Breaking News

ಮಕ್ಕಳಿಲ್ಲದವರು ಈ ದೇವಸ್ಥಾನಕ್ಕೆ ಬೇಟಿ ನೀಡಿದರೆ ಸಂತಾನಭಾಗ್ಯ ಖಚಿತವಂತೆ: ಭಕ್ತರ ಇಷ್ಟಾರ್ಥ ಇಡೇರಿಸುತ್ತಿರುವ ಈ ದೇವಸ್ಥಾನ ಎಲ್ಲಿದೆ ಗೊತ್ತಾ?

ಹಾವೇರಿ: ಹಿರೇಕೆರೂರು ತಾಲೂಕು ಸಾತೇನಹಳ್ಳಿಯಲ್ಲೊಂದು ವಿಶಿಷ್ಟ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ವಿಶೇಷತೆ ಬಂದಿರುವದು ಇಲ್ಲಿ ನೀಡುತ್ತಿರುವ ಸಂತಾನ ಭಾಗ್ಯ ಪ್ರಸಾದದಿಂದ. ಹೌದು ಸಾತೇನಹಳ್ಳಿ ಗ್ರಾಮದ ಶಾಂತೇಶ (ಹನುಮಂತ ದೇವರ) ದೇವಸ್ಥಾನದ ಅರ್ಚಕರು ಮಕ್ಕಳಾಗದ ಮಹಿಳೆಯರಿಗೆ ಸಂತಾನ ಭಾಗ್ಯ ನೀಡುವ ಔಷಧವನ್ನು ದೇವಸ್ಥಾನದ ಅರ್ಚಕರು ಸುಮಾರು ಎರಡುನೂರು ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ನವರಾತ್ರಿಯ ಈ ದಿನಗಳಲ್ಲಿ ಆಯುಧಪೂಜೆಯ ದಿನದಂದು ಶ್ರವಣಾ ನಕ್ಷತ್ರದಲ್ಲಿ ಈ ಔಷಧ ಭಕ್ತರಿಗೆ ವಿತರಿಸಲಾಗುತ್ತದೆ. ಶಾಂತೇಶನ ದೇವಸ್ಥಾನದಲ್ಲಿ ಬಾಳೇಹಣ್ಣಿನಲ್ಲಿ ನೀಡುವ …

Read More »

ಜಗದೀಶ್​ ಶೆಟ್ಟರ್ ನಮ್ಮ ಪ್ರೀತಿಯ ಮನುಷ್ಯ,ನಾನು ಸತತವಾಗಿ 06 ನೇ ಸಲ ಭೇಟಿಯಾಗಿದ್ದೇನೆ.

ರಮೇಶ್​ ಜಾರಕಿಹೊಳಿ-ಜಗದೀಶ್​ ಶೆಟ್ಟರನ್ನು ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ಜಗದೀಶ್​ ಶೆಟ್ಟರ್ ನಮ್ಮ ಪ್ರೀತಿಯ ಮನುಷ್ಯ. ಅವರು ಎಲ್ಲಿದ್ದರೂ ನಮ್ಮ ಹಿರಿಯರು. ಅವರನ್ನು ನಾನು ಸತತವಾಗಿ 06 ನೇ ಸಲ ಭೇಟಿಯಾಗಿದ್ದೇನೆ. ಈ ಸಲ ಅವರ ಭೇಟಿ ವಿಚಾರ ಲೀಕ್ ಆಗಿದೆ. ನಾನು ಅವರನ್ನು ತುಂಬಾ ಸಲ ಮೀಟ್ ಆಗಿದ್ದೇನೆ. ಶೆಟ್ಟರ್​ ಅವರು ಒಳ್ಳೆಯವರು. ನಮ್ಮ ಪಕ್ಷ ಬಿಡಬಾರದಾಗಿತ್ತು. ದುರ್ದೈವ ನೋಡೊಣ. ಮುಂದಿನ ದಿನಮಾನದಲ್ಲಿ ಏನಾಗುತ್ತೆಂದು. ರಾಜಕೀಯ ಚರ್ಚೆ ಏನೂ‌ ನಡೆದಿಲ್ಲ. …

Read More »

ಸಿದ್ದರಾಮಯ್ಯನವರ ಕ್ಯಾಬಿನೆಟ್​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ.: ರಮೇಶ್ ಜಾರಕಿಹೊಳಿ ಕಳವಳ

ಚಿಕ್ಕೋಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಯಾಬಿನೆಟ್​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯನವರು ಇದ್ದಾಗಲೇ ಸತೀಶ್​ಗೆ ಈ ರೀತಿ ಪರಿಸ್ಥಿತಿ ಬಂದಿದೆ. ಬೇರೆ ಯಾರಾದ್ರೂ ಸಿಎಂ ಇದ್ರೆ ಸತೀಶ್​ ಪರಿಸ್ಥಿತಿ ಏನು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಸತೀಶ್​ ಅವರಿಗೆ …

Read More »

ಹುಲಿವೇಷ ಕುಣಿತ ಸ್ಪರ್ಧೆಗೆ ತಾರಾ ಮೆರುಗು: ಕ್ರಿಕೆಟಿಗ ಹರ್ಭಜನ್​ ಸಿಂಗ್​, ನಟ ಸುನೀಲ್​ ಶೆಟ್ಟಿ ಭಾಗಿ

ಮಂಗಳೂರು (ದಕ್ಷಿಣ ಕನ್ನಡ): ನಗರದ ಉರ್ವಾ ಮೈದಾನದಲ್ಲಿ ನಡೆದ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗಿಯಾದರು. ಮಂಗಳೂರು (ದಕ್ಷಿಣ ಕನ್ನಡ): ನಗರದ ಉರ್ವಾ ಮೈದಾನದಲ್ಲಿ ನಡೆದ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗಿಯಾದರು. ಕಾಂಗ್ರೆಸ್ ಮುಖಂಡ ಮಿಥುನ್​ ರೈ ನೇತೃತ್ವದಲ್ಲಿ ಪಿಲಿನಲಿಕೆ ಎಂಬ ಹುಲಿವೇಷ …

Read More »

ಬಿಗ್​ ಬಾಸ್​ ಮನೆಯಿಂದಲೇ ವರ್ತೂರು​ ಸಂತೋಷ್​ ಅರೆಸ್ಟ್​​.. ಕಾರಣವೇನು?

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು​ ಸಂತೋಷ್​ ಅವರನ್ನು ಬಿಗ್​ ಬಾಸ್​ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ. ಹುಲಿ ಉಗುರಿನ ಡಾಲರ್​ ಧರಿಸಿದ್ದ ಆರೋಪದ ಮೇಲೆ ಅವರನ್ನು ಅರಣ್ಯಾಧಿಕಾರಿಗಳು ತಡರಾತ್ರಿ ಅರೆಸ್ಟ್​ ಮಾಡಿದ್ದಾರೆ. ಭಾನುವಾರ ರಾತ್ರಿ ಸಂತೋಷ್​ ಅವರನ್ನು ವಶಕ್ಕೆ ಪಡೆದಿದ್ದು, ಸದ್ಯ ಅವರು ಅರಣ್ಯಾಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧನ: ಹುಲಿಯ ಉಗುರಿನ …

Read More »

ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ, ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಇಲ್ಲ: ಶೋಭಾ ಕರಂದ್ಲಾಜೆ

ಮೈಸೂರು: ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ, ಅಲ್ಲಿಯೇ ಇರುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಇಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು. ನಿನ್ನೆಯೇ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಿನ್ನೆ ಸಂಜೆ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ, ಅಲ್ಲಿ ಚಾಮುಂಡೇಶ್ವರಿಯಲ್ಲಿ ಮತ್ತೇ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬೇಡಿಕೊಂಡು, ಪೂಜೆ ಸಲ್ಲಿಸಿದರು. ಅಭಿಮನ್ಯು ಆನೆಗೆ …

Read More »

100 ಮೆಟ್ರಿಕ್ ​ಟನ್​ಗೂ ಅಧಿಕ ಅಕ್ರಮ ಮರಳು ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಬೇಕೆಂಬ ಒತ್ತಾಯ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿದೆ. ಮತ್ತೊಂದೆಡೆ, ಜಿಲ್ಲೆಯ ಕಾಳಿ ನದಿಯಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ದಂಧೆಕೋರರು ಬೇಕಾಬಿಟ್ಟಿ ದರಕ್ಕೆ ಮರಳು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಕರಾವಳಿ ಭಾಗದ ಕಾಳಿ, ಶರಾವತಿ, ಅಘನಾಶಿನಿ ಹಾಗೂ …

Read More »

ರಾಜ್ಯ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ:

ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಚನ್ನಮ್ಮನ ರಾಜ್ಯ ಮಟ್ಟದ ಕಿತ್ತೂರು ಉತ್ಸವ-2023ರ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆ ಸಂಚರಿಸಿ ಬೈಲಹೊಂಗಲದಲ್ಲಿ ಇರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಆಗಮಿಸಿ ಬಂದ ವಿಜಯಜ್ಯೋತಿಯನ್ನು ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ವಿಜಯಜ್ಯೋತಿಯನ್ನು ಸ್ವಾಗತಿಸಿ, ಸಂಸ್ಥಾನದ ಧ್ವಜಾರೋಹಣವನ್ನು ಸತೀಶ್ ಜಾರಕಿಹೊಳಿ ನೆರವೇರಿಸಿದರು. ನಂತರ ಚನ್ನಮ್ಮ ಪುತ್ಥಳಿಗೆ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ …

Read More »

ಎರಡು ಅವಧಿಗೆ ಅಧಿಕಾರದಲ್ಲಿದ್ದರೂ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದ ದೆಹಲಿ ಸಿಎಂ

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು ದೇಶಭಕ್ತಿಯ ಶ್ರೇಷ್ಠ ಕಾರ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ. ತಮ್ಮ ಚುನಾವಣಾ ಕ್ಷೇತ್ರವಾದ ನವದೆಹಲಿಯಲ್ಲಿ ಪಕ್ಷದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​, ಕೇಸರಿ ಪಕ್ಷ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. “ನಮ್ಮ ಪಕ್ಷದ ಸ್ವಯಂಸೇವಕರು ಯಾರೂ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಆದರೂ ನನ್ನ ಕ್ಷೇತ್ರದ ಜನರು ಸ್ವಯಂಸೇವಕರ …

Read More »

ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್​​ನಲ್ಲಿ ಏತಕ್ಕಾಗಿ ಇದ್ದರು:C,M

ಬೆಂಗಳೂರು : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲಿದ್ರು ಅಂತಾ ಗೊತ್ತಿದೆಯಲ್ಲ.?. ಇವರು ಇದ್ದದ್ದು ಎಲ್ಲಿ?. ಏತಕ್ಕಾಗಿ ಅಲ್ಲಿದ್ದರು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಟೌನ್ ಹಾಲ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಾಜ್​ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇದ್ರಲ್ವಾ ಯಾಕೆ ಇದ್ರು?. ಇವರು ಇದ್ದದ್ದು ಎಲ್ಲಿ?. ಏತಕ್ಕೋಸ್ಕರ …

Read More »