ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ 8,730 ಮತದಾರರು ಮನೆಯಿಂದ ಮತದಾನ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚುನಾವಣೆ ಆಯೋಗದ ಆದೇಶದಂತೆ ಪ್ರಥಮ ಬಾರಿಗೆ ಮನೆಯಿಂದ ಮತದಾನ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಆಯ್ಕೆ ಪಡೆದ ಮತದಾರರ ಮನೆಯಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ಬಿಬಿಎಂಪಿ ಪ್ರತಿನಿಧಿಗಳು ನಿರ್ಮಿಸಲಿದ್ದಾರೆ. ಮೇ 10ರ ಮತದಾನದ ದಿನದಿಂದ ನಾಲ್ಕೈದು ದಿನ ಮೊದಲೇ ಮತ ಚಲಾಯಿಸಬಹುದು. ಮನೆಯಿಂದ ಮತದಾನ ಆಯ್ಕೆ ಪಡೆದುಕೊಂಡವರಲ್ಲಿ 8,611 ಮಂದಿ 80 ವರ್ಷಕ್ಕೂ …
Read More »ಸಚಿವ ಸುಧಾಕರ್ ಹಂಚಿದ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ: ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಸಚಿವ ಡಾ.ಕೆ. ಸುಧಾಕರ್ ಅವರು ಹಂಚಿರುವ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪ್ರಜಾವಾಣಿ ಲೇಖನ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತದಾರರ ಓಲೈಕೆಗಾಗಿ ಬಿಜೆಪಿಗರು ನೀಡುವ ಆಮಿಷದ ಉಡುಗೊರೆಗಳೂ ಕೂಡ ಬಿಜೆಪಿ ಅಡಳಿತದಂತೆ ಕಳಪೆಯಾಗಿರುತ್ತವೆ’ ಎಂದು ಕಿಡಿಕಾರಿದೆ. ‘ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಿದ ಕಳಪೆ ಗ್ಯಾಸ್ ಸ್ಟೌಗಳು ಸ್ಫೋಟಗೊಳ್ಳುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸಚಿವ ಸುಧಾಕರ್ ಅವರಿಗೆ …
Read More »ಬೆಳ್ಳಂ ಬೆಳಗ್ಗೆ ರಾಮದುರ್ಗದಲ್ಲಿ ಭಾರಿ ಪ್ರಮಾಣದ ಹಣ ವಶ
ಬೆಳಗಾವಿ: ಕರ್ತವ್ಯ ನಿರತ ಚುನಾವಣೆ ಸಿಬ್ಬಂದಿ ಹಾಗೂ ಪೊಲೀಸರು ರಾಮದುರ್ಗದಲ್ಲಿ ಭಾರಿ ಪ್ರಮಾಣದ ಹಣ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಂಟ್ಟೂ 1.54 ಕೋಟಿ ರೂ. ಪತ್ತೆಯಾಗಿದ್ದು, ಆದಾಯ ತೇರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.
Read More »ನೀರಾವರಿ ಯೋಜನೆಗೆ ಮೆಚ್ಚುಗೆ: ಪಾಟೀಲರ ಚುನಾವಣೆ ಖರ್ಚಿಗೆ ₹50 ಸಾವಿರ ನೀಡಿದ ರೈತ!
ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳಿಂದ ಸಂತಸನಾದ ರೈತರೊಬ್ಬರು, ಚುನಾವಣೆ ಖರ್ಚಿಗೆ ಕಾಣಿಕೆಯಾಗಿ ₹ 50 ಸಾವಿರ ಚೆಕ್ ಅನ್ನು ನೀಡಿ ಅಭಿಮಾನ ತೋರಿದ್ದಾರೆ. ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ರೈತ ಶೇಖಪ್ಪ ಚಿಕ್ಕಗಲಗಲಿ ಅವರು ಎಂ.ಬಿ.ಪಾಟೀಲರ ನಿವಾಸಕ್ಕೆ ರೈತ ಸ್ನೇಹಿತರೊಂದಿಗೆ ಆಗಮಿಸಿ, ಚೆಕ್ ನೀಡಿದರು. ಬಳಿಕ ಮಾತನಾಡಿದ ಶೇಖಪ್ಪ ಚಿಕ್ಕಗಲಗಲಿ, ನಮ್ಮ ಭಾಗದಲ್ಲಿ ಈ ಮುಂಚೆ ಕುಡಿಯುವ ನೀರಿಗೂ ಹಾಹಾಕಾರವಿತ್ತು. …
Read More »ಚುನಾವಣಾ ಕಣ: ಬದಲಾದ ಚಿತ್ರಣ
ಬೆಂಗಳೂರು: ಮೇ 10ರಂದು ನಡೆಯ ಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆದಿನ ವಾಗಿದ್ದು, ಬುಧವಾರ 1,110 ನಾಮ ಪತ್ರಗಳು ಸಲ್ಲಿಕೆಯಾಗಿವೆ. 935 ಅಭ್ಯರ್ಥಿಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಸಾವಿರಾರು ಜನರನ್ನು ಸೇರಿಸಿದ್ದರಿಂದಾಗಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಚುನಾವಣೆಯಲ್ಲಿ ಗೆಲ್ಲುವುದೊಂದನ್ನೇ ಎಲ್ಲ ರಾಜಕೀಯ ಪಕ್ಷಗಳು ಮಾನದಂಡವಾಗಿ ಇಟ್ಟುಕೊಂಡಿದ್ದ ರಿಂದಾಗಿ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವವರೆಗೂ ಆಕಾಂಕ್ಷಿಗಳು ಅಲ್ಲಿಂದಿಲ್ಲಿಗೆ ಜಿಗಿತವನ್ನು ನಡೆಸುತ್ತಲೇ ಇದ್ದರು. ಕೊನೆವರೆಗೂ …
Read More »ಹೈಕೋರ್ಟ್‌ಗೆ ಬೇಸಿಗೆ ರಜೆ 24ರಿಂದ
ಬೆಂಗಳೂರು: ಹೈಕೋರ್ಟ್‌ಗೆ ಇದೇ 24ರಿಂದ ಮೇ 20ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ‘ತಡೆಯಾಜ್ಞೆ, ಮಧ್ಯಂತರ ನಿರ್ದೇ ಶನ ಮತ್ತು ತಾತ್ಕಾಲಿಕ ಪ್ರತಿಬಂಧಕ ಆದೇಶ ಸೇರಿದಂತೆ ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ …
Read More »ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದಸುರೇಬಾನ ಗ್ರಾಮಸ್ಥರು
ಸುರೇಬಾನ: ನಮ್ಮ ಮನೆಗಳಿಗೆ ಹೋಗಿ ಬರಲು ದಾರಿ ಇಲ್ಲ ಎಂದು ಕಿತ್ತೂರ ಗ್ರಾಮದ ಪ್ಲಾಟ್ ನಿವಾಸಿಗಳು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟನೆ ಮಾಡಿದ ಘಟನೆ ಬುಧವಾರ ನಡೆದಿದೆ. ಕಳೆದ ಹಲವಾರು ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಪಿಡಿಓಗೆ ನಮಗಾಗುವ ತೊಂದರೆಗಳ ಕುರಿತು ಮನವಿ ಮಾಡಿಕೊಂಡರು ಅವರು ಕ್ಯಾರೆ ಎನ್ನುತ್ತಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದರು. ತಮ್ಮ ನಿತ್ಯದ ಕಾರ್ಯ ಕಲಾಪಗಳಿಗೆ ಹೋಗಿ …
Read More »ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ಆರಂಭವಾಗಿದ್ದು, ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಿದೆ. ಕಾಂಗ್ರೆಸ್ ನ 40 ನಾಯಕರ ಹೆಸರನ್ನು ತಾರಾ ಪ್ರಚಾರಕರನ್ನಾಗಿ ಘೋಷಿಸಲಾಗಿದೆ. ಕೆಲ ವರ್ಷಗಳಿಂದ ರಾಜಕೀಯದಿಂದಲೇ ದೂರ ಉಳಿದಿದ್ದ ನಟಿ ರಮ್ಯಾ ಅವರಿಗೂ ಸ್ಟಾರ್ ಪ್ರಚಾರಕರ ಸ್ಥಾನ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ …
Read More »ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ B.J.P.
ನವದೆಹಲಿ: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಗುರುವಾರ ನಾಮಪತ್ರ ಸಲ್ಲಿಸುವ ಕೊನೆಯ ದಿನ. ಹಾಗಾಗಿ ಬುಧವಾರ ರಾತ್ರಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗಕ್ಕೆ ಚನ್ನಬಸಪ್ಪ ಮತ್ತು ಮಾನ್ವಿಗೆ ಮಾಜಿ ಸಂಸದ ಬಿ.ವಿ.ನಾಯಕ ಅವರನ್ನು ಕಣಕ್ಕಿಳಿಸಲಾಗಿದೆ. ಶಿವಮೊಗ್ಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರ. ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.
Read More »ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಡೆಲ್ಗಳು ಸಿಕ್ಕಿ ಬಿದ್ದಿದ್ದಾರೆ.
ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಿರುತೆರೆ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರತಿ ಹರೀಶ್ಚಂದ್ರ ಮಿತ್ತಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಹರೀಶ್ಚಂದ್ರ ಮಿತ್ತಲ್ ಮಾಡೆಲ್ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಪ್ನಾಪನ್’ ಸೇರಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಆರತಿ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪವಿತ್ತು. ಹೀಗಾಗಿ ಮಾರುವೇಷದಲ್ಲಿ ಹೋದ ಪೊಲೀಸರು ತಾವು ಗ್ರಾಹಕರು ಎಂದು …
Read More »