Breaking News

ಸೆ.3 ರಂದು ‘ಸನಾತನ ಧರ್ಮ ದಿನ’ ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

ವಾಷಿಂಗ್ಟನ್ (ಅಮೆರಿಕ) : ಸೆಪ್ಟೆಂಬರ್​ 3 ರಂದು ‘ಸನಾತನ ಧರ್ಮ ದಿನ’ ಆಚರಣೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಇದು ಭಾರತದಲ್ಲಿ ಅಲ್ಲ, ಬದಲಾಗಿ ಅಮೆರಿಕದಲ್ಲಿ. ಅಮೆರಿಕದ ಕೆಂಟುಕಿ ರಾಜ್ಯದ ನಗರವೊಂದರಲ್ಲಿ ಸೆಪ್ಟೆಂಬರ್ 3ನ್ನು ‘ಸನಾತನ ಧರ್ಮ ದಿನ’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಭಾರತದಲ್ಲಿನ ರಾಜ್ಯವೊಂದರ ಸಚಿವರೊಬ್ಬರು ಸನಾತನ ಧರ್ಮವನ್ನು ಹೀಯಾಳಿಸಿ ಮಾತನಾಡಿದ ಮಧ್ಯೆ ದೂರದ ಅಮೆರಿಕದಲ್ಲಿ ಅದೇ ಹಿಂದೂ ಸನಾತನ ಧರ್ಮದ ಬಗ್ಗೆ ಒಲವು ಬೆಳೆಯುತ್ತಿರುವುದು ಗಮನಾರ್ಹ. ಲೂಯಿಸ್​ವಿಲ್ಲೆ ಮೇಯರ್ ಕ್ರೇಗ್ …

Read More »

ಕೊಮುಲ್​ನಲ್ಲಿ 179 ಹುದ್ದೆಗಳಿಗೆ ನೇಮಕಾತಿ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕರ್ನಾಟಕ ಹಾಲು ಉತ್ಪಾದಕರ ಸಂಘದಿಂದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತಕ್ಕೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು 179 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ, ನೇಮಕಾತಿ, …

Read More »

ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಸನಾತನ ಧರ್ಮದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾನು ಮಾಡಿದ ಟ್ವೀಟ್​ನಲ್ಲಿ ಏನೂ ತಪ್ಪಿಲ್ಲ, ಸಂವಿಧಾನವೇ ನನ್ನ ಧರ್ಮ ಅಂತಾ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.   ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ಸಂವಿಧಾನದಿಂದ ಏನೂ ಇಲ್ಲ ಅಂತ ಬಿಜೆಪಿ ಪಕ್ಷದವರು ಅವರು ಹೇಳಲಿ.‌ ಮೊಸರಲ್ಲಿ ಕಲ್ಲು ಹುಡುಕುವುದು ಬೇಡ” ಎಂದು ತಿರುಗೇಟು ನೀಡಿದರು. …

Read More »

ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ : ಸಚಿವ ಶಿವಾನಂದ ಪಾಟೀಲ್​

ಹಾವೇರಿ : ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ರೈತರ ಆತ್ಮಹತ್ಯೆಯ ನಿಖರ ಸಂಖ್ಯೆ ತಿಳಿಯಲು ಎಫ್​ಎಸ್‌ಎಲ್​ ವರದಿ ಬರುವವರೆಗೂ ಕಾಯಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ …

Read More »

ಉಮ್ಲಿಂಗ್ ಲಾ ಪ್ರದೇಶ ತಲುಪಿದ ಸುಳ್ಯ ಬಾಲಕ.. ಮೂರುವರೆ ವರ್ಷದ ಜಝೀಲ್ ರೆಹ್ಮಾನ್​ನಿಂದ ವಿಶಿಷ್ಟ ಸಾಧನೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉದ್ಯಮಿಯೊಬ್ಬರು ಪತ್ನಿ ಮತ್ತು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸುಮಾರು 19,024 ಅಡಿ ಎತ್ತರದ ಉಮ್ಲಿಂಗ್ ಲಾ ಪ್ರದೇಶವನ್ನು ಬೈಕ್‌ನಲ್ಲಿ ತಲುಪಿದ್ದು, ಇದೀಗ ಸುಳ್ಯಕ್ಕೆ ವಾಪಸಾಗುತ್ತಿದ್ದಾರೆ.   ಸುಳ್ಯ ತಾಲೂಕಿನ ನಿವಾಸಿಯಾದ ಮತ್ತು ಇಲ್ಲಿನ ಹಳೆಗೇಟ್‌ ಎಂಬಲ್ಲಿರುವ ಹೋಮ್ ಗ್ಯಾಲರಿ ಮಾಲೀಕರಾದ ತೌಹೀದ್ ರೆಹ್ಮಾನ್ ಹಾಗೂ ಅವರ ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ತಮ್ಮ ಬುಲೆಟ್‌ ಬೈಕ್‌ನಲ್ಲಿ ಉಮ್ಮಿಂಗ್ ಲಾ …

Read More »

ಸಂಸತ್ತಿನ ಕಾರ್ಯಗಳನ್ನು ಸೋನಿಯಾ ರಾಜಕೀಯಗೊಳಿಸ್ತಿದ್ದಾರೆ’

ನವದೆಹಲಿ :ಸಂಸತ್ತಿನ ಕಾರ್ಯವ್ಯಾಪ್ತಿಯಲ್ಲಿ ಸೋನಿಯಾ ಗಾಂಧಿ ರಾಜಕೀಯಯ ಬೆರೆಸಲು ಹೊರಟಿದ್ದಾರೆ. ಅವರು ಸಂಸತ್ತಿನ ವಿಶೇ‍ಷ ಅಧಿವೇಶನದಲ್ಲಿ ವಿವಾದಗಳಿಗೆ ಮುನ್ನುಡಿ ಬರೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಕರೆದಿರುವ ವಿಶೇ‍ಷ ಅಧಿವೇಶನದ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಪತ್ರದ ಬಗ್ಗೆ ಬುಧವಾರ ಮಾತನಾಡಿರುವ ಅವರು, ಸೋನಿಯಾ ಅವರ ಪತ್ರವು …

Read More »

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸ

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸಗೈದಿರುವ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಕಂಕನವಾಡಿ, ಈರಣ್ಣ ಕೌಜಲಗಿ, ಅಪ್ಪಾಸಾಹೇಬ್ ಇಂಚಲ್, ಸುನೀಲ ದೊಡಮನಿ ಅವರನ್ನು ಬಂಧನ ಮಾಡಲಾಗಿದೆ. ಅಲ್ಲದೇ, ಬಬಲೇಶ್ವರದ ರೈತ ಚಂದ್ರಶೇಖರ ಕನ್ನೂರ ಅವರಿಗೆ ನಾಲ್ವರು ಮೋಸ ಮಾಡಿದ್ದಾರೆ . ವೈಟ್ ಮನಿ ನೀಡಿದ್ರೇ ದುಪ್ಪಟ್ಟು ಹಣದ ಆಸೆ ತೋರಿಸಿದ್ದಾರೆ. ಇದನ್ನು ನಂಬಿ ರೈತ ಅವರಿಗೆ …

Read More »

ಭೀಮಾತೀರದ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

ಭೀಮಾತೀರದ ನದಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಬಳಿಯ ನದಿಯಲ್ಲಿ ನಡೆದಿದೆ. ಕಪನಿಂಬರಗಿ ಗ್ರಾಮದ ಶಾಂತಯ್ಯ ಹಿರೇಮಠ ಮೃತಪಟ್ಟಿರುವ ದುರ್ದೈವಿಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Read More »

ನಿಪ್ಪಾಣಿ ತಾಲೂಕಿನ ನಂತರ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ಕ್ಷೇತ್ರಗಳಲ್ಲೂ ಸಂಚರಿಸಿ ಮೀಸಲಾತಿಯ ಹೋರಾಟದ ಜಾಗೃತಿ

ಚಿಕ್ಕೋಡಿ: ‘ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಇಷ್ಟಲಿಂಗಪೂಜೆ ಮಾಡುವ ಮೂಲಕ ಸರ್ಕಾರದ ಗಮನ ಸಲ್ಲಿಸಿ ಮೀಸಲಾತಿಗಾಗಿ ಒತ್ತಡ ಹೇರಲಾಗುವುದು. ನಗರದಲ್ಲಿ ಸೆ.೧೦ರಂದು ಬೆಳಗಾವಿ ಜಿಲ್ಲಾ ಮಟ್ಟದ ಹೋರಾಟ ನಡೆಸಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಸಿಗಬೇಕು ಹಾಗೂ ಕೇಂದ್ರ ಸರ್ಕಾರವು ಓಬಿಸಿ ಪಟ್ಟಿಯಲ್ಲಿ ಸೇರ್ಪಡಿಸಿಕೊಳ್ಳಬೇಕೆಂದು ಒತ್ತಾಯಿಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪ್ರಸಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು …

Read More »

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಲ್ಲಿ ನಡೆಯುತ್ತಿರುವ ಜಕನೆಮ್ಮ ದೇವಿ ಜಾತ್ರೆ ಹೆಸರಲ್ಲಿ ರಸ್ತೆ ಹಾಳು

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಲ್ಲಿ ನಡೆಯುತ್ತಿರುವ ಜಕನೆಮ್ಮ ದೇವಿ ಜಾತ್ರೆ ಹೆಸರಲ್ಲಿ ರಸ್ತೆ ಹಾಳುಮಾಡಲಾಗುತ್ತಿದೆ ಟೈಯರ ಸವೆದು ಹೋದ ವಾಹನಗಳಿಗೆ ಮಾತ್ರ ಸ್ಪರ್ದೆಯಲ್ಲಿ ಅವಕಾಶ ಇರುವ ನಿಯಮ ಹಿನ್ನೆಲೆ ನಾಗನೂರ ಹಳ್ಳದ ಸೇತುವೆ ರಸ್ತೆ ಮೇಲೆ ಟ್ರ್ಯಾಕ್ಟರನಿಂದ ಡಾಂಬರಿ ರಸ್ತೆ ಅಗೆಯುತ್ತಿರುವ ವಾಹನ ಮಾಲಿಕರು ರಸ್ತೆ ಹಾಳು ಮಾಡುತಿದ್ದರೂ ನೋಡುತ್ತ ನಿಂತ ಮುಖಂಡರು ರಸ್ತೆ ಹಾಳು ಮಾಡಿದ ಸದಸ್ಯರ ಮೇಲೆ ಕ್ರಮಕ್ಕಾಗಿ ಬುದ್ದಿಜೀವಿಗಳ ಒತ್ತಾಯಿಸಿದರು

Read More »