Breaking News

ಬುದ್ದಿವಂತರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಸಿಕ್ಕಿದೆ. ನನ್ನ ಅದೃಷ್ಟ. : ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ ಸಣ್ಣಪುಟ್ಟ ವ್ಯಾಜ್ಯಗಳನ್ನು ಕೆಳಹಂತದ ಕೋರ್ಟ್ ನಲ್ಲೆ ಇತ್ಯರ್ಥಗೊಳಿಸುವ ಮೂಲಕ ನ್ಯಾಯಾಧೀಶರು ಹಾಗೂ ವಕೀಲರು ಬಡ ಕಕ್ಷಿದಾರರ ಹಿತ ಕಾಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬ್ರಹ್ಮಾವರದಲ್ಲಿ ನೂತನವಾಗಿ ನಿರ್ಮಿಸಲಾದ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಕೋರ್ಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇಡೀ ವಿಶ್ವಕ್ಕೆ ನಮ್ಮ ದೇಶದ ಕಾನೂನು ಮಾದರಿಯಾಗಿದ್ದು, …

Read More »

ರೇಮೆಂಡ ಕಂಪನಿ ಹೆಸರು ಬಳಿಸಿ ನಕಿಲಿ ಬಟ್ಟೆ ಮಾರಾಟ ಮೂರೂ ಅಂಗಡಿ ಮೇಲೆ ಪೊಲೀಸ ಕ್ರಮ

ಪ್ರತಿಯೊಬ್ಬರೂ ಜೀವನದ ಲೈಫ್ ಸ್ಟೈಲ್ ತಕ್ಕನಾಗಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುವುದು ಸರ್ವೇ ಸಾಮಾನ್ಯವಾಗಿರುತ್ತದೆ ಆದರೆ ಬ್ರ್ಯಾಂಡೆಡ್ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತೆ ಅಂದರೆ ಸಕ್ಕರೆಗೆ ಇರುವೆ ಮುತ್ತಿದಂತೆ ಮುತ್ತಿಕೊಳ್ಳುತ್ತೇವೆ ಅಲ್ಲೇ ನೋಡಿ ಮೋಸ ಹೋಗುವುದು ಮೋಸ ಮಾಡಿಸಿಕೊಳ್ಳುವವವರು ಇದ್ದಾಗ ಮೋಸ ಮಾಡುವವರು ಇರುತ್ತಾರೆ, ಅನ್ನುವುದಕ್ಕೆ ಈ ಘಟನೆ ನಿದರ್ಶನ ನಗರದ ಖಡೆ ಬಜಾರನಲ್ಲಿ ಮೂರೂ ಅಂಗಡಿಯವರು ರೇಮೆಂಡ ಕಂಪನಿ ಬಟ್ಟೆ ಎಂದು ಲೋಕಲ್ ಬಟ್ಟೆಯನ್ನು ಮಾರಾಟ ಮಾಡಿ ಜನರನ್ನು ಮರಳು …

Read More »

40 ಕೋಟಿ ಪಾಲಿಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕೋರ್ಟ್ ಮೆಟ್ಟಿಲು ಏರಲು ಸಿದ್ಧ…!

ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕಾರಣ ಮಾಡುವುದು ಸಹಜ. ಆದರೆ ಚುನಾಯಿತರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ವಿರುದ್ಧ ಚುನಾಯಿತ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ‌ ದೂರು ಸಲ್ಲಿಸಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಆರೋಪವೊಂದು ಗಂಭೀರವಾಗಿ ಕೇಳಿಬಂದಿದೆ. ಹೌದು.. ಬಿಜೆಪಿ ತೆಕ್ಕೆಯಲ್ಲಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅನುದಾನ ತಾರತಮ್ಯ ಕೇಳಿ ಬಂದಿದ್ದು, 15 …

Read More »

ವಿಶ್ವ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಪ್ರಶ್ತಿ ಗೆದ್ದ ಭಾರತೀಯ ವನಿತೆಯರ ತಂಡಕ್ಕೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭಕೋರಿದ್ದಾರೆ.

ನವದೆಹಲಿ : ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್ 2023 ರಲ್ಲಿ ಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಅವರ ಭಾರತೀಯ ವನಿತೆಯ ತಂಡಕ್ಕೆ ಪ್ರಧಾನಿ ಮೋದಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದಿಸಿದ್ದಾರೆ.       ಟ್ವಿಟ್​ ಮಾಡಿರುವ ಮೋದಿ,”ನಮ್ಮ ಅಸಾಧಾರಣ ಸಂಯುಕ್ತ ಮಹಿಳಾ ತಂಡವು ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ …

Read More »

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು

ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರು ಸಂಕೇಶ್ವರ ಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ದರಣಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣಕೇರಿ ಗ್ರಾಮಸ್ಥೆ ಕಿರಣ ಮಹಾದೇವ ಟಿಕ್ಕೆ ಅವರನ್ನು ಹುಕ್ಕೇರಿ ತಾಲೂಕಿನ ನಿಡಸೋಸಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳೆದ ಹನ್ನೆರಡು ದಿನಗಳ ಹಿಂದೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ನಂತರ ಶಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಹೆರಿಗೆಯನ್ನು ಮಾಡಿಸಲಾಗಿತ್ತು, ಮೃತ ಕಿರಣಿ ಗಂಡು ಮಗುವಿಗೆ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ ತಾಲೂಕಿನ ತಡಸಲೂರ ಗ್ರಾಮದಲ್ಲಿ

ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ತಡಸಲೂರ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ಕಲಬುರಗಿಯಲ್ಲಿಂದು ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ,

ಕಲಬುರಗಿ, ಆ.05: ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಮ್ಯಾಜಿಕ್ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದೆ. ಇದೀಗ ಸರ್ಕಾರ ತಾನು ನೀಡಿರುವ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ. ಇಂದು ಕಲಬುರಗಿಯಲ್ಲಿ 200 ಯುನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡುವ ಗೃಹ ಜೋತಿ ಯೋಜನೆಗೆ(Gruha Jyothi Scheme) ಅಧಿಕೃತವಾಗಿ ಚಾಲನೆ ಸಿಗಲಿದೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಮೇಲೆ 10 ಜನರಿಗೆ …

Read More »

ಜೈಲಿನಿಂದ ಹೊರಬಂದ ಕಲವೇ ಗಂಟೆಗಳಲ್ಲಿ ರೌಡಿಶೀಟರ್ ಹತ್ಯೆ

ಬೆಂಗಳೂರು, ಆ.5: ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಶೀಟರ್(Rowdy Sheeter)​ ಸಿದ್ದಾಪುರ ಮಹೇಶ್​ನನ್ನು ಹೊಸ ರೋಡ್​ ಜಂಕ್ಷನ್​ ಬಳಿ ದುಷ್ಕರ್ಮಿಗಳುಕೊಚ್ಚಿ ಕೊಲೆಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿ ಗ್ಯಾಂಗ್​ ಎಂದು ಗುರುತಿಸಿಕೊಂಡಿದ್ದ ರೌಡಿಶೀಟರ್​​​ ವಿಲ್ಸನ್​​ಗಾರ್ಡನ್​​​ ನಾಗ, ಡಬಲ್ ಮೀಟರ್​ ಮೋಹನ್​​, ಸುನೀಲ್​ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇಬ್ಬರು ರೌಡಿಶೀಟರ್​ ಮಧ್ಯೆ ದ್ವೇಷ ಹೌದು, ವಿಲ್ಸನ್​​ಗಾರ್ಡನ್​​​ ನಾಗ ಮತ್ತು ಸಿದ್ದಾಪುರ …

Read More »

ಆನ್​​ಲೈನ್​ ಮೂಲಕ ಎಂಎಲ್​ಸಿ ಹೆಚ್​ ವಿಶ್ವನಾಥ್ ಪುತ್ರನಿಗೆ 1 ಲಕ್ಷಕ್ಕೂ ಅಧಿಕ ಹಣ ವಂಚನೆ

ಮೈಸೂರು, ಆ.5: ಆನ್​ಲೈನ್​ ವಂಚನೆ(Online Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಷ್ಟೇ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಜನಸಾಮಾನ್ಯರು ಮಾತ್ರ ಇಂತಹವರ ಬಲೆಗೆ ಬೀಳುವುದು ಮಾತ್ರ ತಪ್ಪುತ್ತಿಲ್ಲ. ಮುಖ್ಯವಾಗಿ ಶಿಕ್ಷಣವಂತರೇ ಇಂತಹವರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಆನ್‌ಲೈನ್ ವಂಚನೆಯ ಜಾಲಕ್ಕೆ ಓರ್ವ ಎಂಎಲ್‌ಸಿ ಎಚ್ ವಿಶ್ವನಾಥ್ ಪುತ್ರ ಅಮಿತ್ ಬಿದ್ದು, ಬರೊಬ್ಬರಿ 1.99 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಬಳಿಕ ಘಟನೆ ಹಿನ್ನಲೆ …

Read More »

ಎಸ್​ಸಿಪಿ, ಟಿಎಸ್​ಪಿ ಹಣದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ, ಸಿಎಂರಿಂದ ದಲಿತರ ಹಿತ ಕಡೆಗಣನೆ

ಬೆಂಗಳೂರು: ದಲಿತರು ಏನೇ ಮಾಡಿದರೂ ಮತ ನೀಡುತ್ತಾರೆ ಎಂದು ತಿಳಿದಿದ್ದೀರಾ ? ಮುಖ್ಯಮಂತ್ರಿಸಿದ್ದರಾಮಯ್ಯ(Siddaramaiah) ಅವರು ದಲಿತರ ಪರ ಅಂತ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ದಲಿತರ ಹಿತ ಕಡೆಗಣಿಸಿದ್ದಾರೆ. ಎಸ್​ಸಿಪಿ (SCP), ಟಿಎಸ್​ಪಿ (TSP) ಹಣದ ಮೇಲೆ ಕಾಂಗ್ರೆಸ್ (Congress) ವಕ್ರದೃಷ್ಟಿ ಬಿದ್ದಿದೆ. ಸರ್ಕಾರ ಶಕ್ತಿ ಯೋಜನೆಗೆ ಎಸ್​ಸಿಪಿ, ಟಿಎಸ್​ಪಿ ಹಣ ಬಳಸುತ್ತಿದ್ದಾರೆ. ಬಸ್ ಹತ್ತುವವರನ್ನು ನೀವು ಎಸ್‌ಸಿ, ಎಸ್‌ಟಿ ಎಂದು ಕೇಳುತ್ತೀರಾ? ಯಾವ ಗೃಹಿಣಿ ಎಸ್‌ಸಿ, ಯಾವ ಗೃಹಿಣಿ ಎಸ್‌ಟಿ ಎಂದು …

Read More »