Breaking News

ಬಜೆಟ್ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ ಸಿಎಂ!

ಬೆಂಗಳೂರು: ಬಿಜೆಪಿ ಅವಧಿಯ ಕೊನೆಯ ಬಜೆಟ್ ಮಂಡನೆ ಇದಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿಯ ಎರಡನೇ ಆಯವ್ಯಯ ಮಂಡನೆ ಇದಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇ ಬೇಕು ಎನ್ನುವ ಗುರಿ ಹೊತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಾರಿಯ ಬಜೆಟ್​ ಮೂಲಕವೂ ಎಲ್ಲಾ ವರ್ಗದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.   ಕೃಷಿ: ಕೃಷಿಕರಿಗೆ ಅನುಕೂಲವಾಗಲಿ ಎಂದು ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯ ಅಡಿಯಲ್ಲಿ ರೈತರಿಗೆ 10 ಸಾವಿರ …

Read More »

ಖೈದಿಗಳ ಜೀವನ ಸುಧಾರಣೆಗೆ ಅಗತ್ಯ ಕ್ರಮ!

ಬೆಂಗಳೂರು: ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದ್ದು, ಖೈದಿಗಳ ಜೀವನ ಸುಧಾರಣೆಗೆ ಮತ್ತು ಶಿಕ್ಷೆಯ ಅವಧಿಯ ನಂತರ ಪುನರ್ವಸತಿಗೆ ಸಶಕೀರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಖೈದಿಗಳಿಗೆ ನೀಡುವ ಕೂಲಿ ದರಗಳನ್ನು ಕನಿಷ್ಠ ವೇತನ ಕಾಯಿದೆ ಅನ್ವಯ ಹೆಚ್ಚಿಸಲು ಕ್ರಮವಹಿಸಲಾಗಿದ್ದು, ಕಾರಾಗೃಹಗಳ ಆಸ್ಪತ್ರೆಗಳ ನಿರ್ವಹಣೆಯನ್ನು ಸುಧಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್​ನಲ್ಲಿ ಘೋಷಣೆ ಮಾಡಿದರು. ವಿಜಯಪುರ, ಬೀದರ್, …

Read More »

ಅಥಣಿ ಕ್ಷೇತ್ರಕ್ಕಾಗಿ ಕಾಂಗ್ರೆಸ್-ಬಿಜೆಪಿ ನಾಯಕರ ಜಟಾಪಟಿಟಿಕೆಟ್ ಯಾರಿಗೆ..?

ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಎಂಟು ವಿಧಾನಸಭಾ ಸ್ಥಾನಗಳಿಗೆ ಪೈಪೋಟಿ ಎದುರಾಗಿದೆ. ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಎಂಟು ವಿಧಾನಸಭಾ ಸ್ಥಾನಗಳಿಗೆ ಪೈಪೋಟಿ ಎದುರಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಇಲ್ಲಿನ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. …

Read More »

ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಪಕ್ಷದ ನಾಯಕರು ಕೋಮುದ್ವೇಷ ಬಿತ್ತುತ್ತಿದ್ದಾರೆ.: ಸಿದ್ದರಾಮಯ್ಯ

ರಾಮದುರ್ಗ: ‘ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಪಕ್ಷದ ನಾಯಕರು ಕೋಮುದ್ವೇಷ ಬಿತ್ತುತ್ತಿದ್ದಾರೆ. ಇಂಥವರು ಅಧಿಕಾರದಲ್ಲಿರಲು ಯೋಗ್ಯರಲ್ಲ. ಇವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.   ರಾಮದುರ್ಗದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿರುವ ನಳೀನ್‌ಕುಮಾರ ಕಟೀಲ್‌ ಟಿಪ್ಪುವಿನ ಅಂತ್ಯ ಹಾಡಿದಂತೆ ಸಿದ್ದರಾಮಯ್ಯಗೂ ಅಂತ್ಯ ಹಾಡಲಾಗುವುದು ಎಂದು ಹೇಳಿರುವುದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು. ‘ಬಿಜೆಪಿ ನಾಯಕರಿಗೆ …

Read More »

ಚುನಾವಣಾ ಪ್ರಚಾರ ಸಾಮಗ್ರಿಗಳ ದರ ನಿಗದಿ

ಬೆಳಗಾವಿ: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೆ ಬಳಸುವ ಕೆಲವು ಸಾಮಗ್ರಿಗಳ ದರಗಳನ್ನು ತುಸು ಕಡಿಮೆ ಮಾಡಲು, ಗುರುವಾರ ಇಲ್ಲಿ ನಡೆದ ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳು, ವಾಹನ, ಪೋಸ್ಟರ್‌, ಮೈಕ್‌ ಸೇರಿದಂತೆ ವಿವಿಧ ಸಾಮಗ್ರಿಗಳ ಮಾರುಕಟ್ಟೆ ದರವನ್ನು ಪರಿಶೀಲಿಸಲಾಯಿತು.   ನೀತಿ ಸಂಹಿತೆ ಜಾರಿ ಆದ ಸಂದರ್ಭದಲ್ಲಿ ಇರುವ ಮಾರುಕಟ್ಟೆ ದರ ಹಾಗೂ ಗುಣಮಟ್ಟ ಅಧರಿಸಿ, …

Read More »

ಎಂ. ಕೆ. ಹುಬ್ಬಳ್ಳಿ| ಅನುಮಾನಾಸ್ಪದವಾಗಿ ಸಾವಿಗೀಡಾದ ಹಸುವಿನ ಮೇಲೆ ‘A’ ಗುರುತು

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ, ಮಲಪ್ರಭಾ ನದಿಗೆ ತೆರಳುವ ಮಾರ್ಗದಲ್ಲಿ ಗುರುವಾರ ನಸುಕಿನಲ್ಲಿ ಹಸುವೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಹಸುವಿನ ಕತ್ತಿನ ಕೆಳಭಾಗವನ್ನು ಕತ್ತರಿಸಿದ್ದು, ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ.   ಗುರುವಾರ ಬೆಳಿಗ್ಗೆ ವಾಯು ವಿಹಾರಿಗಳು ಇತ್ತ ಬಂದಾಗ ಹಸುವಿನ ಶವ ಪತ್ತೆಯಾಗಿದೆ. ಕೆಲವು ಜನ ಸೇರಿಕೊಂಡು ಹೆದ್ದಾರಿ ಪಕ್ಕದಲ್ಲೇ ತಗ್ಗು ತೆಗೆದು ಹೂತಿದ್ದಾರೆ. ಆದರೆ, ಗುರುವಾರ ಸಂಜೆಯವರೆಗೂ ಹಸುವಿನ ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ. ಯಾರೂ ಪೊಲೀಸರಿಗೆ ದೂರು …

Read More »

ಇಂದು ಕರ್ನಾಟಕ ರಾಜ್ಯ ಬಜೆಟ್‌: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷ ಸಾಲ?

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಛಲತೊಟ್ಟಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಾವು ಮಂಡಿಸಲಿರುವ ಎರಡನೇ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಲಕ್ಷ್ಯ ನೆಟ್ಟಿದ್ದಾರೆ.   ಸರ್ಕಾರಿ ನೌಕರರು, ವಿವಿಧ ಜಾತಿ ಸಮುದಾಯಗಳು, ನಗರವಾಸಿಗಳು, ಮಹಿಳೆಯರು, ರೈತರನ್ನು ಕೇಂದ್ರೀಕರಿಸಿ ಬಜೆಟ್‌ ತಯಾರಿಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ವೇತನ ಆಯೋಗದ ಅನುಷ್ಠಾನದತ್ತ ಇಡೀ ನೌಕರರ ವರ್ಗ …

Read More »

ವಿದ್ಯುತ್ ಸಮಸ್ಯೆ ಪರಿಹಾರ ಸಭೆ ರೈತರ ಕುಂದುಕೊರತೆಗಳಿಗೆ ಪರಿಹಾರ

ಬೆಳಗಾವಿ: ಹೆಸ್ಕಾಂ ನಗರ ಉಪವಿಭಾಗ-3 ರ ನೆಹರೂ ನಗರ ಬೆಳಗಾವಿ ಕಚೇರಿಯಲ್ಲಿ ರೈತ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಫೆ. ಇಂದು ಬೆಳಿಗ್ಗೆ 10.30ಕ್ಕೆ ಸಭೆ ನಡೆಸಲಾಗುವುದು. ರೈತ ಗ್ರಾಹಕರು ತಮ್ಮ ಸಮಸ್ಯೆ ಹಾಗೂ ಕುಂದು ಕೊರತೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಕೊನೆಯದಾಗಿ ಸ್ವೀಕರಿಸಿದ್ದ ಕರೆ ಆಧರಿಸಿ ಆರೋಪಿತರನ್ನುಬಂಧಿಸಿದ್ ಪೊಲೀಸರು

ಗೋಕಾಕ: ಇಲ್ಲಿನ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಮೂವರು ಆರೋಪಿತರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಆರೋಪಿ ಗೋಕಾಕ ಚನ್ನಮ್ಮನಗರ ನಿವಾಸಿ ಸಚಿನ್ ಶಂಕರ್ ಶಿರಗಾವೆ(36), ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ, ಹುಕ್ಕೇರಿ ತಾಲೂಕು ಶಿರಢಾಣ ಸಮೂಲದ  ಡಾ. ಶಿವಾನಂದ ಕಾಡಗೌಡ ಪಾಟೀಲ (28) ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ(25) ಬಂಧಿತರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಂತೆ ಉಂಟಾಗಿದ್ದ …

Read More »

ಮಲಪ್ರಭಾ ನದಿ ಕಲುಷಿತ; ಪರಿಶೀಲನೆಗೆ ಸೂಚನೆ:

ಬೆಳಗಾವಿ  : ಮಲಪ್ರಭಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಮೊದಲ ಹಂತವಾಗಿ ಹಳೆಯ ಉಪಯೋಗದಲ್ಲಿ ಇಲ್ಲದಿರುವ ಬ್ರಿಡ್ಜ್, ಬ್ಯಾರೇಜ್ ತೆರವುಗೊಳಿಸಲು ಹಾಗೂ ಅತಿಕ್ರಮಣಗೊಂಡಿರುವ ಜಮೀನುಗಳ ಗಡಿಗಳಿಗೆ ಕಲ್ಲುಗಳನ್ನು ಹಾಕಿಸಲು ಅಂದಾಜು ಪತ್ರಿಕೆಯನ್ನು ಆದ್ಯತೆ ಮೇರೆಗೆ 10 ದಿನದೊಳಗಾಗಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ಗುರುವಾರ(ಫೆ.16) ನಡೆದ ವಿಭಾಗದ …

Read More »