Breaking News

ದೇವೇಗೌಡರು ಹಳ್ಳಿಯಲ್ಲಿ ಹುಟ್ಟಿ ಪ್ರಧಾನಿ ಆದರು: ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ : ಹೆಚ್ ವಿಶ್ವನಾಥ

ಹುಬ್ಬಳ್ಳಿ : ರಾಜಕಾರಣದಲ್ಲಿ ಯಾರು ಕನಸು ಕಂಡಿರೋದಿಲ್ಲ. ಅದರಂತೆ ಸಿಎಂ ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರು ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.   ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೆ ರಾಷ್ಟ್ರದ ರಾಜಕಾರಣಕ್ಕೆ ಹೋಗಬಾರದು. ಈ ಹಿಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ಆಗುವ ಯಾವುದೇ ಕನಸು ಕಂಡಿರಲಿಲ್ಲ. ಅದರಂತೆ ಸಿದ್ದರಾಮಯ್ಯ ಅವರು …

Read More »

ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ.:ಮಾಜಿ ಶಾಸಕ ಅನಿಲ‌ ಬೆನಕೆ

ಬೆಳಗಾವಿ: ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ವಿನಾಕಾರಣ ರಾಜಕೀಯ ವಿರೋಧಿಗಳು ಮಾಧ್ಯಮಗಳಲ್ಲಿ ನನ್ನ ಹೆಸರು ಕೆಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 25 ವರ್ಷಗಳಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಎರಡು ಬಾರಿ ಟಿಕೆಟ್ ಕೇಳಿದಾಗ ಕೊಟ್ಟಿರಲಿಲ್ಲ. ಮೂರನೇ ಬಾರಿ 2018ರಲ್ಲಿ ಟಿಕೆಟ್ ನೀಡಿದಾಗ ಉತ್ತರ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು …

Read More »

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಗಜಪಡೆಗೆ ಪೂಜೆ, ಅರಮನೆಗೆ ಅದ್ಧೂರಿ ಸ್ವಾಗತ…

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಅರಣ್ಯಾಧಿಕಾರಿಗಳು ಮಂಗಳವಾರ ಗಜಪಡೆಗೆ ಪೂಜೆ ನೆರವೇರಿಸಿದರು. ಇಲ್ಲಿನ ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.‌ ಗಜಪೂಜೆ ನಂತರ ನೈವೇದ್ಯ ಅರ್ಪಣೆ ಮಾಡಲಾಯಿತು. ಅರಣ್ಯಾಧಿಕಾರಿಗಳು ಗಜಪಡೆಗೆ ಪುಷ್ಪಾರ್ಚನೆ ಮಾಡಿದರು. ವಾದ್ಯಗೋಷ್ಠಿ ಮೂಲಕ ಅರಮನೆಯತ್ತ ಗಜಪಡೆ ಕಾಲ್ನಡಿಗೆಯಲ್ಲಿ ತೆರಳಿತು. ಕ್ಯಾಪ್ಟನ್ ಅಭಿಮನ್ಯು ಹಾಗೂ ಗಜಪಡೆಯು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆಗಮಿಸಿದ ವೇಳೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಜನಪದ ಕಲಾ ತಂಡಗಳೊಂದಿಗೆ ನಗರದ ಅಶೋಕಪುರಂನ …

Read More »

ಉಸಿರೇ ಉಸಿರೇ’ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ

ಉಸಿರೇ ಉಸಿರೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟ ಸುದೀಪ್ ತಮ್ಮ ಹುಟ್ಟು ಹಬ್ಬದ ಹಿಂದಿನ ದಿನ ಈ ಚಿತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಸಿಸಿಎಲ್ ಕ್ರಿಕೆಟ್ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ರಾಜೀವ್. ಸದ್ಯ ಉಸಿರೇ ಉಸಿರೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಜೀವ್ ಅವರ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿಸಿರುವ ಕಿಚ್ಚ ತಮ್ಮ …

Read More »

ಹೃದಯಾಘಾತದಿಂದ ಹೆಡ್ ಕಾನ್​ಸ್ಟೇಬಲ್ ನಿಧನ

ವಿಜಯನಗರ: ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ರಾಘವೇಂದ್ರ ಅವರು ಹೊಸಪೇಟೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ರಾಘವೇಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ರಾಘವೇಂದ್ರ ಅವರು 2005ರಲ್ಲಿ ಕಾನ್​ಸ್ಟೇಬಲ್ ಆಗಿ ನೇಮಕವಾಗಿದ್ದರು. ಕಳೆದ 18 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆ ಆಗಿದ್ದರು. ಹೆಡ್ ಕಾನ್​ಸ್ಟೇಬಲ್ …

Read More »

ಸ್ವಾಮೀಜಿ ನಿರ್ಧಾರದಿಂದ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಕರನ್ನು‌ ಹೊಂದಿರುವ ಹೆಗ್ಗಳಿಕೆಯನ್ನು ಈ ಗ್ರಾಮ ಪಡೆದುಕೊಂಡಿದೆ.

ಬೆಳಗಾವಿ: ಅದು ಶಿಕ್ಷಣ ವಂಚಿತ ಕುಗ್ರಾಮವಾಗಿತ್ತು. ಆದರೆ ಆ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರದಿಂದ ಈಗ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಕರನ್ನು‌ ಹೊಂದಿರುವ ಹೆಗ್ಗಳಿಕೆಯನ್ನು ಈ ಗ್ರಾಮ ಪಡೆದುಕೊಂಡಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಈ ವಿಶೇಷ ವರದಿ ನಿಮಗಾಗಿ. ಹೌದು, ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು ಸಿಗುತ್ತಾರೆ. ರಾಜ್ಯದ ವಿವಿಧೆಡೆ ಐನೂರಕ್ಕೂ ಹೆಚ್ಚು ಶಿಕ್ಷಕರು ಅಕ್ಷರ ಕಲಿಸುವ ಮೂಲಕ‌ …

Read More »

ಕಲಬುರಗಿಯಲ್ಲಿ ಭಾರಿ ಮಳೆ

ಕಲಬುರಗಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಿಡಿಲು ಬಡಿದು ಒಂದು ಪ್ರಾಣ ಹಾನಿ ಸಂಭವಿಸಿದ್ದು, ಕೆಲವು ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದು ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೆಪ್ಟೆಂಬರ್​ ಮೊದಲ ವಾರದಲ್ಲೇ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಇಂದು ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. …

Read More »

ಆದಿತ್ಯ ಎಲ್1 ಸೂರ್ಯನ ರಹಸ್ಯಗಳನ್ನು ಅನ್ವೇಷಿಸುವ ಗುರಿಯತ್ತ ಸಾಗುತ್ತಿದೆ.

ಬೆಂಗಳೂರು: ಆದಿತ್ಯ ಎಲ್1 ಸೂರ್ಯನ ರಹಸ್ಯಗಳನ್ನು ಅನ್ವೇಷಿಸುವ ಗುರಿಯತ್ತ ಸಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಮಂಗಳವಾರ ಎರಡನೇ ಭೂಕಕ್ಷೆ ಕಾಲಿಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತ್ತು. ಬೆಂಗಳೂರಿನಲ್ಲಿರುವ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ರಸ್ತುತ ಆದಿತ್ಯ ಎಲ್-1 ಉಪಗ್ರಹವು 282 km x 40225 km ಹೊಸ ಕಕ್ಷೆಯನ್ನು ಪ್ರವೇಶಿಸಿದೆ. ಮುಂದಿನ ಕಕ್ಷೆ ಏರಿಸುವ ತಂತ್ರವನ್ನು ಸೆಪ್ಟೆಂಬರ್ 10 ರಂದು ನಡೆಸಲಾಗುವುದು ಎಂದು ಇಸ್ರೋ ಸಾಮಾಜಿಕ ಮಾಧ್ಯಮ …

Read More »

ಚಿಕ್ಕೋಡಿ ಫುಡ್ ಪಾಯಿಸನ್​ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಆಗಸ್ಟ್ 28ರಂದು ಫುಡ್ ಪಾಯಿಸನ್ ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಓರ್ವ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕೋಡಿ ಪಟ್ಟಣದ ಶಬ್ಬಿರ್​ ಮಕಾಂದಾರ (58) ಮೃತರು. ಕಳೆದ ತಿಂಗಳು ಆಗಸ್ಟ್ 28 ರಂದು ಹಿರೇಕೋಡಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೋಜನದ ಬಳಿಕ 100ಕ್ಕೂ ಹೆಚ್ಚು ಜನ ವಾಂತಿ ಬೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. …

Read More »

IPS ಅಧಿಕಾರಿಗಳ ಮೇಜರಿ ಸರ್ಜರಿ ; ಮಿಡ್​ನೈಟ್​ನಲ್ಲೇ 35 IPS ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ..!

ಬೆಂಗಳೂರು :  IPS ಅಧಿಕಾರಿಗಳ ಮೇಜರಿ ಸರ್ಜರಿ ಮಾಡಲಾಗಿದ್ದು,  ಮಿಡ್​ನೈಟ್​ನಲ್ಲೇ ವರ್ಗಾವಣೆ ಲಿಸ್ಟ್​ ಹೊರಬಿದ್ದಿದೆ. ಸರ್ಕಾರ 35 IPS ಅಧಿಕಾರಿಗಳ ವರ್ಗಾವಣೆ ಮಾಡಿದೆ.  ಅನುಪಮ್​ ಅಗರವಾಲ್​​​-ಮಂಗಳೂರು ಕಮಿಷನರ್​​, ಶ್ರೀನಿವಾಸಗೌಡ-ಬೆಂಗಳೂರು CCB-2 ಡಿಸಿಪಿ, ಡಾ.ಶರಣಪ್ಪ-ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿ, ವರ್ತಿಕಾ ಕಟಿಯಾರ್​​​- ಬೆಂಗಳೂರು ದಕ್ಷಿಣ ಟ್ರಾಫಿಕ್​​​​​ ಡಿಸಿಪಿ, ಭೀಮಾಶಂಕರ್​ ಗುಳೇದ್​- ಬೆಳಗಾವಿ ಎಸ್​ಪಿ ಮತ್ತು ಅಬ್ದುಲ್​ ಅಹಾದ್​-ಬೆಂಗಳೂರು ಕೇಂದ್ರ ಡಿಸಿಪಿ, ಎಸ್​.ಗಿರೀಶ್​- ಬೆಂಗಳೂರು ಪಶ್ಚಿಮ ಡಿಸಿಪಿ, ಸಂಜೀವ್​ ಪಾಟೀಲ್​​- ವೈಟ್​ಫೀಲ್ಡ್​ ಡಿಸಿಪಿ.  ಡೆಕ್ಕಾ ಕಿಶೋರ್​​ ಬಾಬು-ಕಲಬುರಗಿ ಪೊಲೀಸ್ ತರಬೇತಿ ಕೇಂದ್ರ, …

Read More »