂಕಿನ ಮಾಸ್ತಮರ್ಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿರುವ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ‘ಮಕ್ಕಳ ಕಲಿಕಾ ಹಬ್ಬ’ದಲ್ಲಿ ಎರಡನೇ ದಿನವಾದ ಮಂಗಳವಾರ ನಡೆದ ವಿವಿಧ ಶೈಕ್ಷಣಿಕ ಚಟುವಟಿಕೆ ಗಮನಸೆಳೆದವು. ಮಾಡು-ಆಡು, ಹಾಡು-ಆಡು, ಕಾಗದ-ಕತ್ತರಿ ಮತ್ತು ಊರು ತಿಳಿಯೋಣ ವಿಭಾಗದಲ್ಲಿ ನಡೆದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಪ್ರಯೋಗಗಳನ್ನು ಮಾಡಿದರು. ಗಾಯನ ಮತ್ತಿತರ ಕಲಾಪ್ರಕಾರ ಪ್ರಸ್ತುತಪಡಿಸಿದರು. ಸ್ಥಳೀಯ ಮಟ್ಟದಲ್ಲಿ ಲಭ್ಯವಾಗುವ ಕಚ್ಚಾ ವಸ್ತುಗಳಿಂದ ವಿವಿಧ …
Read More »ಗೋಕಾಕ ಜಲಪಾತದ ಬಳಿ ಇರುವ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ,ಭವ್ಯ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.
ಘಟಪ್ರಭಾ: ಸಮೀಪ ಗೋಕಾಕ ಜಲಪಾತದ ಬಳಿ ಇರುವ ಪ್ರಾಚೀನ ಕಾಲದ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದೇ 17ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ. ಪದರು ಶಿಲೆಗಳ ಮಧ್ಯೆ ನಿರ್ಮಾಣ ಮಾಡಿದ್ದು ಈ ದೇವಾಲಯದ ವಿಶೇಷ. ನಿಖರವಾಗಿ ಇದರ ಪುರಾತನ ಕಾಲ ತಿಳಿದುಬಂದಿಲ್ಲ. ಆದರೆ, ದೇವಾಲಯವು ತಡಸಲ ಮಹಾಲಿಂಗೇಶ್ವರನೆಂದು (ತಟಾಕೇಶ್ವರ) ಖ್ಯಾತಿ ಪಡೆದಿದೆ. ಹೀಗಾಗಿ, ಅನಾದಿ ಕಾಲದಿಂದಲೂ ಮಹಾಲಿಂಗೇಶ್ವರ ಇಲ್ಲಿ ಪೂಜೆಗೊಳ್ಳುತ್ತಿದ್ದಾರೆ ಎನ್ನುವುದು ವಾಡಿಕೆ. ಅತ್ಯಂತ ನವಿರಾದ …
Read More »ಖಾತೆ ಬದಲಾವಣೆಗೆ ಲಂಚ: ಪ್ರಥಮದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ
ಬಳ್ಳಾರಿ (ಹೂವಿನಹಡಗಲಿ): ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಸಾವಿರಾರು ರೂ. ಲಂಚ ಕೇಳಿದ್ದ ಹಡಗಲಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಎನ್ನುವವರು ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಹಗರನೂರು ಗ್ರಾಮಾದ ನಿವೃತ್ತ ಶಿಕ್ಷಕ ಲಕ್ಕಪ್ಪಾ ಅಂಗಡಿಯವರ ತಾಯಿಗೆ ಸೇರಿದ 4 ಎಕರೆ ಜಮಿನಿಗೆ ಸಂಬಂಧಿಸಿದಂತೆ ಸರ್ವೆನಂ. 330\ಎ ಪಹಣಿ ಕಲಂ 11 ರಲ್ಲಿ ಸರ್ಕಾರಿ ಜಮಿನು ಎಂದು ಬಂದಿದ್ದು ಇದನ್ನು ತಗೆದು ಹಾಕಲು ಅರ್ಜಿದಾರ ಲಕ್ಕಪ್ಪ ಅಂಗಡಿಯ 2014 …
Read More »ಶೇ.60 ಭರವಸೆಯನ್ನೂ ಈಡೇರಿಸಿಲ್ಲ: ಸಿದ್ದರಾಮಯ್ಯ ವಾಗ್ಧಾಳಿ
ವಿಧಾನಸಭೆ: ಬಿಜೆಪಿ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆ ಪೈಕಿ ಶೇ.60ರಷ್ಟು ಈಡೇರಿಸಿಲ್ಲ. ಹೀಗಿರುವಾಗ ರಾಜ್ಯಪಾಲರ ಕೈಲಿ ಸುಳ್ಳು ಹೇಳಿಸಿರುವುದು ನಿಜವೋ ಅಲ್ಲವೋ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಒಂದು ಲಕ್ಷ ರೂ. ಸಾಲ ಮನ್ನಾ, 20 ಲಕ್ಷ ಸಣ್ಣ ಮತ್ತು …
Read More »ಅಸಮರ್ಪಕ ಸಮವಸ್ತ್ರ, ಶೂ ವಿತರಣೆಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮವಸ್ತ್ರ ಮತ್ತು ಶೂ ವಿತರಿಸಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಹಿರಿಯ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿಹೋಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು …
Read More »ವಿಧಾನಸಭೆ ಚುನಾವಣೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಂತಿಮ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಸ್ಕ್ರೀನಿಂಗ್ ಕಮಿಟಿ ಸದಸ್ಯರು, ರಾಜ್ಯ ನಾಯಕರ ಜತೆ ಸಮಾಲೋಚನೆ ಪೂರ್ಣಗೊಳಿಸಿದ್ದು 150 ಕ್ಷೇತ್ರಗಳಿಗೆ ಒಂದೊಂದೇ ಹೆಸರಿನ ಪಟ್ಟಿ ಸಿದ್ಧಗೊಳಿಸಿದೆ. 224 ಕ್ಷೇತ್ರಗಳ ಪೈಕಿ ಒಂದೊಂದೇ ಹೆಸರು ಇರುವ 150 ಕ್ಷೇತ್ರಗಳ ಪಟ್ಟಿ ಮೊದಲ ಹಂತದಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದ್ದು ಫೆಬ್ರವರಿ ಕೊನೆಯ ವಾರ ಕೇಂದ್ರ ಚುನಾವಣ ಸಮಿತಿ ಸಭೆ ಸೇರಿ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. …
Read More »ಬೆಳಗಾವಿ: ಕಣ್ಮನ ಸೆಳೆದ ‘ಮಕ್ಕಳ ಕಲಿಕಾ ಹಬ್ಬ
(ಬೆಳಗಾವಿ): ಒಂದೆಡೆ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಕಣ್ಮನ ಸೆಳೆದರೆ, ಮತ್ತೊಂದೆಡೆ ಮಕ್ಕಳ ಜಾನಪದ ಕಲೆಗಳ ಪ್ರದರ್ಶನ ಜನರನ್ನು ರಂಜಿಸಿತು. ಆಲಂಕೃತ ಚಕ್ಕಡಿಗಳು, ಟ್ರ್ಯಾಕ್ಟರ್‌ಗಳ ಸಾಲು ಗ್ರಾಮೀಣ ಸೊಗಡು ಸೂಸಿತು. ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮಿಂದೆದ್ದರೆ, ನೂರಾರು ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿ ಬೀಗಿದರು. ಮಾಸ್ತಮರ್ಡಿಯಲ್ಲಿ ಸೋಮವಾರದಿಂದ ಆರಂಭಗೊಂಡ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ‘ಮಕ್ಕಳ ಕಲಿಕಾ ಹಬ್ಬ’ದಲ್ಲಿ ಇಂತಹ ದೃಶ್ಯಕಾವ್ಯಕ್ಕೆ ಸಾಕ್ಷಿಯಾಯಿತು. ಮಕ್ಕಳಲ್ಲಿ ಕಲಿಕೆ ಬಗ್ಗೆ ಪ್ರೇರಣೆ ತುಂಬಲು …
Read More »ಬ್ರಹ್ಮಕುಮಾರಿ ಈಶ್ವರೀಯ ವಿ.ವಿಯಿಂದ ಶಾಂತಿ ಸಂದೇಶ’
ಎಂ.ಕೆ.ಹುಬ್ಬಳ್ಳಿ: ‘ಹಣ-ಆಸ್ತಿ ಎಷ್ಟಿದ್ದರೇನು. ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ. ನಾಮ ಹಲವಾರೂ, ದೇವನೊಬ್ಬನೆ ಎಂಬ ತತ್ವದಡಿ ಮುನ್ನಡೆಯುತ್ತಿವೆ’ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಸ್ಥಳೀಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ನಡೆದ ಶಿವರಾತ್ರಿ ಕಾರ್ಯಕ್ರಮ ಹಾಗೂ ನೂತನ ಕಟ್ಟಡ ‘ಶಿವಶಕ್ತಿ’ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ, …
Read More »ಕರಿಕಟ್ಟಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿದು ಬಿದ್ದು ಹಿರಿಯ ಮಹಿಳೆ ಸಾವು
ಸವದತ್ತಿ: ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿತಕ್ಕೊಳಗಾಗಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಗ್ರಾಮದ ಶಾಂತವ್ವ ಶಿವಮೂರ್ತಯ್ಯ ಹಿರೇಮಠ (60) ಮೃತಪಟ್ಟವರು. ಹಳೆಯದಾದ ಮನೆಯ ಛಾವಣಿ ಏಕಾಏಕಿ ಕುಸಿತಕ್ಕೊಳಗಾಯಿತು. ಅದರಡಿಯಲ್ಲೇ ಇದ್ದ ಶಾಂತವ್ವ ಅವರ ಮೇಲೆ ವ್ಯಾಪಕ ಪ್ರಮಾಣದ ಮಣ್ಣು, ಹಲಗೆಗಳು ಬಿದ್ದು ಅದರಲ್ಲಿ ಮುಚ್ಚಿ ಹೋಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು …
Read More »BBC ಕಚೇರಿ ಮೇಲೆ IT ಅಧಿಕಾರಿಗಳ ದಿಢೀರ್ ದಾಳಿ
ಬೆಂಗಳೂರು: ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್-BBC ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಿಬಿಸಿ ಕಚೇರಿಯಲ್ಲಿನ ಸಿಬ್ಬಂದಿಗಳ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪದ ಮೇಲೆ ತೆರಿಗೆ ಇಲಾಖೆ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಪಾಸಣೆ ಅವಧಿಯಲ್ಲಿ ಬಿಬಿಸಿ ಕಚೇರಿ, ಸ್ಟುಡಿಯೋಗಳನ್ನು ಮುಚ್ಚಲಾಗುತ್ತಿದ್ದು, ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ …
Read More »