Breaking News

ಬಬಲೇಶ್ವರ ಕ್ಷೇತ್ರದಲ್ಲಿ ಎಂಎಚ್ ತೇರಾ-ಬಾರಾ ವಾಹನ, ಚುನಾವಣೆಗೆ ಮುನ್ನವೇ ಭರಪೂರ ಆಮಿಷ; ಪ್ರಜಾಧ್ವನಿಯಲ್ಲಿ ಸೀರೆ-ಮೊಬೈಲ್ ಪ್ರತಿಧ್ವನಿ !

ವಿಜಯಪುರ: ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಸೀರೆ-ಮೊಬೈಲ್‌ಗಳ ಸದ್ದು ಪ್ರತಿಧ್ವನಿಸುತ್ತಿದೆ ! ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ಇಂಥದ್ದೊಂದು ಪ್ರತಿಧ್ವನಿ ಕೇಳಿ ಬರುತ್ತಿದ್ದು, ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ನೋಂದಣಿಯಾಗಿರುವ ಎಂಎಚ್-ತೇರಾ, ಎಂಎಚ್-ಬಾರಾ ವಾಹನಗಳು ಬಬಲೇಶ್ವರದಲ್ಲಿ ಕಾರ್ಯಾಚರಿಸುತ್ತಿದ್ದು, ಸೀರೆ ಹಾಗೂ ಮೊಬೈಲ್‌ಗಳನ್ನು ಹಂಚಿ ಜನರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ …

Read More »

ತಂದೆಗೆ ಜೀವದಾನ ಮಾಡಿದ ಮಗಳು!

ಕೇರಳದ 17 ವರ್ಷದ ಬಾಲಕಿಯೊಬ್ಬಳು ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡಿ ತಂದೆಯ ಪ್ರಾಣ ಉಳಿಸಲು ನೆರವಾದ ಪ್ರಕರಣವೊಂದು ನಡೆದಿದೆ. ಈ ಮೂಲಕ, 17 ವರ್ಷದ ದೇವನಂದ ಎಂಬ 12ನೇ ತರಗತಿಯ ಬಾಲಕಿ ಅಂಗಾಂಗ ದಾನ ಮಾಡಿದ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.   ಕಾನೂನು ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಆದರೆ ಅದರಿಂದ ವಿನಾಯಿತಿ ನೀಡುವಂತೆ ಕೋರಿ ದೇವನಂದ ಕೇರಳ ಹೈಕೋರ್ಟ್​ಗೆ ಮೊರೆ …

Read More »

ರೋಹಿಣಿ ವಿರುದ್ಧ 3 ಪುಟಗಳ ದೂರು ನೀಡಿದ ಡಿ.ರೂಪಾ; ತನಿಖೆಗೆ ಆಗ್ರಹಿಸಿದ ಆ ಏಳು ಪ್ರಕರಣಗಳು ಇಂತಿವೆ.

ಬೆಂಗಳೂರು: ಐಪಿಎಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿಧಾನ ಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೂರು ಪುಟಗಳ ದೂರು ನೀಡಿದ್ದಾರೆ. ಇದಕ್ಕೂ ಮೊದಲು ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ, ನನ್ನ ಮೇಲೆ ಡಿ.ರೂಪ ಮೌದ್ಗಿಲ್ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹೆಚ್ಚಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದರು. …

Read More »

ಸಂಗೀತ ಕಛೇರಿಯಲ್ಲಿ ಶಾಸಕರ ಪುತ್ರನಿಂದ ಸೋನು ನಿಗಮ್​ ಮೇಲೆ ದಾಳಿ!

ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ಅವರ ಭದ್ರತಾ ಸಿಬ್ಬಂದಿ ಮತ್ತು ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಮಗ ಹಾಗೂ ಸೋದರಳಿಯ ನಡುವೆ ತಳ್ಳಾಟ ನಡೆದಿದ್ದು ಜಗಳದ ನಂತರ ಗಾಯಕ ಸೋನು ನಿಗಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.   ಮುಂಬೈನ ಚೆಂಬೂರ್‌ನಲ್ಲಿ ಸೋನು ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಇದು ಸಂಭವಿಸಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ಸೋನು ಸುರಕ್ಷಿತವಾಗಿದ್ದಾರೆ. ಆದರೆ ಅವರ ಸಂಗೀತ …

Read More »

ಹಾರೂಗೇರಿ ಪೊಲೀಸರ ಕಾರ್ಯಾಚರಣೆ ಯಿಂದ ಅಪಹರಣ ಪ್ರಕರಣ ಭೇದಿಸಲು ಯಶಸ್ವಿ ಯಾದ ತಂಡ

ರಾಯಬಾಗ :ತಾಲೂಕಿನ ಖನದಾಳ ಗ್ರಾಮದ ಅಪಹರಣ ಪ್ರಕರಣ ಭೇದಿಸಲಾಗಿದ್ದು ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ನಾಲ್ಕು ಲಕ್ಷ ಹತ್ತು ಸಾವಿರ ನಗದು ಕೃತಕ್ಕೆ ಬಳಸಿದ್ದ ಎರಡು ಕಾರು ಒಂದು ತಲವಾರ ಚಾಕು ಅಪಹರಣ ಮಾಡಿದವನಿಗೆ ಹಾಕುವ ಕರಿ ಬಣ್ಣದ ಕನ್ನಡಕಾ ಆರೋಪಿತದ ಎಳು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾರೂಗೇರಿ ಪೋಲಿಸ ತಂಡ ಯಶಸ್ವಿ ಆಗಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಳಗಾವಿ ಪೋಲಿಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ …

Read More »

ನಾನು ಅಪ್ಪಗ ಹುಟ್ಟಿನಿ, ಆದರ ಗ್ಯಾರಂಟಿ ಇಲ್ಲ ಅಂತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ:ಯತ್ನಾಳ್

ಬಾಗಲಕೋಟೆ: ಒಬ್ಬ ಹಿಂದೂ (Hindu), ಭಾರೀ ಕಟ್ಟರ್ ಹಿಂದೂ ಆದ್ರೆ ರಾಮ ರಾಜ್ಯ ಕೊಡುತ್ತಾನೆ. ಟಿಪ್ಪು ಸುಲ್ತಾನ್ (Tipu Sultna) ಅಂತಹವರು ಮೂರುವರೆ ದೇವಸ್ಥಾನ ಕೆಡವಿ ಹಾಕಿ, ಲಕ್ಷಾಂತರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ‌. ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿದರು. ಶಿವಾಜಿ ಮಹಾರಾಜರ (Chatrapati Shivaji Maharaj) ಬಗ್ಗೆ ಮಾತನಾಡಿದ್ರೆ ಕೆಲವರಿಗೆ ನೋವು …

Read More »

ರೂಪಾ-ರೋಹಿಣಿ ಕಿತ್ತಾಟದಲ್ಲಿ ಪ್ರತಾಪ ಸಿಂಹ ಎಂಟ್ರಿ.. IPS​ ಅಧಿಕಾರಿ ಪರ ಬ್ಯಾಟ್..!

ಮೈಸೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಸಂಬಂಧ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು ಐಪಿಎಸ್ ಅಧಿಕಾರಿ ರೂಪಾ ಅವರು ಎತ್ತಿರುವ ಪ್ರಶ್ನೆಗಳನ್ನು ಕೂಲಂಕುಶವಾಗಿ ನೋಡಿದೆ. ಎಲ್ಲಾ ಪ್ರಶ್ನೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂದಿದ್ದಾರೆ. ಅದಕ್ಕೆ‌ ಸಂಬಂಧಪಟ್ಟವರು ಉತ್ತರ ನೀಡಬೇಕು. ರಾಜಕಾರಣಿಗಳ ವಿರುದ್ಧ ಬಂದಾಗ ಪ್ರಶ್ನೆ ಮಾಡುತ್ತಾರೆ. ಆದರೆ ಇವಾಗ ಆ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಅವರು ಪ್ರತಿಕ್ರಿಯೆ …

Read More »

ಹುಬ್ಬಳ್ಳಿಯಲ್ಲಿ “ಕಮಲ” ಪಡೆ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಪ್ರತಿಕೃತಿ ದಹಿಸಿದ್ದು ಏಕೆ?

ಹುಬ್ಬಳ್ಳಿ, ಫೆಬ್ರವರಿ, 20: ಎಚ್‌.ಡಿ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿಯವರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ಹಾಗೂ ಪ್ರಲ್ಹಾದ್‌ ಜೋಶಿಯವರ ತೇಜೋವಧೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಪ್ರಲ್ಹಾದ್‌ ಜೋಶಿಯವರ ವಿರುದ್ಧ ಬಿಜೆಪಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ವಿನೂತನ ರೀತಿಯಲ್ಲಿ ಪ್ರತಿಭಟನೆ …

Read More »

ಎಪ್ರಿಲ್ 1 ರಿಂದ ಅಂಗಡಿಗಳಲ್ಲಿ ಮದ್ಯ ಸೇವನೆ ನಿಷೇಧ

ಭೋಪಾಲ್: ರಾಜ್ಯದ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಮದ್ಯ ಸೇವನೆಯನ್ನು ಕಡಿಮೆಗೊಳಿಸುವ ಪ್ರಯತ್ನದ ಭಾಗವಾಗಿ ಎಪ್ರಿಲ್ 1 ರಿಂದ ಮಧ್ಯಪ್ರದೇಶದಲ್ಲಿ ಮದ್ಯದ ಅಂಗಡಿಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಅನುಮತಿಸಲಾಗುವುದಿಲ್ಲ. ರಾಜ್ಯ ಸಚಿವ ಸಂಪುಟವು ರವಿವಾರ ಈ ನೀತಿಗೆ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ 2010 ರಿಂದ ಯಾವುದೇ ಮದ್ಯದ ಅಂಗಡಿಯನ್ನು ತೆರೆದಿಲ್ಲ ಎಂದು ಅವರು ಹೇಳಿದರು. ‘ಈಗ, ಮದ್ಯದ ಅಂಗಡಿಗಳಲ್ಲಿ ಮದ್ಯ ಸೇವನೆಗಾಗಿ ಯಾವುದೇ …

Read More »

ಧಾರವಾಡದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿಗೆ ಶಂಕುಸ್ಥಾಪನೆ

ಧಾರವಾಡ: ‘ಶಾಸ್ತ್ರೀಯ ಭಾಷೆ ಮತ್ತು ಕಲೆಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲಾಗುವದು’ ಎಂದು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘಾವಲ್ ಭರವಸೆ ನೀಡಿದರು. ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.   ‘ಸಾಂಸ್ಕೃತಿಕ ಊರು ಧಾರವಾಡವನ್ನು ಮುಂದೆ ಕಲೆ ಹಾಗೂ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಅಭುವೃದ್ಧಿಪಡಿಸಲಾಗುವುದು. ಅದಕ್ಕೆ ಅಗತ್ಯವಿರುವ ಎಲ್ಲಾ ಅಕಾಡೆಮಿಗಳ ಕಚೇರಿಯನ್ನು ಧಾರವಾಡಕ್ಕೆ ನೀಡಲಾಗುವುದು. ಮುಂದೆ ಸಂಗೀತ, ನಾಟಕ ಆಕಡೆಮಿ …

Read More »