Breaking News

ಮಳೆ ಅಬ್ಬರ: ಇಂದು ಶಿವಮೊಗ್ಗ ಜಿಲ್ಲಾದ್ಯಂತ, ಚಿಕ್ಕಮಗಳೂರಿನ ಕೆಲ ತಾಲೂಕುಗಳಲ್ಲಿ ಶಾಲೆಗೆ ರಜೆ

ಮಳೆ ಅಬ್ಬರ: ಇಂದು ಶಿವಮೊಗ್ಗ ಜಿಲ್ಲಾದ್ಯಂತ, ಚಿಕ್ಕಮಗಳೂರಿನ ಕೆಲ ತಾಲೂಕುಗಳಲ್ಲಿ ಶಾಲೆಗೆ ರಜೆ ಶಿವಮೊಗ್ಗ: ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಶನಿವಾರ (ಇಂದು) ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಅರೆಂಜ್ ಅಲರ್ಟ್ ಘೋಷಿಸಿದೆ. ಇದರಿಂದ, ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ …

Read More »

ಕಾಲ್ತುಳಿತ ಪ್ರಕರಣ: ಅಧಿಕಾರಿಗಳ ಅಮಾನತು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಜನರ ಗುಂಪು ಸೇರುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ಐದು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆೆ ತಿಳಿಸಿದೆ. ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ, ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ತೆಗೆದು ಹಾಕುವಂತೆ ಕೋರಿರುವ ಆರ್‌ಸಿಬಿ …

Read More »

‘ನನ್ನ ಬೆಳಗಾವಿಗಾಗಿ ನನ್ನ ಸಲಹೆ’: ಹೊಸ ಅಭಿಯಾನ ಆರಂಭಿಸಿದ ಪೊಲೀಸ್ ಕಮಿಷನರ್

ಬೆಳಗಾವಿ: ಉತ್ತಮ, ಸುರಕ್ಷಿತ ಬೆಳಗಾವಿ ನಗರ ನಿರ್ಮಾಣಕ್ಕೆ ಪೊಲೀಸ್ ಕಮಿಷನರ್ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಪೊಲೀಸ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗಾಗಿಯೇ ಒಂದು ಪೇಜ್ ತೆರೆದಿದ್ದಾರೆ. “ನನ್ನ ಬೆಳಗಾವಿಗಾಗಿ ನನ್ನ ಸಲಹೆ” ಎಂಬ ಘೋಷವಾಕ್ಯದಡಿ ಸಾರ್ವಜನಿಕರಿಗೆ ಸಲಹೆ ನೀಡುವಂತೆ ಕೋರಿದ್ದಾರೆ. ಇದರಿಂದ ಬೆಳಗಾವಿ ಪೊಲೀಸರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೌದು, ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಭೂಷಣ ಗುಲಾಬರಾವ್ ಬೊರಸೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹೊಚ್ಚ …

Read More »

ಮೃತ್ಯುಕೂಪದಂತೆ ತೋರುತ್ತಿದೆ ಲೋಂಡಾಫಾಟಾ ರಸ್ತೆ…!!! ಗುಂಡಿಗಳಲ್ಲಿ ಕಾಣೆಯಾದ ರಸ್ತೆ!!!

ಮೃತ್ಯುಕೂಪದಂತೆ ತೋರುತ್ತಿದೆ ಲೋಂಡಾಫಾಟಾ ರಸ್ತೆ…!!! ಗುಂಡಿಗಳಲ್ಲಿ ಕಾಣೆಯಾದ ರಸ್ತೆ!!! ಬೆಳಗಾವಿ ಪಣಜಿ ಮಾರ್ಗದ ದುರಾವಸ್ಥೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಅಪಾಯಕಾರಿ ರಸ್ತೆಯ ಪರಿಸ್ಥಿತಿಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ. ಹೌದು, ಬೆಳಗಾವಿ ಪಣಜಿ ಹೆದ್ದಾರಿಯ ಲೋಂಡಾಫಾಟಾ ಹತ್ತಿರದ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತ್ಯಂತ ಭಯಂಕರವಾಗಿದೆ. ಮಳೆಯ ಹಿನ್ನೆಲೆ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಅಭಿವೃದ್ಧಿ …

Read More »

ಸಚಿವ ಜಮೀರ ಅಹ್ಮದ ಮೇಲೆ ಗರಂ ಆದ ಶಾಸಕ ಅಶೋಕ ಮನಗೂಳಿ

ಸಚಿವ ಜಮೀರ ಅಹ್ಮದ ಮೇಲೆ ಗರಂ ಆದ ಶಾಸಕ ಅಶೋಕ ಮನಗೂಳಿ  ಆಶ್ರಯ ಯೋಜನೆಯಲ್ಲಿ ಮನೆಯ ವಿತರಣೆ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ ಅಹ್ಮದ ಮೇಲೆ ಶಾಸಕರೊರ್ವರು ಕೋಪಗೊಂಡ ವಿಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಕಾಂಗ್ರೆಸ್ ಪಕ್ಷದ ಶಾಸಕ ಅಶೋಕ ಮನಗೂಳಿ ಕೋಪಗೊಂಡಿದ್ದಾರೆ. 23 ಗ್ರಾಮ ಪಂಚಾಯತಿಗೆ ಮನೆ ಹೇಗೆ ಹಂಚಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಸಚಿವ ಜಮೀರ ಅಹ್ಮದ ಚೀಟಿ‌ ಮೇಲೆ ಏನೊ ಬರೆದುಕೊಟ್ಟಿದ್ದಾರೆ‌. …

Read More »

ಮಹಾದಾಯಿಗಾಗಿ ಕೇಂದ್ರ ಹಸ್ತಕ್ಷೇಪ ಮಾಡಲಿ

ಮಹಾದಾಯಿಗಾಗಿ ಕೇಂದ್ರ ಹಸ್ತಕ್ಷೇಪ ಮಾಡಲಿ ಗೋವಾ ಸಿಎಂ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ ಹೇಳಿದ್ದೇನು? ಕೇಂದ್ರ ಸರ್ಕಾರ ತಾನೇ ಹೇಳಿದಂತೆ ಕುಡಿಯುವ ನೀರಿಗೆ ಯಾವುದೇ ನಿರ್ಬಂಧಗಳಿರಬಾರದು. ಕೇಂದ್ರ ಸರ್ಕಾರವೇ ಹಸ್ತಕ್ಷೇಪ ನಡೆಸಿ ಮಹಾದಾಯಿ ಯೋಜನೆ ಕಾಮಗಾರಿಗೆ ಅನುವು ಮಾಡಿಕೊಡಬೇಕೆಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಗೋವಾ ಸಿಎಂ ಮಹಾದಾಯಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ 2022ರಲ್ಲೇ ಸರ್ಕಾರ ಅನುಮತಿಯನ್ನು ನೀಡಿತ್ತು. ನಂತರ ಹಲವಾರು …

Read More »

ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗೆ ಬದ್ಧನಿರುವೆ:ಬಾಲಚಂದ್ರ ಜಾರಕಿಹೊಳಿ

ಮಸಗುಪ್ಪಿ – ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗೆ ಬದ್ಧನಿರುವೆ. ಬೆಮುಲ್ ನಲ್ಲಿ ಎರಡು ಸ್ಥಾನಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದ್ದು, ಅದರಲ್ಲಿ ಒಂದನ್ನು ಮೂಡಲಗಿ- ಗೋಕಾಕ ತಾಲ್ಲೂಕಿಗೆ ಸೇರಿರುವ ಭಗೀರಥ- ಉಪ್ಪಾರ ಸಮಾಜಕ್ಕೆ ಸೇರಿರುವ ರೈತಪರ ಕಾಳಜಿಯುಳ್ಳ ವ್ಯಕ್ತಿಯೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭರವಸೆಯನ್ನು ನೀಡಿದರು. ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಬುಧವಾರದಂದು ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ …

Read More »

“ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ”

“ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ” ಅಥಣಿ ಮತಕ್ಷೇತ್ರದ ಮುರಗುಂಡಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಮುರಗುಂಡಿ, ಪ್ರಾದೇಶಿಕ ಅರಣ್ಯ ವಲಯ ಅಥಣಿ, ಹಾಗೂ ಗ್ರಾಮ ಪಂಚಾಯತ ಮುರಗುಂಡಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಕೊಡೆ (ಛತ್ರಿ) ವಿತರಣಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವದರ ಮೂಲಕ ಉದ್ಘಾಟಿಸಿದೆ. 160ಕ್ಕೂ ಹೆಚ್ಚು ಶಾಲಾ ಮಕ್ಕಳು ಸಸಿಗಳನ್ನ ದತ್ತು ಪಡೆದು ಅದರ ಸಂರಕ್ಷಣೆ ಹಾಗೂ ಪೊಷಣೆ ಮಾಡುವುದರ ಮೂಲಕ …

Read More »

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಭೇಟಿ ಘಟಪ್ರಭಾ ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆಗಳ ನವೀರಕಣ ಪ್ರಸ್ತಾವಣೆಗೆ ಅನುಮೊದನೆ ಮನವಿ!!

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಭೇಟಿ ಘಟಪ್ರಭಾ ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆಗಳ ನವೀರಕಣ ಪ್ರಸ್ತಾವಣೆಗೆ ಅನುಮೊದನೆ ಮನವಿ!! ಘಟಪ್ರಭಾ ಬಲದಂಡೆ ಕಾಲುವೆ (GRBC) ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ (CBCI)ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು ರೂ. 1722 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಶಾಸಕ ರಮೇಶ ಜಾರಕಿಹೊಳಿ ಕೇಂದ್ರ ಸಚಿವ ಸಿ.ಆರ್.ಪಾಟೀಲ ಅವರನ್ನು ಭೇಟಿ …

Read More »

ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ!!! 13 ಜನರ ವಿರುದ್ಧ ಎಫ್.ಐ.ಆರ್. ದಾಖಲು

ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ!!! 13 ಜನರ ವಿರುದ್ಧ ಎಫ್.ಐ.ಆರ್. ದಾಖಲು ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣದಲ್ಲಿ 13 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣ ಬೆಳಕಿಗೆ ಬಂದಿದೆ. ಫಲಾನುಭವಿಗಳ ಖಾತೆಯ ಕೋಟಿ ಕೋಟಿ ಸಹಾಯಧನವೇ ಕೊಳ್ಳೆ ಹೊಡೆಯಲಾಗಿದೆ. ಮೊದ ಮೊದಲು 2 ಕೋಟಿ ಹಗರಣ ಮಾತ್ರ …

Read More »