ಚಿಕ್ಕೋಡಿ: ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲದ ಛಾಯೆ ಕಾಣ್ತಿದೆ. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಂತೂ ಸಂಪೂರ್ಣವಾಗಿ ಒಣಗಿ ಹೋಗಿ ಮಳೆರಾಯನ ಆಗಮನಕ್ಕಾಗಿ ರೈತಾಪಿ ವರ್ಗ ಎದುರು ನೋಡುತ್ತಿದೆ. ಚಿಕ್ಕೋಡಿ ಉಪವಿಭಾಗದ ಬಹುತೇಕ ಹಳ್ಳಿಗಳಿಗೆ ಬರದ ಛಾಯೆ ಎದ್ದು ಕಾಣ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬೆಳೆಗಳು ನಾಶವಾದರೂ ಪರವಾಗಿಲ್ಲ ಆದರೆ, ಊರ ಜನ ಜಾನುವಾರುಗಳಿಗೆ ಯಾವುದೇ ಅನಾನುಕೂಲವಾಗದು ಎಂದು ತಮ್ಮ ಬಾವಿಯ ನೀರನ್ನು …
Read More »ಲಿಂಗಾಯತ ಧರ್ಮ ಮಾನ್ಯತೆ ವಿಚಾರ: ರಾಜ್ಯ ಸರ್ಕಾರ ಮರು ಉತ್ತರ ನೀಡಲಿ: ಡಾ. ಶಿವಾನಂದ ಜಾಮದಾರ ಆಗ್ರಹ
ಬೆಳಗಾವಿ: ”ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮರು ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ” ಎಂದು ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ತಿಳಿಸಿದ್ದಾರೆ. ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿ 2018ರಲ್ಲಿಯೇ ಅಂದಿನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪುರಸ್ಕರಿಸದ …
Read More »ಕಳಪೆ ಬೀಜ ವಿತರಣೆ ಕಂಡು ಬಂದರೆ ಅಧಿಕಾರಿಗಳೇ ಹೊಣೆ : ಸಚಿವ ಚೆಲುವರಾಯಸ್ವಾಮಿ
ಬೆಳಗಾವಿ: ರಾಜ್ಯದಲ್ಲಿ ಮುಂಗಾರು ವಿಳಂಬವಾಗಿದ್ದು, ಬಿತ್ತನೆ ಕೂಡ ತಡವಾಗುತ್ತಿದೆ. ಆದ್ದರಿಂದ ಮಳೆಯಾದ ಕೂಡಲೇ ಎಲ್ಲೆಡೆ ಏಕಕಾಲಕ್ಕೆ ಬಿತ್ತನೆ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಬೀಜ-ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಳಪೆ ಬೀಜ ವಿತರಣೆ ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಎಚ್ಚರಿಕೆ ನೀಡಿದರು. ಮುಂಗಾರು ಸಿದ್ಧತೆ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ವಿಭಾಗಮಟ್ಟದ ಸಭೆಯ ಅಧ್ಯಕ್ಷತೆ …
Read More »ಶಕ್ತಿ ಯೋಜನೆ ಎಫೆಕ್ಟ್… ಖಾಸಗಿ ಬಸ್ಗಳ ‘ಖಾಲಿ’ ಓಡಾಟ.
ಚಾಮರಾಜನಗರ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಸಂತಸ ಮೂಡಿಸಿದ್ದರೇ, ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 70ರಿಂದ 80 ಖಾಸಗಿ ಬಸ್ಗಳು ದಿನನಿತ್ಯ ಸಂಚರಿಸುತ್ತಿವೆ. ಉಚಿತ ಪ್ರಯಾಣದಿಂದ ಮಹಿಳೆಯರು ಸರ್ಕಾರಿ ಬಸ್ಗಳ ಕಡೆ ಮುಖ ಮಾಡಿದ್ದಾರೆ. ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರು ಬಾರದಿದ್ದರಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡುಬಂದವು. ಟಂಟಂ, ಖಾಸಗಿ ಬಸ್ಗಳನ್ನು ಆಶ್ರಯಿಸಿದ್ದ ಪ್ರಯಾಣಿಕರು ಈಗ ಕೆಎಸ್ಆರ್ಟಿಸಿ ಬಸ್ಗಳತ್ತ …
Read More »ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಸುಂಕ ಹೆಚ್ಚಳ: ಸಂಚಾರ ಮತ್ತಷ್ಟು ದುಬಾರಿ
ರಾಮನಗರ : ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು, ಟೋಲ್ ದರ ಹೆಚ್ಚಳ ಮಾಡಲಾಗಿದೆ. ಸದ್ದಿಲ್ಲದೆ ಏರಿಕೆ ಆಗಿರುವ ಟೋಲ್ ದರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಮೊತ್ತದ ಟೋಲ್ ವಸೂಲಿ ಮಾಡಲಾಗುತ್ತಿದೆ. ಬಹುತೇಕ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಇರುವ ಕಾರಣ ಹೆಚ್ಚಿನ ಮೊತ್ತ ಕಡಿತವಾಗಿರುವುದು ವಾಹನ ಸವಾರರ ಗಮನಕ್ಕೆ ಬಂದಿಲ್ಲ …
Read More »250 ಇಂದಿರಾ ಕ್ಯಾಂಟೀನ್ ಪ್ರಾರಂಭ: C.M. ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಇಲ್ಲಿವರೆಗೂ ಇಂದಿರಾ ಕ್ಯಾಂಟಿನ್ ಗೆ ಬಿಬಿಎಂಪಿ ವತಿಯಿಂದ 70%, ಹಾಗೂ ಸರ್ಕಾರದಿಂದ ಶೇ.30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ. 50 ರಷ್ಟು …
Read More »ಮಹಿಳೆಯರ ‘ಉಚಿತ ಪ್ರಯಾಣ’ಕ್ಕೆ ಇನ್ಮುಂದೆ ‘ಒರಿಜಿನಲ್ ಐಡಿ’ ಬೇಕಿಲ್ಲ -KSRTC ಆದೇಶ
ಬೆಂಗಳೂರು: ಶಕ್ತಿ ಯೋಜನೆಯ ( Shakti Scheme ) ಅಡಿಯಲ್ಲಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಒರಿಜಿನಲ್ ಐಡಿ ಕಾರ್ಡ್ ( Original ID ) ಏನೂ ಬೇಕಿಲ್ಲ. ನಕಲು ಪ್ರತಿ ಇದ್ದರೂ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂಬುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾರ್ಪಾಡು ಆದೇಶದಲ್ಲಿ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State …
Read More »DCM ಡಿಕೆ ಶಿವಕುಮಾರ್’ಗೆ ತಾತ್ಕಾಲಿಕ ರಿಲೀಫ್: ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ವಿಚಾರ ಸಂಬಂಧ, ಇಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ, ತಾತ್ಕಾಲಿಕ ರಿಲೀಫ್ ಅನ್ನು ಡಿಕೆಶಿಗೆ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಬಿಐ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠಕ್ಕೆ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಈ ಸಂಬಂಧ ಹೈಕೋರ್ಟ್ ಮತ್ತೊಂದು ನ್ಯಾಯಪೀಠಕ್ಕೆ …
Read More »ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ: ಸಚಿವ ಮಂಕಾಳು ವೈದ್ಯ
ಬೆಂಗಳೂರು : ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕಾರವಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿದೆ. ಅಲ್ಲಿಯೇ 350 ಬೆಡ್ ವ್ಯವಸ್ಥೆ ಇದ್ದು, ಸದ್ಯಕ್ಕೆ ತುರ್ತಾಗಿ ಮಲ್ಟಿ ಸ್ಪೆಷಾಲಿಟಿ ಅಗತ್ಯ ಇರುವುದರಿಂದ ಅಲ್ಲಿಯೇ ಇನ್ನೂ 100 ಬೆಡ್ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಆಗಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಮೆಡಿಕಲ್ ಕಾಲೇಜಿನಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. …
Read More »ಮುರುಡೇಶ್ವರದಲ್ಲಿ ಸಮುದ್ರಕ್ಕೆ ಇಳಿದ ಪ್ರವಾಸಿಗರು: ಓರ್ವ ನಾಪತ್ತೆ, ಇಬ್ಬರ ರಕ್ಷಣೆ
ಭಟ್ಕಳ(ಉತ್ತರ ಕನ್ನಡ): ಮುರುಡೇಶ್ವರದಲ್ಲಿ ಸಮುದ್ರ ಅಲೆಗೆ ಸಿಕ್ಕಿ ಪ್ರವಾಸಿಗನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕೊಚ್ಚಿ ಹೋಗುತ್ತಿದ್ದ ಮತ್ತಿಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಪ್ರವಾಸಿಗರಾದ ಹಸನ್ ಮುಜ್ಜಿಗಿ ಗೌಡ (21) ಸಂಜೀವ ಹೆಬ್ಬಳ್ಳಿ(20) ರಕ್ಷಣೆಯಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಸಂತೋಷ ಹುಲಿಗುಂಡ (19)ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲಘಟಗಿಯಿಂದ 22 ಮಂದಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಬಿಪೊರ್ ಜಾಯ್ ಸೈಕ್ಲೋನ್ …
Read More »