Breaking News

‘ಕೈ’ ಹಿಡಿದ ಬಿಜೆಪಿ, ಜೆಡಿಎಸ್‌ ಮಾಜಿ ಶಾಸಕರು

ಬೆಂಗಳೂರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಕೆ.ಎಸ್. ಕಿರಣ್ ಕುಮಾರ್ , ವಿಧಾನ ಪರಿಷತ್ ಮಾಜಿ ಸದಸ್ಯ, ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ಸಂದೇಶ್ ನಾಗರಾಜ್ ಮತ್ತು ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್‌ನ ಎಚ್. ನಿಂಗಪ್ಪ ಅವರು ಸೋಮವಾರ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ …

Read More »

ಬಿಜೆಪಿಯಿಂದ ಹಿಂಸಾತ್ಮಕ ರಾಜಕಾರಣ: ಸುರ್ಜೇವಾಲಾ ಆರೋಪ

ಬೆಳಗಾವಿ: ‘ಬಿಜೆಪಿ ನಾಯಕರು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೂಲಕ ಕಾಂಗ್ರೆಸ್‌ ನಾಯಕರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸೋಲಿನ ಭಯದಿಂದ ಹತಾಶರಾಗಿ ಹಿಂಸಾತ್ಮಕ ರಾಜಕಾರಣಕ್ಕೆ ಇಳಿದಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಪಾದಿಸಿದರು.   ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಬೆಳಗಾವಿ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ ‘ಗೃಹಜ್ಯೋತಿ’ ಮತ್ತು ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಗಳ ಪ್ರಮಾಣಪತ್ರ ವಿತರಣಾ ಅಭಿಯಾನದ ಉದ್ಘಾಟನಾ …

Read More »

ಪ್ರಧಾನಿ ಮೋದಿ ಬೆಳಗಾವಿ ಭೇಟಿ 27ಕ್ಕೆ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ಬೆಳಗಾವಿಗೆ ಆಗಮಿಸಲಿದ್ದು, ಹೈಟೆಕ್‌ ರೈಲ್ವೆ ನಿಲ್ದಾಣ ಉದ್ಘಾಟಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ನಾಯಕರು ಭಾನುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.   ‘ಫೆ.27ರಂದು ಶಿವಮೊಗ್ಗದಲ್ಲಿ‌ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸುವರು. ಬಳಿಕ, ಇಲ್ಲಿಗೆ ಬಂದು ರೈಲ್ವೆ ನಿಲ್ದಾಣ ಉದ್ಘಾಟಿಸುವರು. ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದರೊಂದಿಗೆ ರೋಡ್ ಷೋ ನಡೆಸುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ …

Read More »

ಬಿಜೆಪಿಯ ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಹೋರಾಟ: ಮುತಾಲಿಕ್

ಬಾಗಲಕೋಟೆ: ‘ನನ್ನದು ಬಿಜೆಪಿ ವಿರುದ್ಧದ ಹೋರಾಟವಲ್ಲ. ಬಿಜೆಪಿಯಲ್ಲಿರುವ ಹಿಂದೂ ದ್ರೋಹಿಗಳು, ಅದರ ತತ್ವ, ಸಿದ್ಧಾಂತ ಹಾಳು ಮಾಡಿದವರ ವಿರುದ್ಧ ಹೋರಾಟ’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಕಳದಲ್ಲಿ ಗೆದ್ದರೂ ಬಿಜೆಪಿಯನ್ನೇ ಬೆಂಬಲಿಸುತ್ತೇನೆ. ಆದರೆ ಡೋಂಗಿ ಹಿಂದುತ್ವವಾದಿಗಳಿಗೆ ಬುದ್ಧಿ ಕಲಿಸಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದರು. ‘ನನಗೆ ಬಾಗಲಕೋಟೆ ಮತ್ತು ಕಾರ್ಕಳದಿಂದ ಸ್ಪರ್ಧಿಸಲು ಬೇಡಿಕೆ ಇತ್ತು. ಕಾರ್ಕಳವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕಾರ್ಕಳದಲ್ಲಿ …

Read More »

ಅಸಾದುದ್ದೀನ್ ಓವೈಸಿಯ ನಿವಾಸದ ಮೇಲೆ ಕಲ್ಲು ತೂರಾಟ

ದೆಹಲಿ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದಿಲ್ಲಿ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ (ಫೆ.19 ರಂದು) ಸಂಜೆ ಓವೈಸಿ ಅವರ ದಿಲ್ಲಿ ನಿವಾಸದ ಮೇಲೆ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಓವೈಸಿ, ನನ್ನ ದಿಲ್ಲಿಯ ನಿವಾಸದ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಇಂಥ ಘಟನೆ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ ಎಂದಿದ್ದಾರೆ. ದುಷ್ಕರ್ಮಿಗಳ ಗುಂಪೊಂದು …

Read More »

ಗೃಹಲಕ್ಷ್ಮೀ, ಗೃಹಜ್ಯೋತಿ ಕಾರ್ಯಕ್ರಮದಿಂದ ಬಿಜೆಪಿ ತಲ್ಲಣ: ಸುರ್ಜೇವಾಲಾ

ಬೆಳಗಾವಿ: ಕಾಂಗ್ರೆಸ್‌ನ ಗೃಹಲಕ್ಷ್ಮೀ, ಗೃಹಜ್ಯೋತಿ ಗ್ಯಾರಂಟಿ ಕಾರ್ಯಕ್ರಮವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮನೆ-ಮನೆಗೂ ಒಯ್ಯುತ್ತಾರೆ. ಪ್ರತಿ ಮನೆಗೂ ತೆರಳಿ ರಿಜಿಸ್ಟ್ರೇಷನ್‌ ಮಾಡುತ್ತಾರೆ. ಎಲ್ಲ ಕ್ಷೇತ್ರದಲ್ಲಿಯೂ ತೆರಳಿ ಕಾರ್ಡ್‌ ವಿತರಿಸುತ್ತೇವೆ. ಗೃಹಲಕ್ಷ್ಮೀ, ಗೃಹಜ್ಯೋತಿ ಕಾರ್ಯಕ್ರಮದಿಂದ ಬಿಜೆಪಿ ತಲ್ಲಣಗೊಂಡಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತ ನಾಡಿದ ಅವರು, ಬಿಜೆಪಿ 100 ಕೋಟಿ ರೂ.ಗೆ ಶಾಸಕರನ್ನು ಖರೀದಿ ಮಾಡುತ್ತದೆ. ಕಾಂಗ್ರೆಸ್‌ ಟಿಕೆಟ್‌ ಅರ್ಜಿಗಾಗಿ ಪಾರದರ್ಶಕ ರೀತಿಯಲ್ಲಿ ಎರಡು …

Read More »

ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್‌ ವಿಧಿವಶ

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಶ್ರಿನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್‌ ಸೋಮವಾರ (ಫೆ.20 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.   1966 ರಲ್ಲಿ ಬಂದ ʼಸಂಧ್ಯಾರಾಗʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಿರ್ದೇಶಕರಾಗಿ ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ …

Read More »

ಹಣ ಕೊಟ್ಟರೆ ಮಾತ್ರ ಬ್ಲೂಟಿಕ್‌ ಸೇವೆ: ಹೊಸ ನಿಯಮ ಜಾರಿಗೆ ತರಲಿದೆ ಫೇಸ್‌ ಬುಕ್‌ ಮೆಟಾ

ವಾಷಿಂಗ್ಟನ್:‌ ಟ್ವಿಟರ್‌ ನಂತೆ ಫೇಸ್‌ ಬುಕ್‌ ಮೆಟಾ ಕೂಡ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಶೀಘ್ರ ಆರಂಭಿಸುವುದಾಗಿ ಮೆಟಾ ಸಿಇಒ‌ ಮಾರ್ಕ್ ಜುಕರ್‌ಬರ್ಗ್ ಭಾನುವಾರ ಘೋಷಿಸಿದ್ದಾರೆ. ಈ ಬಗ್ಗೆ ಜುಕರ್‌ಬರ್ಗ್ ಈ ವಾರ ನಾವು ಮೆಟಾ ವೆರಿಫೈಡ್‌ ಖಾತೆಗಳಿಗೆ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.   ಏನೇನು ಇರಲಿದೆ?: ಈಗಾಗಲೇ ವೆರಿಫೈಡ್‌ ಆಗಿರುವ ಖಾತೆಗಳಿಗೆ ತಿಂಗಳಿಗೆ ಇಂತಿಷ್ಟು ಶುಲ್ಕವನ್ನು ವಿಧಿಸಬೇಕಾಗುತ್ತದೆ. ಅಥವಾ ಹೊಸದಾಗಿ ವೆರಿಪೈಡ್‌ ಆಗುವ ಖಾತೆಗಳು …

Read More »

ಮಂಗಳೂರಿನ ಆಸ್ಪತ್ರೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಮಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಕಾರ್ಯಕ್ರಮ ಪ್ರಯುಕ್ತ ನಗರಕ್ಕೆ ಆಗಮಿಸಿರುವ ಅರುಣ್ ಸಿಂಗ್ ಅವರು ಕೈ ನೋವಿನ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.   ಜೆಪಿ ನಡ್ಡಾ ಅವರು ರವಿವಾರ ರಾತ್ರಿ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತ ಮಾಡಿದ್ದ ಅರುಣ್ ಸಿಂಗ್ ಅವರೂ ನಗರದಲ್ಲೇ …

Read More »

ಶಿವಸೇನೆ ಹೆಸರು ಮತ್ತು ಚಿಹ್ನೆ ಹಂಚಿಕೆ ಗದ್ದಲದಲ್ಲಿ ಭಾಗಿಯಾಗುವುದಿಲ್ಲ: ಶರದ್ ಪವಾರ್

ಪುಣೆ : ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ‘ಶಿವಸೇನೆ’ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರ ಮತ್ತು ಅದಕ್ಕೆ ‘ಬಿಲ್ಲು-ಬಾಣ’ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಮತ್ತು ಅದರ ಬಗ್ಗೆ ವಿವಾದದಲ್ಲಿ ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.   ‘ಬಿಲ್ಲು ಮತ್ತು ಬಾಣ’ ನಷ್ಟವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. …

Read More »