ಮೈಸೂರು: ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಜೆ 4.42 ರಿಂದ 5.06 ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ ಎಸ್.ತಂಗಡಗಿ, ಯದುವಂಶಸ್ಥ, ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತ …
Read More »ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಗಾಂಧಿ ಜಯಂತಿ ಆಚರಿಸಿಲ್ಲ ಎಂಬ ಆರೋಪ
ಚಿಕ್ಕೋಡಿ (ಬೆಳಗಾವಿ) : ದೇಶಾದ್ಯಂತ ಇವತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 156ನೇ ಜನ್ಮ ದಿನವನ್ನು ಆಚರಣೆ ಮಾಡಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಗಾಂಧಿ ಜಯಂತಿಯನ್ನು ಆಚರಿಸದೇ ಕರ್ತವ್ಯ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ. ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಕೂಡ ಗಾಂಧಿ ಜಯಂತಿಯನ್ನು ಆಚರಿಸಿಕೊಂಡು ಬಂದು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಆದರೆ ಝುಂಜರವಾಡ ಗ್ರಾಮದ …
Read More »ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಣಬರಗಿ ನಿವಾಸಿಯೊಬ್ಬರು ಸಾವಯವ ಕೃಷಿಯತ್ತ ಸಾಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬೆಳಗಾವಿ : ಕಲಿತಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್. ಬಾರ್ ಉದ್ಯಮ, ಸರ್ಕಾರಿ ಗುತ್ತಿಗೆ ಸೇರಿ ಮತ್ತಿತರ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಿದರೂ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ. ಈಗ ಅವರಿಗೆ ನೆಮ್ಮದಿ ಸಿಕ್ಕಿದ್ದು, ಸಾವಯವ ಕೃಷಿಯಲ್ಲಿ. 80ರ ಇಳಿ ವಯಸ್ಸಿನಲ್ಲೂ ಉತ್ತಮ ಆರೋಗ್ಯದ ಜೊತೆಗೆ ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಯುವಕರನ್ನೂ ನಾಚಿಸುವಂತೆ ಜಿಲ್ಲೆಯ ಕೃಷಿಕರೊಬ್ಬರು ಸಾಧನೆ ಮಾಡಿದ್ದಾರೆ. ಹೌದು, ತಲೆ ಮೇಲೆ ಟೋಪಿ, ಸಫಾರಿ …
Read More »2 ಬಾರಿ ಮಾರಾಟವಾದ ಜಮೀನಿನ ಹಕ್ಕುಗಳ ಮರುಸ್ಥಾಪನೆಗೆ PTCL ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ: ಹೈಕೋರ್ಟ್
ಬೆಂಗಳೂರು: ಪರಿಶಿಷ್ಟ ವರ್ಗದವರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಮಾರಾಟ ಮಾಡಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಕಾಯಿದೆ (ಪಿಟಿಸಿಎಲ್)ಯಡಿ ಹಿಂಪಡೆದು, ಅದೇ ಭೂಮಿಯನ್ನು ಮತ್ತೆ ಮಾರಾಟ ಮಾಡಿ ಮರು ಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮಂಜೂರಾದ ಭೂಮಿ ಒಮ್ಮೆ ಪುನಃಸ್ಥಾಪನೆಯಾದ ಬಳಿಕ ಕಾನೂನು ಬದ್ಧ ಉತ್ತರಾಧಿಕಾರಿಗಳ ಪರವಾಗಿ ಹಕ್ಕುಗಳನ್ನು ಮರು ಸ್ಥಾಪಿಸುವುದಕ್ಕೆ ಕೋರಿ ಅರ್ಜಿ ಸಲ್ಲಿಸಲು …
Read More »ದಸರಾ ಜಂಬೂಸವಾರಿ ಇಂದು: ಭೀಮನ ತೂಕ 440 ಕೆ.ಜಿ ಹೆಚ್ಚಳ, ಉಳಿದ ಆನೆಗಳ ತೂಕ ಹೀಗಿದೆ
ಮೈಸೂರು: ಆಯುಧ ಪೂಜೆಯ ದಿನವಾದ ನಿನ್ನೆ(ಬುಧವಾರ) 14 ದಸರಾ ಆನೆಗಳ ತೂಕ ಹಾಕಲಾಯಿತು. ಭೀಮ ಆನೆಯ ತೂಕ 440 ಕೆ.ಜಿ ಹೆಚ್ಚಳವಾಗಿದ್ದು ಕಂಡುಬಂದಿದ್ದು, ಗಜಪಡೆಯಲ್ಲಿ ಇವನೇ ಬಲಶಾಲಿಯಾಗಿದ್ದಾನೆ. ಶಿಬಿರಗಳಿಂದ ಅರಮನೆಗೆ ಬಂದಾಗ ಯಾವ ಆನೆ ಎಷ್ಟು ತೂಕವಿತ್ತು, ಈಗ ಎಷ್ಟು ತೂಕವಿದೆ ಎಂಬ ಮಾಹಿತಿ ಪಡೆಯಲು ಆನೆಗಳನ್ನು ತೂಕ ಹಾಕಲಾಗುತ್ತದೆ. ಆನೆಗಳು ಅರಮನೆಗೆ ಬಂದಾಗ(ಕೆ.ಜಿ) ಹೆಚ್ಚಳವಾದ ತೂಕ(ಕೆ.ಜಿ) ಒಟ್ಟು ತೂಕ(ಕೆ.ಜಿ) ಅಭಿಮನ್ಯು 5635 275 5910 ಲಕ್ಷ್ಮಿ 3940 210 4150 …
Read More »ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹೆಚ್ಚುವರಿ 1,01,603 ಕೋಟಿ ರೂ. ತೆರಿಗೆ ಪಾಲ ಬಿಡುಗಡೆ
ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ 1,01,603 ಕೋಟಿ ರೂ. ತೆರಿಗೆ ಪಾಲನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 3,705 ಕೋಟಿ ರೂ ಹಂಚಿಕೆ ಮಾಡಲಾಗಿದೆ. ರಾಜ್ಯಗಳ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಬಂಡವಾಳ ವೆಚ್ಚ ವೇಗಗೊಳಿಸಲು ಹಾಗೂ ಮುಂಬರುವ ಹಬ್ಬಗಳ ಋತುವಿನ ಹಿನ್ನೆಯಲ್ಲಿ ಕೇಂದ್ರ ಅಕ್ಟೋಬರ್ 1 ರಂದು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ 1,01,603 ಕೋಟಿ ರೂ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ ಎಂದು …
Read More »ಕೈದಿಗಳ ಐಡಿಗೆ ಆಧಾರ್ ಜೋಡಿಸುವ ಯೋಜನೆಗೆ ರಾಜ್ಯದಲ್ಲಿ ಹಿನ್ನಡೆ
ಬೆಂಗಳೂರು: ಕೈದಿಗಳ ಜೈಲು ಐಡಿ (ಗುರುತಿನ ಚೀಟಿ)ಯೊಂದಿಗೆ ಆಧಾರ್ ನಂಬರ್ ಜೋಡಿಸುವ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯದ ಜೈಲುಗಳಲ್ಲಿ ಹಿನ್ನಡೆ ಉಂಟಾಗಿದೆ. ಟ್ರ್ಯಾಕ್ ಆಗುವ ಭಯದಿಂದ ಆಧಾರ್ ನಂಬರ್ ನೀಡದೆ ಕೈದಿಗಳು ಕಳ್ಳಾಟವಾಡುತ್ತಿದ್ದಾರೆ. ಆಧಾರ್ ಲಿಂಕ್ ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರವೇ ಸ್ಪಷ್ಟ ಮಾರ್ಗಸೂಚಿ ರೂಪಿಸಿದರೆ ಸೂಕ್ತ ಎಂದು ಜೈಲಾಧಿಕಾರಿಗಳ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೈಲಲ್ಲಿರುವ ಕೈದಿಗಳು ಮತ್ತು ಅವರ ಭೇಟಿಗೆ ಬರುವ ಸಂದರ್ಶಕರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿ 2023ರಲ್ಲೇ ಕೇಂದ್ರ …
Read More »ರಷ್ಯಾ ನೆಲದಲ್ಲಿ ವಿಜಯಪುರದ ಯುವತಿ `ಶಿಫಾ’ ವಿಶ್ವಶಾಂತಿ ಸಂದೇಶ
ರಷ್ಯಾ ನೆಲದಲ್ಲಿ ವಿಜಯಪುರದ ಯುವತಿ `ಶಿಫಾ’ ವಿಶ್ವಶಾಂತಿ ಸಂದೇಶ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿದ ಕುಮಾರಿ ಶಿಫಾ ಜಮಾದಾರ ವಿಶ್ವಶಾಂತಿಯ ಅಗತ್ಯತೆ, ಶಾಂತಿ ಸಂದೇಶ ಸಾರುವಲ್ಲಿ ಭಾರತದ ಪಾತ್ರ ಕುರಿತು ಮನಮುಟ್ಟುವಂತೆ ಮಾತನಾಡುವ ಮೂಲಕ ರಷ್ಯಾದಲ್ಲಿ ಶಾಂತಿ ಮಂತ್ರದ ಸಂದೇಶ ಸಾರಿದ್ದಾರೆ. ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟೀನ್, ಮಯನ್ಮಾರ್ ರಾಷ್ಟçಪತಿ, ಅರ್ಮೇನಿಯಾ …
Read More »ಕಾರ್ಖಾನೆಯ ಪುನಶ್ಚೇತನ ಕುರಿತು ಚರ್ಚೆ ನಡೆಸಿದ ನೂತನ ನಿರ್ದೇಶಕರು
ಕಾರ್ಖಾನೆಯ ಪುನಶ್ಚೇತನ ಕುರಿತು ಚರ್ಚೆ ನಡೆಸಿದ ನೂತನ ನಿರ್ದೇಶಕರು ಎಂ.ಕೆ.ಹುಬ್ಬಳ್ಳಿ:ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪ್ಯಾನಲ್‌ನ ನಿರ್ದೇಶಕರು ಮಂಗಳವಾರ ಸಭೆ ಸೇರಿ ಕಾರ್ಖಾನೆಯ ಪ್ರಸ್ತುತ ಸ್ಥಿತಿ ಮತ್ತು ಪುನಶ್ಚೇತನ ಕುರಿತು ಚರ್ಚಿಸಿದರು. ನೂತನ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು. ಮೊದಲು ವಿಘ್ನ ವಿನಾಶಕ ಶ್ರೀ ಗಣಪತಿ ಹಾಗೂ ಈ ಭಾಗದ ಶಕ್ತಿದೇವತೆ …
Read More »ನಾಡಿನ ಜನತೆಗೆ ನಾಡಹಬ್ಬ ದಸರಾದ ಶುಭಕೋರಿದ ಸಿಎಂ
ನಾಡಿನ ಜನತೆಗೆ ನಾಡಹಬ್ಬ ದಸರಾದ ಶುಭಕೋರಿದ ಸಿಎಂ ಬಿಜೆಪಿ ಸಮಾಜದಲ್ಲಿ ಅಸಮಾನತೆ ಬಯಸುತ್ತದೆ ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ; ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ನಾಡಹಬ್ಬ ದಸರಾದ ಶುಭಕೋರಿದ ಸಿಎಂ ಬಿಜೆಪಿ ಸಮಾಜದಲ್ಲಿ ಅಸಮಾನತೆ ಬಯಸುತ್ತದೆ ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ …
Read More »
Laxmi News 24×7