ಬೆಳಗಾವಿ :ಬೆಳಗಾವಿ ನಗರದ ಬಸವಣಕುಡಚಿಯಲ್ಲಿ ಮಂಗಳವಾರದAದು ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಹಳದಿ ಕುಂಕುಮ ಕಾರ್ಯಕ್ರಮಆಯೋಜನೆ ಮಾಡಲಾಗಿತ್ತು.ಬಸವಣಕುಡಚಿಗ್ರಾಮದ ಬಸವಣ್ಣ ಮಂದಿರಆವರಣದಲ್ಲಿಆಯೋಜನೆ ಮಾಡಲಾದಕಾರ್ಯಕ್ರಮದಲ್ಲಿಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆರವರು ನಾನು ಶಾಸಕನಾಗುವ ಮುಂಚೆಯಿAದಲೂ ಬಸವಣಕುಡಚಿಜನ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನುಇಟ್ಟಿದ್ದು, ೨೦೧೮ ರಚುನಾವಣೆಗೆ ನಾನು ಸ್ಪರ್ದೆ …
Read More »ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇದಿ; ಮಹಿಳೆ ಮೃತ್ಯು
ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಲ್ಬಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (35) ಮೃತ ಮಹಿಳೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿರುವ ಪರಿಣಾಮ ಕಲುಷೀತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದೆ. ಇದುವರೆಗೆ 30 ಜನರಲ್ಲಿ ಕಾಣಿಸಿಕೊಂಡ ವಾಂತಿ ಭೇದಿ ಕಾಣಿಸಿಕೊಂಡಿದೆ. ನಿನ್ನೆ 24 ,ಇಂದು 6 ಜನರಿಗೆ ಕಾಣಿಸಿಕೊಂಡ ವಾಂತಿ …
Read More »ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿ ಆರಂಭಿಸದೆ ಬಿಜೆಪಿ ರೈತರಿಗೆ ಮೋಸ ಮಾಡಿದೆ: ಎಚ್.ಕೆ.ಪಾಟೀಲ
ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿಯಿಂದ ನೀರು ಗ್ರಾಮದಲ್ಲಿ ತಂದೇಬಿಟ್ಟವು ಎಂದು ವಿಜಯೋತ್ಸವ ಆಚರಿಸಿದ್ದ ಬಿಜೆಪಿ ನಾಯಕರು ಕಾಮಗಾರಿ ಆರಂಭಿಸದೆ ರೈತರಿಗೆ ಮೋಸ ಮಾಡಿದ್ದು, ಯೋಜನೆ ಬಗ್ಗೆ ರಾಜ್ಯ ಸರಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ ಜೋಶಿ ಅವರುಗಳು ಸುಳ್ಳು ಹೇಳಿ ಉತ್ತರ ಕರ್ನಾಟಕದ ರೈತರು, ಜನರಿಗೆ ಮೋಸ ಮಾಡಿದ್ದಾರೆ …
Read More »ಟಿಪ್ಪು ರಣ ಹೇಡಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ: ಬಿ.ಕೆ.ಹರಿಪ್ರಸಾದ್
ಶಿರಸಿ: ಟಿಪ್ಪು ಸುಲ್ತಾನ್ ರಣ ಹೇಡಿಯಲ್ಲ. ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಪಾದಿಸಿದರು. ಬುಧವಾರ ನಗರದಲ್ಲಿ ಮಾತನಾಡಿ, ಗೋಡ್ಸೆ ಸಂತತಿಯನ್ನು ಸೋಲಿಸುವುದೇ ಕಾಂಗ್ರೆಸ್ ಗುರಿ ಎಂದೂ ಸಮರ್ಥಿಸಿ ಬಿಜೆಪಿ ವಿರುದ್ಧ ಹರಿಯಾಯ್ದರು. ಮಹಾತ್ಮಾ ಗಾಂಧಿ ಅವರನ್ನು ಕೊಂದ ಪಕ್ಷ ಬಿಜೆಪಿ. ಭಯೋತ್ಪಾದನೆ ಹುಟ್ಟಿದ್ದೇ ಬಿಜೆಪಿಯ ಮೂಲದಿಂದ ಎಂದು ಆರ್ ಎಸ್ ಎಸ್ ವಿರುದ್ಧವೂ ಪರೋಕ್ಷ ವಾಗ್ದಾಳಿ ಮಾಡಿ, ಬ್ರಿಟೀಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು …
Read More »ಬೆಂಕಿ ಮಳೆ ಸುರಿದ್ರೂ ಏನೂ ಆಗಲ್ಲ!: ವಿನೂತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿ
ಬೆಂಗಳೂರು: ಈ ಜಾಕೆಟ್ ಹಾಕಿಕೊಂಡಾಗ, ನಿಮ್ಮ ಮೇಲೆ ಬೆಂಕಿಯ ಮಳೆಯೇ ಸುರಿದರೂ ನೀವು ಒಳಗೆ “ಕೂಲ್’ ಆಗಿರ್ತೀರಾ. ಒಂದೇ ಒಂದು ಗಾಯ ಕೂಡ ಆಗುವುದಿಲ್ಲ! ವೀರಾ ಎಂಬ ಕಂಪನಿಯು ಈ ವಿನೂ ತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿಪಡಿಸಿದೆ. ಇದನ್ನು ಧರಿಸಿದರೆ, ನೀವು -200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿರಲಿ ಅಥವಾ 1000 ಡಿಗ್ರಿ ಸೆಲ್ಸಿಯಸ್ ಇರಲಿ ನಿಮ್ಮ ದೇಹದ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಇದರ ಹೆಸರು “ಟಾರ್ಡಿಗ್ರೇಡ್ ಜಾಕೆಟ್’. ಅತಿ ಎತ್ತರದ …
Read More »ಸರ್ಕಾರ ಯೋಜನೆಗಳ ಟೆಂಡರ್ ಮೊತ್ತ ಹೆಚ್ಚಿಸಿಕೊಂಡು ಭ್ರಷ್ಟಾಚಾರ ಮಾಡುತ್ತಿದೆ: ಕಾಂಗ್ರೆಸ್ ಆರೋಪ
ಬೆಂಗಳೂರು: ಈ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರ. ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. 500 ಕೋಟಿ ರೂ ಮೌಲ್ಯದ ಟೆಂಡರ್ ಇದ್ದರೆ ಅದರ ಅಂದಾಜು ಮೊತ್ತವನ್ನು 1000 ಕೋಟಿಯಷ್ಟು ಮಾಡಿಸಿದ್ದಾರೆ. ಈ ಬಗ್ಗೆ ನಾವು ಎಲ್ಲ ರೀತಿಯ …
Read More »ಚುನಾವಣೆ ಪ್ರಾರಂಭ ಆದಾಗ ಐಟಿ ದಾಳಿ ಆಗುತ್ತದೆ: H.D.K.
ಹಾವೇರಿ: ಯಾವ ರಾಜ್ಯದಲ್ಲಿ ಚುನಾವಣೆ ಪ್ರಾರಂಭ ಆಗುತ್ತದೋ, ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ನಾಡೆಯುತ್ತವೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ನಡೆದುಕೊಂಡು ಬಂದಿದ್ದು, ಬಿಜೆಪಿಯವರ ಚುನಾವಣೆ ಕ್ರಮವೇ ಅದು. ಗುಜರಾತ್ ಘಟನೆ ನೈಜ ಚಿತ್ರಣ ಮಾಡಿದರು ಅಂತ ಹೇಳಿ ಬಿಬಿಸಿಯವರನ್ನೇ ಬಿಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದಲ್ಲಿ ಮಾತನಾಡಿ, ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ …
Read More »B,S,Y,ಗೆ ಅರಳುಮರಳು ಎಂದ ಸಿದ್ದರಾಮಯ್ಯ,ಕಾಂಗ್ರೆಸ್ಸಿಗರು ತಲೆ ತಿರುಕರು ಎಂದ B,S,Y,
ಬೆಂಗಳೂರು: ಸರ್ಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಎಂಬ ಕಾಂಗ್ರೆಸ್ ಆರೋಪಕ್ಕೆ, ಕಿಡಿಕಾರಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ತಲೆ ತಿರುಕರು, ಅವರು ಇಲ್ಲಸಲ್ಲದ ಅರೋಪ ಮಾಡುತ್ತಿದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಟೆಂಡರ್ ರದ್ದುಗೊಳಿಸುವುದಾಗಿ ಡಿ.ಕೆ.ಶಿವಕುಮಾರ್ ಹಾಗು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಅದಕ್ಕೆ …
Read More »ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ಬೇಡಿಕೆ ಇಡುತ್ತ ಬಂದಿದ್ದೇವೆ. ಆದರೂ ಬೇಡಿಕೆಗಳು ಈಡೇರದೆ ಇರುವುದು ಬೇಸರ ತಂದಿದೆ. 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಸುವ್ರಣ ವಿಧಾನಸೌಧ ಏನೇನಬ ಉಪಯೋಗವಿಲ್ಲವಾಗಿದೆ. ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು …
Read More »ಬಾದಾಮಿಯಿಂದಲೇ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಒತ್ತಾಯ
ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವ ರನ್ನು ಮಂಗಳವಾರ ಭೇಟಿ ಮಾಡಿದ ಬಾದಾಮಿಯ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ತಮ್ಮ ಕ್ಷೇತ್ರದಿಂದಲೇ ಕಣಕ್ಕಿಳಿಯುವಂತೆ ಒತ್ತಾಯಿಸಿದರು. ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದ ಮುಖಂಡರು, ಕಾರ್ಯಕರ್ತರು, ಅವರು ಮನೆಯಿಂದ ಹೊರಬರುವುದಕ್ಕಾಗಿ ಸುಮಾರು 2 ಗಂಟೆ ಕಾದರು. ಅವರು ಮನೆಯಿಂದ ಹೊರಡುತ್ತಿದ್ದಂತೆ ಮುತ್ತಿಗೆ ಹಾಕಿ ಒತ್ತಡ ಹೇರುವ ಪ್ರಯತ್ನ ಮಾಡಿದರು. ಅಲ್ಲದೆ, ಮಾತನಾಡಿಸಲು ಮುಂದಾದರು. …
Read More »