Breaking News

ಸಿದ್ದರಾಮಯ್ಯ ಹೇಳಿಕೆಯಿಂದ ಮತ ಬರುತ್ತೆ ಅಂತಾದರೆ ಬಿಜೆಪಿಯವರು ಕೆಲಸ ಮಾಡಿಲ್ಲ ಎಂದರ್ಥ: ಮಲ್ಲಿಕಾರ್ಜುನ ಖರ್ಗೆ

ಮಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿನಿಂದ ಬಿಜೆಪಿಗೆ ಮತ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.   ನಗರದ ಮೇರಿಹಿಲ್​ನಲ್ಲಿರುವ ಹೆಲಿಪ್ಯಾಡ್​ನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಬಿಜೆಪಿಗೆ ಮತ ಬರುತ್ತದೆ ಎಂದರೆ ಇಲ್ಲಿಯವರೆಗೆ ಬಿಜೆಪಿಯವರು ಕೆಲಸಮಾಡಿಲ್ಲ ಎಂದು ಅರ್ಥ. ಅವರು ಕೆಲಸದಿಂದ ಬರುತ್ತದೆ ಎಂದು ಹೇಳಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಮತ …

Read More »

16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ: ಆ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 16 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕಾರಣ ಆ ಕ್ಷೇತ್ರಗಳಲ್ಲಿ ಎರಡೆರಡು ಇವಿಎಮ್​ಗಳನ್ನು ಬಳಸಲಾಗುತ್ತಿದೆ. ಬೆಂಗಳೂರು: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ 2 ಮತಯಂತ್ರಗಳನ್ನು ಬಳಸಲಾಗುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿ‌ನವಾಗಿತ್ತು. ಅದರಂತೆ ಸೋಮವಾರ 517 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದೆ ಸರಿದ್ದಾರೆ. ಆ ಮೂಲಕ ಸದ್ಯ ಕಣದಲ್ಲಿ ಒಟ್ಟು 2,613 …

Read More »

ಮೋದಿ, ಯೋಗಿಯಿಂದ ನಡೆಯಲಿದೆ ರಾಜ್ಯದಲ್ಲಿ ಚುನಾವಣಾ ಪ್ರಚಾರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್ ಶೋ, ಸಾರ್ವಜನಿಕ ಸಭೆ, ಮನೆ ಮನೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಿಗದಿಯಾಗಿದೆ. ನಗರದ ಮಾಗಡಿ ರಸ್ತೆ ನೈಸ್ ಜಂಕ್ಷನ್ ನಿಂದ ಸುಂಕದಕಟ್ಟೆ ತನಕ …

Read More »

ಸಂಸತ್ತಿನಲ್ಲಿ ನನಗೆ ಕಣ್ಣೀರು ಹಾಕಿಸಿದ ವ್ಯಕ್ತಿಗೆ ನಾನು ಕಣ್ಣೀರು ತರಿಸಬೇಕು

ತುಮಕೂರು: ಸಂಸತ್ತಿನಲ್ಲಿ ಕಣ್ಣೀರು ಹಾಕಿಸಿದ ನಾಯಕನಿಗೆ ಕಣ್ಣೀರು ತರಿಸಿದರಷ್ಟೇ ತನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ನಡೆದಿದ್ದನ್ನು ಮೆಲುಕು ಹಾಕಿ ನೋಡಲೂ ಹೋಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ತುಮಕೂರಿನ ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರು ಕೂಡ …

Read More »

ತಮ್ಮ ಕ್ಷೇತ್ರದ ಜನರಿಗೆ ಬಾಂಡ್‌ ಪೇಪರ್ ವಿತರಿಸಿದ ಅಭ್ಯರ್ಥಿ

ಬೆಂಗಳೂರು : ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಅಶ್ವತ್‌ ಕುಮಾರ್‌ ತಮ್ಮ ಕ್ಷೇತ್ರದ ಮತದಾರರಿಗೆ ಪ್ರಚಾರದ ಕರಪತ್ರ ಹಂಚುವ ಬದಲು ಬಾಂಡ್‌ ಪೇಪರ್‌ ಹಂಚುತ್ತಿದ್ದಾರೆ. ಈ ಮೂಲಕ ತಮ್ಮನ್ನ ಆಯ್ಕೆ ಮಾಡಿದ್ರೆ ನಿಮಗೆ ನಾನೇನು ಮಾಡಿಕೊಡ್ತೇನೆ ಅನ್ನೋದನ್ನ ಬಾಂಡ್‌ ಪೇಪರ್‌ನಲ್ಲಿ ಮುದ್ರಿಸಿ ಅದ್ರಲ್ಲಿ ತಮ್ಮ ಸಹಿ ಹಾಕಿ ಎಲ್ಲರಿಗೂ ವಿತರಿಸುತ್ತಿದ್ದಾರೆ. ಅಲ್ಲದೇ ಇದಕ್ಕೆ ತಪ್ಪಿ ನಡೆದ್ರೆ ಮತದಾರರು ಪಕ್ಷದ ವರಿಷ್ಠರಿಗೆ ದೂರು ನೀಡಬಹುದು. ಶಿಸ್ತುಕ್ರಮಕ್ಕೆ ಬದ್ಧನಾಗಿದ್ದು, …

Read More »

65 ಲಕ್ಷ ರೂಪಾಯಿ ವಶಪಡಿಸಿಕೊಂಡ ಪೊಲೀಸ್​​​​ ಅಧಿಕಾರಿಗಳು

ಗೋಕಾಕ : ಕೆಎಸ್‌ಆರ್​ಟಿಸಿ ಬಸ್​ನಲ್ಲಿ ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣವನ್ನು ಪೊಲೀಸ್​​​​ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ರಾತ್ರಿ ನಡೆದಿದೆ   ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪರಾನಟ್ಟಿ ಚಕ್ ಪೋಸ್ಟ್​ನಲ್ಲಿ ದಾಖಲೆ ಇಲ್ಲದ 65 ಲಕ್ಷ ರೂಪಾಯಿ ಹಣವನ್ನು ವ್ಯಕ್ತಿಯೊಬ್ಬ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಎಸ್‌ಆರ್​ಟಿಸಿ ಬಸ್ ಬೆಳಗಾವಿಯಿಂದ ಔರಾದಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಹಣ ಪತ್ತೆಯಾಗಿದೆ.ಚುನಾವಣಾ ಪೊಲೀಸ್​ ಅಧಿಕಾರಿಗಳು ಬಸ್ ತಪಾಸಣೆ …

Read More »

ಕೊಲೆ ಮಾಡಿದ್ದ ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿ ಅರೆಸ್ಟ್

ತುಮಕೂರು: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರಿತ್ತಿದ್ದು,ಪಕ್ಷೇತರ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ತುರುವೆಕೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣ ಅಲಿಯಾಸ್ ಕರಿಯಾನನ್ನು ಕೊಲೆ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯಲ್ಲಿ ಕೊಡವತ್ತಿ ಮೂಲದ ಭೂಮಿಕಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಚೇತನ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ನಾರಾಯಣ ಎ6 ಆರೋಪಿಯಾಗಿದ್ದ. ಭೂಮಿಕಾ ಸಹೋದರ ಮತ್ತು ಇತರರು ಸೇರಿ ಚೇತನ್ ನನ್ನು 2021ರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ …

Read More »

ನಾಮಪತ್ರ ವಾಪಸ್ ಪಡೆದವರು ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಮನೋಹರ್ ಹೆಬ್ಬಾಳಕರ್

ಬೆಳಗಾವಿ  ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಡಲಾಗುತ್ತಿದೆ. ಆದರೆ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮೀ ಮನೋಹರ ಹೆಬ್ಬಾಳಕರ್ ಎನ್ನುವವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ರವೀಂದ್ರ ಹೆಬ್ಬಾಳಕರ್ ಕಣದಿಂದ ಹಿಂದೆ ಸರಿದಿಲ್ಲ. ಜನರ ದಿಕ್ಕು ತಪ್ಪಿಸಲೆಂದೇ ಕೆಲವರು ಕಂಗ್ರಾಳಿಯ ಲಕ್ಷ್ಮೀ ಮನೋಹರ ಹೆಬ್ಬಾಳಕರ್ ಎನ್ನುವವರಿಂದ ನಾಮಪತ್ರ ಹಾಕಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಅವರು ನಾಮಪತ್ರ ವಾಪಸ್ …

Read More »

ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಗೆ ಒಳಿತಾಗಲಿದೆ

ದಾವಣಗೆರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ತೋರಿಕೆಗಾಗಿ ಲಿಂಗಾಯತ ಮಠಕ್ಕೆ ಹೋಗುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌. ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೃತಿ ಇರಾನಿ, ಸೇರಿದಂತೆ ಹಲವು ನಾಯಕರು ತಾರಾ ಪ್ರಚಾರಕರಾಗಿ ಆಗಮಿಸುತ್ತಿದ್ದಾರೆ ಎಂದರು. ಸಿಎಂ ಆಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ‌. ಹಿಂದೆಯೂ ಹೈಕಮಾಂಡ್ ತೀರ್ಮಾನ ಮಾಡಿದ್ದು, ಈಗಲೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ವರಿಷ್ಠರು …

Read More »

18 ಕ್ಷೇತ್ರಕ್ಕೆ 185 ಅಭ್ಯರ್ಥಿಗಳು; ಬೆಳಗಾವಿ ಉತ್ತರದಲ್ಲಿ ಹೆಚ್ಚು, ಯಮಕನಮರಡಿಯಲ್ಲಿ ಕಡಿಮೆ

ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಸಮಯ ಮುಕ್ತಾಯವಾಗಿದ್ದು ಅಂತಿಮ ಕಣ ಸ್ಪಷ್ಟವಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಗೆ 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟೂ 47 ಜನರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 18 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆಪ್ 15 ಹಾಗೂ ಜೆಡಿಎಸ್ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಇತರ ರಾಜಕೀಯ ಪಕ್ಷಗಳು 43 ಹಾಗೂ …

Read More »