ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿಯ ಪೈಕಿ ನಾಲ್ಕು ಗ್ಯಾರಂಟಿಗಳು ಈಗಾಗಲೇ ಅನುಷ್ಠಾನವಾಗಿವೆ. ಆರ್ಥಿಕ ತೊಂದರೆಗಳ ಮಧ್ಯೆ ಹಣಕಾಸು ನಿರ್ವಹಿಸಿ ಇವುಗಳನ್ನು ಜಾರಿ ಮಾಡಲಾಗುತ್ತಿದೆ. ಇದರ ನಡುವೆ ಸರ್ಕಾರಕ್ಕೆ ಬರ ಬರೆ ಎಳೆದಿದೆ. ರಾಜ್ಯ ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಸುಮಾರು 30 ಸಾವಿರ ಕೋಟಿ ರೂ.ಗೂ ಅಧಿಕ ಬರ …
Read More »ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ
ಮುಂಬೈ : ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಬೌಲಿಂಗ್ ನಡೆಸಿದೆ. ವಿಶ್ವಕಪ್ ಕ್ರಿಕೆಟ್ 2023ರ 39ನೇ ಪಂದ್ಯ ಇದಾಗಿದೆ. ಸೂಪರ್ ಫೋರ್ ತಲುಪಲು ಅಫ್ಘಾನಿಸ್ತಾನಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆಸೀಸ್ ಒಂದು ವೇಳೆ ಅಫ್ಘಾನ್ ತಂಡವನ್ನು ಮಣಿಸಿದರೆ, ನೇರವಾಗಿ ಸೆಮಿಫೈನಲ್ಗೆ ತಲುಪಲಿದೆ. ಹೀಗಾಗಿ …
Read More »ವಿಶ್ವಕಪ್ ಕ್ರಿಕೆಟ್: ಕಮರಿದ ಶ್ರೀಲಂಕಾ ಸೆಮೀಸ್ ಕನಸು.. ಬಾಂಗ್ಲಾಕ್ಕೆ 3 ವಿಕೆಟ್ ಜಯ
ನವದೆಹಲಿ: ಲಂಕಾಗೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಅದೃಷ್ಟವಶಾತ್ ಸೆಮೀಸ್ಗೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಅವಕಾಶ ಇತ್ತು. ಆದರೆ, ಬಾಂಗ್ಲಾ ಟೈಗರ್ಸ್ ಸಿಂಹಳೀಯರ ಈ ಕನಸನ್ನು ಭಗ್ನ ಮಾಡಿದ್ದಾರೆ. ಶ್ರೀಲಂಕಾ ನೀಡಿದ್ದ 279 ರನ್ಗಳ ಗುರಿಯನ್ನು ಬಾಂಗ್ಲಾದೇಶ 41.1 ಓವರ್ಗೆ 3 ವಿಕೆಟ್ ಉಳಿಸಿಕೊಂಡು ಜಯ ದಾಖಲಿಸಿದೆ. ವಿಶ್ವಕಪ್ನಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಶ್ರೀಲಂಕಾವನ್ನು ಮಣಿಸಿ ಅವರನ್ನು …
Read More »ರಾಜ್ಯದ ಹಲವೆಡೆ ಹಿಂಗಾರು ಮಳೆ ಮಜ್ಜನ; ಯಲಹಂಕದ ಕೋಗಿಲು ಕ್ರಾಸ್ ಜಲಾವೃತ
ಬೆಂಗಳೂರು : ಸೋಮವಾರ ರಾತ್ರಿಯಿಂದ ನಗರದಲ್ಲಿ ಧಾರಾಕಾರವಾಗಿ ಹಿಂಗಾರು ಮಳೆ ಸುರಿಯುತ್ತಿದೆ. ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾದವು. ಹಲವು ಅಂಡರ್ಪಾಸ್ಗಳಲ್ಲಿ ಮೊಣಕಾಲುದ್ದ ನೀರು ತುಂಬಿ ವಾಹನ ಸವಾರರು ಪರದಾಡಿದರು. ಮಲ್ಲೇಶ್ವರಂ, ಶಾಂತಿನಗರ, ಮೈಸೂರು ಬ್ಯಾಂಕ್, ಟೌನ್ ಹಾಲ್, ಯಲಹಂಕ ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ನಂತರ ಕೊಂಚ ಬಿಡುವು ನೀಡಿತು. ರಾತ್ರಿಯಾಗುತ್ತಿದ್ದಂತೆ ಮತ್ತೆ ಬಿರುಸಾಯಿತು. ನಗರದ ಹಲವೆಡೆ ಬಿಟ್ಟೂಬಿಡದೆ ಮಳೆಯಾಗುತ್ತಿದೆ. ಯಲಹಂಕದಲ್ಲಿ ಮಳೆ-ಕೋಗಿಲು ಕ್ರಾಸ್ …
Read More »ಬಿಜೆಪಿಗರಿಗೆ ರಾಜ್ಯದ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ” ಎಂದ ಸಿಎಂ
ಬೆಂಗಳೂರು: ”ಹಳ್ಳಿಗಾಡಿನ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಕೇಂದ್ರದಿಂದ ಪರಿಹಾರ ಕೊಡಿಸಲಿ” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬರ ಅಧ್ಯಯನಕ್ಕೆ ತಿರುಗೇಟು ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಇನ್ಫೋಸಿಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ವಿನ್ಯಾಸಗೊಳಿಸಿರುವ ಗಾಲಿ ಮೇಲಿನ ಲ್ಯಾಬ್ ಎಂಬ ವಿಶೇಷ ಬಸ್ಗೆ ಚಾಲನೆ ನೀಡಿ ಮಾತನಾಡಿದರು. ”ಕೇಂದ್ರದ …
Read More »ರೈತರೇ ಗಮನಿಸಿ : `ಬರ ಪರಿಹಾರ’ ಪಡೆಯಲು `FID’ ಗುರುತಿನ ಸಂಖ್ಯೆ ಕಡ್ಡಾಯ
ಬೆಂಗಳೂರು : ಬೆಳೆ ವಿಮೆ ನೋಂದಣಿಗೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯವಾಗಿದೆ. ಎಫ್‍ಐಡಿ ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್‍ಐಡಿ …
Read More »ಹೆಚ್.ಡಿ.ದೇವೇಗೌಡರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ
ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮುಖ್ಯ ದತ್ತಿ ಪ್ರಶಸ್ತಿಯಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಇಂದು ಸಂಜೆ ನಡೆದ ಸರಳ ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ಅವರು ಹಾಗೂ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹೆಚ್.ಡಿ.ದೇವೇಗೌಡರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನಪ್ರಶಸ್ತಿ ಪ್ರದಾನ ಮಾಡಿ …
Read More »ಹಾಲಿ, ಮಾಜಿ ಶಾಸಕರು ಸೇರಿದಂತೆ ಬಿಜೆಪಿ, ಜೆಡಿಎಸ್ನ ಹಲವರು ಕಾಂಗ್ರೆಸ್ಗೆ ಬರ್ತಾರೆ: ಸಿಎಂ
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ನಿಂದ ಬಹಳಷ್ಟು ಜನ ಕಾಂಗ್ರೆಸ್ಗೆ ಬರುತ್ತಾರೆ. ಹಾಲಿ ಶಾಸಕರುಗಳೂ ಹಾಗೂ ಮಾಜಿಗಳು ಬರ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿಯಲ್ಲಿಂದು ಮಾತನಾಡಿದ ಅವರು, ಬರುವವರನ್ನೆಲ್ಲರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ನೋ ಆಪರೇಷನ್, ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬಿಜೆಪಿಯವರಾಗಿರಲಿ ಅಥವಾ ಜೆಡಿಎಸ್ನವರಾಗಿರಲಿ, ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುತ್ತೇವೆ ಎಂದರು. ಪ್ರಧಾನಿ ಮೋದಿಗೆ ಸಿಎಂ ತಿರುಗೇಟು: ಮಧ್ಯಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ಮಾಡಿದ ಭಾಷಣಕ್ಕೆ …
Read More »ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ
ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್. (45) ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಅವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಆರೋಪಿ ಕಿರಣ್ ಕಳೆದ ಎಂಟು ವರ್ಷಗಳಿಂದ ಗಣಿ ಇಲಾಖೆ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು …
Read More »ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆಯವರು ಕೇಳುವುದು, ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾವು 28ಕ್ಕೆ ಕ್ಲೈಂ ಮಾಡ್ತೇವೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಹೇಳಿದ್ದಾರೆ, ಬೇರೆಯವರು ಹೇಳುವ …
Read More »