Breaking News

ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್; ಚಂದ್ರನ ಮೇಲೆ ಇವು ಮಾಡುವ ಕೆಲಸಗಳೇನು?

ಬೆಂಗಳೂರು: ಚಂದ್ರಯಾನ -3 ಮಿಷನ್​ನ ಲ್ಯಾಂಡರ್ ‘ವಿಕ್ರಮ್’ ಮತ್ತು ರೋವರ್ ‘ಪ್ರಜ್ಞಾನ್’ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ, ಚಂದ್ರನ ಮೇಲಿನ ಕಾರ್ಯಾಚರಣೆಯ ಒಟ್ಟಾರೆ ಯಶಸ್ಸಿಗೆ ನಿರ್ಣಾಯಕವಾದ ಲ್ಯಾಂಡರ್ ಮತ್ತು ರೋವರ್ ಇವುಗಳು ತಕ್ಷಣವೇ ಕೆಲ ಮುಖ್ಯ ಕೆಲಸಗಳನ್ನು ಮಾಡಲಿವೆ. ಏತನ್ಮಧ್ಯೆ ವಿಕ್ರಮ್ ಮತ್ತು ಪ್ರಜ್ಞಾನ್ ಇವೆರಡೂ ಯಶಸ್ವಿಯಾಗಿ ಕೆಲಸ ಮಾಡಲಿವೆ ಎಂದು ಇಸ್ರೋ ವಿಜ್ಞಾನಿಗಳು ಕೂಡ ವಿಶ್ವಾಸ ಹೊಂದಿದ್ದಾರೆ. ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮತ್ತು ರೋವರ್ ಅನ್ನು ನಿಯೋಜಿಸುವ …

Read More »

307 ಟ್ರಾನ್ಸ್​ಲೇಟರ್​ ಹುದ್ದೆಗೆ ಅರ್ಜಿ ಆಹ್ವಾನ.. ಪದವಿ ಆಗಿದ್ರೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಖಾಲಿ ಇರುವ ಟ್ರಾನ್ಸ್​ಲೇಟರ್​ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಜ್ಯೂನಿಯರ್​ ಟ್ರಾನ್ಸ್​ಲೇಟರ್​ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 307 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸ್ನಾತಕೋತ್ತರ ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಮತ್ತು ವೇತನ ಸೇರಿದಂತೆ …

Read More »

ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ.

ಮುಂಬೈ : ದೇಶೀಯ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಬುಧವಾರ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಆದರೆ ನಂತರ ಮಿಶ್ರ ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳು ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವಿನ ಹಿನ್ನೆಲೆಯಲ್ಲಿ ವಹಿವಾಟಿನ ಮಧ್ಯದಲ್ಲಿ ಶೇರು ಮಾರುಕಟ್ಟೆಗಳು ಏರಿಕೆಯನ್ನು ತುಸು ಕಡಿಮೆ ಮಾಡಿಕೊಂಡವು.   ದೇಶೀಯ ಸೂಚ್ಯಂಕಗಳಾದ ಎನ್‌ಎಸ್‌ಇ ನಿಫ್ಟಿ ಮತ್ತು ಬಿಎಸ್‌ಇ ಸೆನ್ಸೆಕ್ಸ್ ಒಂದು ದಿನದ ಅಸ್ಥಿರ ವಹಿವಾಟಿನ ನಂತರ ಬುಧವಾರ ಏರಿಕೆಯಲ್ಲಿ ಕೊನೆಗೊಂಡವು. ಸೆನ್ಸೆಕ್ಸ್ 213.27 ಪಾಯಿಂಟ್ ಅಥವಾ …

Read More »

ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಎರಡನೇ ಪಂದ್ಯ ಡ್ರಾ, ನಾಳೆ ಟೈ ಬ್ರೇಕರ್​ನಲ್ಲಿ ಫಲಿತಾಂಶ

ಬಾಕು (ಅಜರ್‌ಬೈಜಾನ್): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರ ನಡುವೆ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ ಪಂದ್ಯದ ಎರಡನೇ ಮ್ಯಾಚ್​ ಕೂಡಾ ಡ್ರಾ ಆಗಿದೆ. ಫಲಿತಾಂಶ ನಾಳೆ ನಡೆಯಲಿರುವ ಟೈ ಬ್ರೇಕರ್​ ಪಂದ್ಯದದಲ್ಲಿ ತಿಳಿದು ಬರಲಿದೆ. ಇಂದು ಪಂದ್ಯ ಆರಂಭವಾಗಿ ಒಂದು ಗಂಟೆಯಲ್ಲಿ 21 ನಡೆಗಳ ನಂತರ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರು ಆರ್ ಪ್ರಜ್ಞಾನಂದ ಅವರ …

Read More »

ಸ್ಯಾಮ್​ಸಂಗ್​ ಮಡಚುವ ಸ್ಮಾರ್ಟ್​ಪೋನ್​​ಗಳಿಗೆ ದೇಶದಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.

ನವದೆಹಲಿ : ತಾನು ಹೊಸದಾಗಿ ಲಾಂಚ್ ಮಾಡಲು ಯೋಜಿಸಿರುವ ಮಡಚುವ ಸ್ಮಾರ್ಟ್​ಪೋನ್​ಗಳಿಗೆ ಮೂರು ವಾರಗಳ ಅವಧಿಯಲ್ಲಿ (ಜುಲೈ 27-ಆಗಸ್ಟ್ 17) 1.5 ಲಕ್ಷ ಪ್ರೀ-ಆರ್ಡರ್​ಗಳು ಬಂದಿವೆ ಎಂದು ಸ್ಯಾಮ್​​ಸಂಗ್​ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಡರ್​​ ಪ್ರಮಾಣದಲ್ಲಿ 1.5 ಪಟ್ಟು ಹೆಚ್ಚಾಗಿದೆ. ತನ್ನ ಮಡಚುವ ಮೇಕ್​ ಇನ್ ಇಂಡಿಯಾ ಫೋನ್​ಗಳಿಗೆ ದೇಶಾದ್ಯಂತ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಸ್ಯಾಮ್​ಸಂಗ್​ ಉತ್ತೇಜಿತವಾಗಿದೆ. ಶ್ರೇಣಿ 2, 3 ಮತ್ತು 4 ನಗರಗಳಲ್ಲಿ ತ್ವರಿತ ಲಭ್ಯತೆ, ವಿಶಿಷ್ಟ …

Read More »

40 ವರ್ಷದ ವ್ಯಕ್ತಿಯಲ್ಲಿ ಗಂಡು, ಹೆಣ್ಣಿನ ಎರಡೂ ಜನನಾಂಗ ಪತ್ತೆ: ಅಪರೂಪದ ಪ್ರಕರಣಕ್ಕೆ ಕಿಮ್ಸ್​ ವೈದ್ಯರ ಶಸ್ತ್ರಚಿಕಿತ್ಸೆ

ಹೈದರಾಬಾದ್ (ತೆಲಂಗಾಣ): ಮಾನವನ ದೇಹ ರಹಸ್ಯಗಳ ಗೂಡು. ದೇಹದಲ್ಲಿ ಕೆಲವೊಮ್ಮೆ ವಿಶೇಷತೆಗಳು ಘಟಿಸಿ ವೈದ್ಯಲೋಕಕ್ಕೇ ಅಚ್ಚರಿ ಉಂಟು ಮಾಡುತ್ತವೆ. ಅಂಥಹದ್ದೇ ಒಂದು ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ. ಹೊಟ್ಟೆ ನೋವೆಂದು ಹೋದ ವ್ಯಕ್ತಿಗೆ ತಪಾಸಣೆಯ ವೇಳೆ ದೇಹದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಎರಡೂ ಇರುವುದು ಕಂಡುಬಂದಿದೆ. ಇದರಲ್ಲಿ ಒಂದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಲಾಗಿದೆ. 40 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಿಕಂದರಾಬಾದ್​ನ ಕಿಮ್ಸ್​ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದರು. ಅವರಿಗೆ ನಡೆಸಿದ …

Read More »

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ಕಲ್ಪಿಸದೇ ಇರುವುದು ಖಂಡನೀಯ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಾಗ್ದಾಳಿ ನಡೆಸಿದ್ದಾರೆ

ಬೆಂಗಳೂರು : ಪರಿಷತ್ತು ಸಮಸ್ತ ಕನ್ನಡಿಗರ ಪರವಾಗಿ ಮಾಡಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ ಎನ್ನುವುದು ಖೇದದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಿಡಿಕಾರಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ಕಲ್ಪಿಸದೇ ಇರುವುದು ಸಮಸ್ತ …

Read More »

ಇಸ್ರೋ ಚಂದ್ರೋದಯ! ‘ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ’- ಇಸ್ರೋ ಅಧ್ಯಕ್ಷ ಸೋಮನಾಥ್​

ಬೆಂಗಳೂರು : ಚಂದ್ರಯಾನ-3 ಯೋಜನೆ ಸಕ್ಸಸ್​ ಕಂಡು ವಿಕ್ರಮ್​ ಲ್ಯಾಂಡರ್​ ಚಂದ್ರಸ್ಪರ್ಶವಾಗಿದೆ. ಭಾರತ ಚಂದ್ರನ ಮೇಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ ಇಂದು ಸಂಜೆ (ಬುಧವಾರ) ಘೋಷಿಸಿದರು. ಚಂದ್ರಯಾನ-3 ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಎಲ್ಲರಿಗೂ ಧನ್ಯವಾದ ತಿಳಿಸಿ ಮಾತನಾಡಿದ ಅವರು, ಇನ್ನು ನಾವು ಚಂದ್ರನ ಊರಿನ ಪಯಣಿಗರು. ಶಶಿಯ ಮೇಲೆ ನಮ್ಮ ನೌಕೆ ನಿಂತಿದೆ. ನಾಲ್ಕು ವರ್ಷಗಳ ಶ್ರಮ ಇಂದು ಪ್ರತಿಫಲ ಕಂಡಿತು. …

Read More »

ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್​ಗಳ ತೆರವಿಗೆ ಬೆಸ್ಕಾಂ ಒಂದು ವಾರದ ಗಡುವು

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್ ಕೇಬಲ್‌ ಗಳನ್ನು ಒಂದು ವಾರದೊಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ ಗಳಿಗೆ ಬೆಸ್ಕಾಂ ಕಟ್ಟುನಿಟ್ಟಿನ ಸೂಚನೆ ನೀಡಿದೆ.   ಬೆಸ್ಕಾಂ ವಿದ್ಯುತ್‌ ಕಂಬಗಳ ಮೇಲೆ ಅನಧಿಕೃತವಾಗಿ ಒಎಫ್‌ಸಿ ಕೇಬಲ್‌ ಹಾಗೂ ಇನ್ನಿತರ ಕೇಬಲ್‌ ಗಳನ್ನು ಅಳವಡಿಸಿದ್ದ ಪರಿಣಾಮ ವಿದ್ಯುತ್‌ ಕಂಬ ಉರುಳಿ …

Read More »

ಬಸವನಕುಡಚಿಯ ಗ್ರಾಮದಲ್ಲಿನ ಸಮಸ್ಯೆ ಆಲಿಸಲು ಪಾಲಿಕೆಯ ಆಯುಕ್ತರು ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಳಗಾವಿ : ಮಹಾನಗರ ಪಾಲಿಕೆಯ 48ನೇ ವಾರ್ಡ್​ಗೆ ಒಳಪಡುವ ಬಸವನಕುಡಚಿಯ ಜನರ ಸಮಸ್ಯೆ ಆಲಿಸಲು ಕಳೆದ ನಾಲ್ಕು ದಶಕಗಳಿಂದ ಒಬ್ಬ ಪಾಲಿಕೆ ಆಯುಕ್ತರು ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. 1984ರಲ್ಲಿ ಈ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಈವರೆಗೆ ಒಬ್ಬರೇ ಒಬ್ಬ ಪಾಲಿಕೆ ಆಯುಕ್ತರು ಬಂದು ಜನರ ಸಮಸ್ಯೆ ಆಲಿಸಿಲ್ಲವಂತೆ. ನಾವು ಹೆಸರಿಗಷ್ಟೇ ಪಾಲಿಕೆ ವ್ಯಾಪ್ತಿಯಲ್ಲಿದ್ದೇವೆ. ಹಾಗಾಗಿ ನಾವು ಪಾಲಿಕೆಯಲ್ಲಿ ಮುಂದುವರಿಯಲ್ಲ. ನಮ್ಮ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯತಿ ರಚಿಸಿ …

Read More »