Breaking News

ಸಿಯಾಚಿನ್​ನಲ್ಲಿ ಅಗ್ನಿವೀರ್​​​ ಅಕ್ಷಯ್​ ಹುತಾತ್ಮ: ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಸಿಯಾಚಿನ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ‘ಅಗ್ನಿವೀರ್​’​​​ ಗವಟೆ ಅಕ್ಷಯ್​ ಲಕ್ಷ್ಮಣ್​ ಎಂಬುವರು ಹುತಾತ್ಮರಾಗಿದ್ದಾರೆ. ಇವರು ಸೇನಾ ಕಾರ್ಯಾಚರಣೆಯಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಮೊದಲ ಅಗ್ನಿವೀರ್​ ಆಗಿದ್ದು, ಭಾರತೀಯ ಸೇನೆಯು ಭಾನುವಾರ ಅಂತಿಮ ಗೌರವ ಸಲ್ಲಿಸಿದೆ.     ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿಯಲ್ಲಿ ಗವಟೆ ಅಕ್ಷಯ್​ ಲಕ್ಷ್ಮಣ್​ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಕ್ಷಯ್ ಮಹಾರಾಷ್ಟ್ರ ಮೂಲದವರಾಗಿದ್ದು, ಇವರ ಸಾವಿನ ಕುರಿತು ನಿಖರ ಮಾಹಿತಿ ತಕ್ಷಣಕ್ಕೆ …

Read More »

ಕಾವೇರಿ ವಿವಾದ ಪ್ರಧಾನಿ ಮಧ್ಯಪ್ರವೇಶಿಸಿ 2 ಸರ್ಕಾರಗಳ ನಡುವೆ ಮಾತುಕತೆ ನಡೆಸಲಿ : ಶಿವರಾಜ್‌ ಕುಮಾರ್

    ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕು ಎಂದು ನಟ ಡಾ.ಶಿವರಾಜ್‌ ಕುಮಾರ್ ತಿಳಿಸಿದ್ದಾರೆ.   ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಷ್ಟಕಾಲದ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಾತುಕತೆಗೆ ಮುಂದಾಗಬೇಕು. ಎರಡೂ …

Read More »

ಈ ಹಿಂದೆ ರಾಜಕೀಯ ಒಂದು ಸೇವೆಯಾಗಿತ್ತು. ಇಂದು ವೃತ್ತಿಯಾಗಿದೆ- ಸಂತೋಷ್ ಹೆಗ್ಡೆ

    ಮಂಡ್ಯ: ಪ್ರಸ್ತುತ ರಾಜಕೀಯ ವೃತ್ತಿಯಾಗಿದೆ. ಎಲ್ಲೂ ಸಿಗದ ಸೌಲಭ್ಯ ರಾಜಕೀಯದಲ್ಲಿ ಸಿಗುತ್ತೆ ಎಂದು ಮದ್ದೂರಿನ ವಳಗೆರೆಹಳ್ಳಿ ಗ್ರಾಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಕರಣದ ಮರುತನಿಖೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಇದೊಂದು ಸಬ್ಜುಡೀಸ್ ಅಂತೇವೆ. ಕೋರ್ಟ್​ನಲ್ಲಿ ಕೇಸ್ ಪೆಂಡಿಂಗ್ ಇದೆ. ಒಬ್ಬ ನಿವೃತ್ತ ನ್ಯಾಯಾಧೀಶನಾಗಿ ನಾನು ಮಾತನಾಡುವುದು ಸೂಕ್ತವಲ್ಲ ಎಂದರು. ಐಟಿ ರೇಡ್ ಹಣ ಎಲ್ಲಿಗೆ ಹೋಗುತ್ತೆ? ಎಂಬ ವಿಚಾರಕ್ಕೆ, …

Read More »

ಹಾವೇರಿಯ 8 ತಾಲೂಕುಗಳಲ್ಲಿ ಬರ: ಜಾನುವಾರು ಸಾಕಲಾರದೆ ಮಾರಾಟ ಮಾಡಲು ಮುಂದಾದ ರೈತರು

ಹಾವೇರಿ: ಈ ಬಾರಿ ಮಳೆ ಕೊರತೆಯಿಂದಜಿಲ್ಲೆಯ ಎಂಟು ತಾಲೂಕುಗಳನ್ನು ಭೀಕರ ಬರಗಾಲ ಆವರಿಸಿದೆ. ಜಾನುವಾರುಗಳಿಗೆ ಮೇವು, ನೀರು ನೀಡಲಾಗದೇ ರೈತರು ಅವುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕದ ಅತಿದೊಡ್ಡ ಜಾನುವಾರು ಸಂತೆಗಳಲ್ಲಿ ಒಂದಾದ ಹಾವೇರಿಯಲ್ಲಿ ಈಗ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯ ತುಂಬೆಲ್ಲಾ ಜಾನುವಾರುಗಳೇ ಕಾಣಿಸುತ್ತಿವೆ. ರೈತರು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಮಾರಾಟಕ್ಕೆ ತರುತ್ತಿದ್ದು ಅವುಗಳ ದರವೂ ಕಡಿಮೆಯಾಗಿದೆ. ರೈತ ನಿಂಗಪ್ಪ ನೆಲೋಗಲ್ ಮಾತನಾಡಿ, “ಮಳೆ ಕೊರತೆಯಿಂದ ಹೊಲ, …

Read More »

ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದ ಮೊಹಮ್ಮದ್​ ಶಮಿ

    ಧರ್ಮಶಾಲಾ ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್​ ಶಮಿ ಐದು ವಿಕೆಟ್​ ಕಿತ್ತರು. ಧರ್ಮಶಾಲಾ (ಹಿಮಾಚಲ ಪ್ರದೇಶ): 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ನಡೆದ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು 300 ರನ್‌ಗಳ ಗಡಿ ದಾಟದಂತೆ ನಿಯಂತ್ರಿಸಿದೆ. ಅಲ್ಲದೇ ಯಾವುದೇ ತಂಡದ ಬ್ಯಾಟರ್​ಗಳೂ ಶತಕ ದಾಖಲಿಸಿರಲಿಲ್ಲ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಡೇರಿಲ್ ಮಿಚೆಲ್ ಶತಕ ದಾಖಲಿಸುವ ಮೂಲಕ ಈ ರೆಕಾರ್ಡ್​ ಬ್ರೇಕ್​ …

Read More »

3 ದಿನ ಕಿತ್ತೂರು ಉತ್ಸವ: ಎತ್ತ ನೋಡಿದರೂ ದೀಪಾಲಂಕಾರದಿಂದ ಕಟ್ಟಡಗಳು ಝಗಮಗಿಸುತ್ತಿವೆ.

ಬೆಳಗಾವಿ: ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಬೆಳಗಾವಿಯಲ್ಲಿ ಚನ್ನಮ್ಮ‌ನ ಕಿತ್ತೂರು ಉತ್ಸವದ ಸಂಭ್ರಮ ಕಳೆಗಟ್ಟಿದೆ.   ಅ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ರಾಜ್ಯಮಟ್ಟದ ಉತ್ಸವಕ್ಕೆ ಕಿತ್ತೂರು ಸಜ್ಜಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಇರುವ ವೃತ್ತ, ಮಹಾದ್ವಾರ, ಕೋಟೆಯ ಆವರಣ ಮತ್ತು ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕಿತ್ತೂರು ಉತ್ಸವವನ್ನು 1997ರಿಂದ ಆಚರಿಸಲಾಗುತ್ತಿದೆ. 2022ರಲ್ಲಿ ಬಿಜೆಪಿ ಸರ್ಕಾರ …

Read More »

ಹೆಚ್.​ಡಿ.ರೇವಣ್ಣ ಆಪ್ತನ ಮೇಲೆ ದಾಳಿ ಪ್ರಕರಣ: ಪೊಲೀಸ್​ ಅಧಿಕಾರಿ ಸೇರಿ ಆರು ಮಂದಿ ಬಂಧನ

ಹಾಸನ: ಮಾಜಿ ಸಚಿವ ಹೆಚ್​​.ಡಿ.ರೇವಣ್ಣನ ಆಪ್ತ ಸಹಾಯಕರಲ್ಲಿ ಒಬ್ಬರಾಗಿರುವ ಚನ್ನರಾಯಪಟ್ಟಣದ ಉದ್ಯಮಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ ಎಂಬವರ ಮೇಲೆ ನಡೆದಿದ್ದ ದುಷ್ಕರ್ಮಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪೊಲೀಸ್​ ಅಧಿಕಾರಿ ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಆರ್​ ಸತೀಶ್​ (38), ಸಿ ಮುರುಗನ್​, ಆರ್​ ಮಧುಸೂದನ್​ (38), ಚನ್ನರಾಯಪಟ್ಟಣದ ಬಿ ಎಸ್​ ತೇಜಸ್ವಿ (37), ಅರವಿಂದ್​ (40) ಹಾಗೂ ಕೋಲಾರದ ಆಂತರಿಕ ಭದ್ರತಾ ವಿಭಾಗದ ಪೊಲೀಸ್​ …

Read More »

ಶಾಲೆಗಳಿಗೆ ಹಳೆಯ ಪದ್ಧತಿಯಂತೆ ರಜೆ ಮುಂದುವರೆಸಿ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ದಸರಾ ರಜೆಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಾನುವಾರ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಮನವಿ ಸ್ವೀಕರಿಸಿದ ಸಭಾಪತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಫೋನ್ ಕರೆಯ​ ಮೂಲಕ ಮಕ್ಕಳ ಹಿತದೃಷ್ಟಿಯಿಂದ ರಜೆ ವಿಸ್ತರಣೆ ಮಾಡಿ ಎಂದು ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೊರಟ್ಟಿ, “ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ರೀತಿಯಲ್ಲಿಲ್ಲ. ಹಿಂದೆಲ್ಲ …

Read More »

ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ: ₹43 ಲಕ್ಷ ಮೌಲ್ಯದ ಮದ್ಯ ಜಪ್ತಿ

ಬೆಳಗಾವಿ: ಅಬಕಾರಿ ಅಧಿಕಾರಿಗಳು ಬಾನುವಾರ ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡಿದ್ದು, ಗೋವಾದಿಂದ ತೆಲಂಗಾಣಕ್ಕೆ ದುಬಾರಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಭೇದಿಸಿದ್ದಾರೆ. 43 ಲಕ್ಷ ರೂ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಪ್ಲೈವುಡ್‌ ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಮಧ್ಯೆ ಮದ್ಯದ ಬಾಟಲಿಗಳನ್ನಿಟ್ಟು ಸಾಗಣೆ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಭೇದಿಸಿದ್ದ ಅಧಿಕಾರಿಗಳು, ಇದೀಗ ಮತ್ತೊಂದು ಪ್ರಕರಣ ಪತ್ತೆ ಮಾಡಿದ್ದಾರೆ. ಇಂದು ಬೆಳಿಗ್ಗೆ 3.30ರ ಸುಮಾರಿಗೆ …

Read More »

ಆಸ್ಪತ್ರೆಯಲ್ಲಿ ನರ್ಸ್​ಗಳು ಅಜ್ಜ ಅಂದಿದ್ದಕ್ಕೆ ಮಾನಸಿಕವಾಗಿದ್ದೆ : ಶಾಸಕ ರಾಜು ಕಾಗೆ

ಚಿಕ್ಕೋಡಿ (ಬೆಳಗಾವಿ) : ನನ್ನನ್ನು ಅಜ್ಜ ಎಂದು ಕರೆಯುದಕ್ಕೆ ಬೇಸರ ಇದೆ. ನನ್ನ ತಲೆ ಕೂದಲು ಮಾತ್ರ ಬೆಳ್ಳಗಾಗಿವೆ. ಆದರೆ ನಾನು ಇನ್ನೂ ಯುವಕರಂತೆ ಹುಮ್ಮಸ್ಸಿನಿಂದ ಇದ್ದೇನೆ. ಈ ವಯಸ್ಸಿನಲ್ಲಿ ನಾನು ಇಷ್ಟು ಹುಮ್ಮಸ್ಸಿನಿಂದಿರುವುದನ್ನು ಈಗಿನ ಯುವಕರು ನನ್ನನ್ನು ನೋಡಿ ಕಲಿಯಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು. ಶನಿವಾರ ದಸರಾ ಹಬ್ಬದ ಪ್ರಯುಕ್ತ ಅಥಣಿ ತಾಲೂಕಿನ ಪಿಕೆ ನಾಗನೂರು ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಶಾಸಕ ರಾಜೇಶ್​ …

Read More »