ಮೈಸೂರು: ಕಬ್ಬಿನ ಗದ್ದೆಯೊಂದರಲ್ಲಿ ಕಬ್ಬು ಬೆಳೆ ಕಟಾವಿನ ವೇಳೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಟಿ.ನರಸೀಪುರ ತಾಲೂಕಿನ ಗುಡ್ಡದ ಕೊಪ್ಪಲು ಗ್ರಾಮದಲ್ಲಿ, ದೊರೆಸ್ವಾಮಿ ಎಂಬುವವರ ಜಮೀನಿನಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಅವರ ಜಮೀನಿನಲ್ಲಿ ಕಬ್ಬು ಬೆಳೆಯನ್ನು ಕಟಾವು ಮಾಡುವ ಸಮಯದಲ್ಲಿ, ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಕಾಣಿಸಿಕೊಂಡಿವೆ. ಈ …
Read More »ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಹಠಾತ್ ಹೃದಯಾಘಾತ ಸಂಭವಿಸಿ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ.
ರಾಯಚೂರು: ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಗುರುವಾರ ರಾತ್ರಿ ಘಟನೆ ಜರುಗಿದೆ. ಬಸವನಗೌಡ ಆಗೋಲಿ (34) ಮೃತರು. ಇವರು ಮಸ್ಕಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ. …
Read More »ರಾಜ್ಯದ ಮೊದಲ ‘ಬೀದಿ ನಾಯಿಗಳ ಪುನರ್ವಸತಿ ಕೇಂದ್ರ’ ಉದ್ಘಾಟನೆಗೆ ಸಿದ್ದ: ಇಲ್ಲಿರುವ ಸೌಲಭ್ಯಗಳೇನು?
ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ‘ಬೀದಿ ನಾಯಿಗಳ ಆರೈಕೆ ಕೇಂದ್ರ’ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿ ಯಾವ ರೀತಿಯ ಸೌಲಭ್ಯಗಳಿವೆ? ಎಷ್ಟು ವೆಚ್ಚದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈಟಿವಿ ಭಾರತಕ್ಕೆ ವಿವರ ನೀಡಿದರು. ಶೀಘ್ರದಲ್ಲೇ ಉದ್ಘಾಟನೆ: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ …
Read More »ಮಾರ್ಗದರ್ಶಿ ಚಿಟ್ ಗ್ರೂಪ್ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಕುರಿತು ಚಿಟ್ ರಿಜಿಸ್ಟ್ರಾರ್ ಹೊರಡಿಸಿದ್ದ ಸಾರ್ವಜನಿಕ ನೊಟೀಸ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ
ಅಮರಾವತಿ (ಆಂಧ್ರ ಪ್ರದೇಶ): ಮಾರ್ಗದರ್ಶಿ ಚಿಟ್ ಗ್ರೂಪ್ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಕುರಿತು ಚಿಟ್ ರಿಜಿಸ್ಟ್ರಾರ್ ಹೊರಡಿಸಿದ್ದ ಸಾರ್ವಜನಿಕ ನೊಟೀಸ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ಇಂದು ತಡೆ ನೀಡಿತು. ಸಾರ್ವಜನಿಕ ನೊಟೀಸ್ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೆ ಹೈಕೋರ್ಟ್ ತಡೆ ಕೊಟ್ಟಿದೆ. ಚಂದಾದಾರರು ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳನ್ನು ಜೊತೆಯಾಗಿಯೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತು. ಚಂದಾದಾರರು ತಮ್ಮ …
Read More »ಈರುಳ್ಳಿ ಬೆಲೆ ಏರಿಕೆ ಆತಂಕ; ಬಫರ್ ಸ್ಟಾಕ್ ಬಿಡುಗಡೆ ಆರಂಭಿಸಿದ ಕೇಂದ್ರ
ನವದೆಹಲಿ: ದೇಶದ ಕೆಲ ಭಾಗಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ವರದಿಗಳಿಂದ ಅಲರ್ಟ್ ಆಗಿರುವ ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್ನಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ಮೂಲಕ ಈರುಳ್ಳಿಯ ಬೆಲೆ ಏರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ತ್ವರಿತವಾಗಿ ಮಧ್ಯ ಪ್ರವೇಶಿಸಿದೆ. 2023-24ರ ಋತುವಿನಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. 2022-23ರಲ್ಲಿ ಸರ್ಕಾರ 2.51 ಲಕ್ಷ ಟನ್ …
Read More »ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವು!
ಗುಜರಾತ್: ಅಹಮದಾಬಾದ್‌ನ ಬಾವ್ಲಾ-ಬಗೋದ್ರಾ ಹೆದ್ದಾರಿಯಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಕನಿಷ್ಠ 10 ಜನರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಲಾರಿಯ ಹಿಂಬದಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದು ಘಟನೆ ನಡೆದಿದೆ. ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅಹಮದಾಬಾದ್ ಜಿಲ್ಲಾ ಎಸ್ಪಿ ಅಮಿತ್ ಕುಮಾರ್ ವಾಸವ, ”ರೈತ ಕುಟುಂಬವೊಂದು ದೇವರ ದರ್ಶನ ಮುಗಿಸಿ ಮಿನಿ ಟ್ರಕ್‌ನಲ್ಲಿ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಗ್ರಾಮದತ್ತ ಹಿಂದಿರುಗುತ್ತಿತ್ತು. …
Read More »ರೈಲು ಟಿಕೆಟನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಪ್ರಯತ್ನಿಸುವಾಗ 3.5 ಲಕ್ಷ ರೂಪಾಯಿ ಕಳೆದುಕೊಂಡ
ಸೈಬರ್ ಕಳ್ಳರು ಜನರ ಖಾತೆಗಳಿಂದ ಹಣ ದೋಚುವ ಪ್ರಕರಣಗಳು ಮುಂದುವರೆದಿವೆ. ಈ ಕುರಿತು ಮತ್ತೊಂದು ಘಟನೆ ವರದಿಯಾಗಿದ್ದು, ಕೋಝಿಕ್ಕೋಡ್ ಮೂಲದ ವ್ಯಕ್ತಿ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಕೋಝಿಕ್ಕೋಡ್‌ನ ವ್ಯಕ್ತಿ ತನ್ನ ರೈಲು ಟಿಕೆಟನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಪ್ರಯತ್ನಿಸುವಾಗ 3.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅವರ ಎಸ್ಬಿ ಮತ್ತು ಎಫ್ಡಿ ಖಾತೆಗಳಿಂದ ಹಣ ದೋಚಲಾಗಿದೆ. 3 ಸೀಕ್ರೆಟ್ ಕೋಡ್ ವೆರಿಫಿಕೇಶನ್ ಮತ್ತು 2 ಒಟಿಪಿ ವೆರಿಫಿಕೇಶನ್ಗಳ ನಂತರ ಖಾತೆಯಿಂದ ಹಣ …
Read More »ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಮುಂದೆ ಇಂದು ಮೃತರ ತಾಯಿ ಹಾಗೂ ಪತ್ನಿ ಕಣ್ಣೀರು ಹಾಕಿದರು.
ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವಂತೆ ಒತ್ತಾಯಿಸಿ ಮೃತರ ತಾಯಿ ಮತ್ತು ಪತ್ನಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಮುಂದೆ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಮೂಲಕ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂತೋಷ ಪಾಟೀಲ ತಾಯಿ ಪಾರ್ವತಿ ಮತ್ತು ಪತ್ನಿ ಜಯಶ್ರೀ, ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವ ನಿಟ್ಟಿನಲ್ಲಿ ಸಿಐಡಿಗೆ ವಹಿಸುವಂತೆ ಮನವಿ …
Read More »ಗುತ್ತಿಗೆದಾರರಿಗೆ ಬಿಲ್ ಕೊಡುವುದು ಬೇಡ ಅನ್ನೋದಿಲ್ಲ. ತನಿಖೆಯಲ್ಲಿ ತಪ್ಪು ಮಾಡಿಲ್ಲ ಅನ್ನೋದು ಸಾಬೀತಾದರೆ ಬಿಲ್ ಖಂಡಿತ ಕೊಡುತ್ತೇವೆ ಎಂದ ಸಿಎಂ
ಬೆಳಗಾವಿ: ಈ ರಾಜ್ಯವನ್ನು ಬಿಜೆಪಿಗರು ಹಾಳು ಮಾಡಿದ್ದಾರೆ. ಆರ್ಥಿಕವಾಗಿ, ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದರಿಂದ ಬಿಜೆಪಿಗರಿಗೆ ಭಯ ಆರಂಭವಾಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ, ಗೆಲ್ಲಲಿಲ್ಲ ಎಂದು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಿನ್ ಲಾಡನ್ ಸರ್ಕಾರ ಎಂಬ ಆರ್.ಅಶೋಕ್ ಹೇಳಿಕೆ …
Read More »ಮಣಿಪುರ ಹೊತ್ತಿ ಉರೀತಿದ್ರೆ, ಪ್ರಧಾನಿ ಲೋಕಸಭೆಯಲ್ಲಿ ಜೋಕ್ ಮಾಡ್ತಿದ್ರು: ರಾಹುಲ್ ಗಾಂಧಿ
ನವದೆಹಲಿ: ಮಣಿಪುರ ಹಿಂಸಾಚಾರ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು. ”ಪ್ರಧಾನಿ ಮೋದಿ ಮಣಿಪುರವನ್ನು ಬೆಂಕಿಯಲ್ಲಿ ಉರಿಯಲು ಬಯಸುತ್ತಿದ್ದಾರೆ. ಅವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿಲ್ಲ” ಎಂದು ಗಂಭೀರ ಆರೋಪ ಮಾಡಿದ ರಾಹುಲ್, ”ಭಾರತೀಯ ಸೇನೆಯು ಸಹಾಯದಿಂದ ಎರಡೇ ದಿನದಲ್ಲಿ ಹಿಂಸಾಚಾರ ನಿಲ್ಲಿಸಬಹುದು” ಎಂದು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ”ನಿನ್ನೆ ಸಂಸತ್ತಿನಲ್ಲಿ …
Read More »