ಬಳ್ಳಾರಿ : ಮದುವೆಗೆ ಹುಡುಗಿ ಮನೆಯವರು ಒಪ್ಪದ ಕಾರಣಕ್ಕೆ ಸಖತ್ ಪ್ಲ್ಯಾನ್ ಮಾಡಿ ಹೀರೋ ಹುಡುಗಿಯನ್ನು ಕರೆಸಿ ಕಾರಿನಲ್ಲೇ ಮದುವೆಯಾಗುತ್ತಾನೆ. ಇದು ಕನ್ನಡದ ಕಿರಾತಕ ಸಿನಿಮಾದ ಕಥೆ. ಇದು ನಿಮಗೆ ಗೊತ್ತಿರುವ ವಿಚಾರ. ಇದೀಗ ಅದೇ ರೀತಿಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಆದರೆ ಇದು ಕೊಂಚ ಡಿಫರೆಂಟ್ ಆಗಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಮತ್ತು ಕೊಪ್ಪಳ ಮೂಲದ ಯುವತಿ ಅಮೃತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಶಿವಪ್ರಸಾದ್ ಕೆಳಜಾತಿಗೆ …
Read More »ರೈತರೇ ಗಮನಿಸಿ : ʻಸರ್ಕಾರಿ ಯೋಜನೆಗಳʼ ಪ್ರಯೋಜನೆ ಪಡೆಯಲು ʻFIDʼ ಹೊಂದುವುದು ಕಡ್ಡಾಯ
ಧಾರವಾಡ : ರಾಜ್ಯಸರ್ಕಾರ ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು, ಬರ ಘೋಷಿತ ತಾಲ್ಲೂಕುಗಳಲ್ಲಿ ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‍ಐಡಿ ಹೊಂದಿರಬೇಕು ಹಾಗೂ ಎಫ್‍ಐಡಿಯಲ್ಲಿ ರೈತರು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‍ಐಡಿ ಯೊಂದಿಗೆ ತಾವು …
Read More »‘ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ, ರಾಮ ಭಕ್ತ ಯಾರಿದ್ದಾರೆ? ಯತ್ನಾಳರಿಗೆ ಎಚ್ಚರಿಕೆ ನೋಟೀಸ್ ನೀಡಲಾಗದಷ್ಟು ಬಿಜೆಪಿ ನಿರ್ವೀರ್ಯ’
ಬೆಂಗಳೂರು: ಸುಮಾರು ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ …
Read More »ಕುಡುಕರ ಅಡ್ಡೆಯಾದ ಹಾವೇರಿ ತಾಲೂಕು ಕಚೇರಿ
ಹಾವೇರಿ ತಾಲೂಕು ಪಂಚಾಯತಿ ಆವರಣ ಗಬ್ಬು ನಾರುತ್ತಿದೆ. ಇಲ್ಲಿಗೆ ಬರುವ ನೂರಾರು ಜನರಿಗೆ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.ಅದು ಏಲಕ್ಕಿ ಕಂಪಿನ ನಗರದ ಹೃದಯ ಭಾಗ. ನಿತ್ಯ ನೂರಾರು ಜನ ಬಂದು ಹೋಗುವ ಸ್ಥಳ. ಆದರೆ ಆ ಸ್ಥಳ ಇತ್ತೀಚೆಗೆ ಕುಡುಕರಅಡ್ಡೆಯಾಗಿದೆ. ಜೊತೆಗೆ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆ (anti social elements) ತಾಣವಾಗಿ ಮಾರ್ಪಟಿದೆ. ಇದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದು ಕಿವುಡರಾಗಿ, ಬಾಯಿ ಇದ್ದು …
Read More »ಅಂಜನಾದ್ರಿಗೆ ಆಗಮಿಸಿದ್ದ ಯುಪಿ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ,
ಕೊಪ್ಪಳ, ಜ.2: ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದು ವಾಪಸ್ ಆಗುತ್ತಿದ್ದ ಉತ್ತರ ಪ್ರದೇಶದ ಭಕ್ತರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆಕೊಪ್ಪಳ (Koppal)ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ನಡೆದಿದೆ. ಗಲಾಟೆ ವೇಳೆ ಬಸ್ಗಳಿಗೆ ಕಲ್ಲು ತೂರಲಾಗಿದ್ದು, ಇಬ್ಬರು ಭಕ್ತರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶದದಿಂದ ನಾಲ್ಕು ಬಸ್ಗಳಲ್ಲಿ ಹನುಮಂತನ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ವಾಪಸ್ ಆಗುತ್ತಿದ್ದಾಗ ಬಸ್ಗಳನ್ನು ತಡೆದ ಸ್ಥಳೀಯರು ಜಗಳ ಎತ್ತಿದ್ದಾರೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ …
Read More »5,8,9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ: ಶಿಕ್ಷಣ ಇಲಾಖೆ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ
ಬೆಂಗಳೂರು, ಜ.03: ಕಳೆದೊಂದು ವರ್ಷದಿಂದ ಶಿಕ್ಷಣ ಇಲಾಖೆ (Karnataka Education Department) ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಐದು ಎಂಟು ಹಾಗು 9ನೇ ತರಗತಿಗೆ ಪಬ್ಲಿಕ್ ಮಾದರಿಯಮೌಲ್ಯಾಂಕನ ಎಕ್ಸಾಂನಡೆಸಲು ಮುಂದಾಗಿದೆ. ಆದರೆ ಈ ಪರೀಕ್ಷೆ ಈಗ ಪ್ರತಿಷ್ಠೆಯ ಕಣವಾಗಿದ್ದು ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಠಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನೂ ಶಿಕ್ಷಣ ಇಲಾಖೆಯ ಮೌಲ್ಯಾಂಕನ ಪರೀಕ್ಷೆಗಳ ಹಠದಲ್ಲಿ ಖಾಸಗಿ ಶಾಲೆಗಳು ಹೊಸ …
Read More »10 ವರ್ಷಗಳಲ್ಲೇ 2023ರಲ್ಲಿ ಅತಿಹೆಚ್ಚು ಮಾರಣಾಂತಿಕ ಅಪಘಾತ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ವರ್ಷ ಅಂದರೆ 2023ರಲ್ಲಿ 870 ಮಾರಣಾಂತಿಕಅಪಘಾತಗಳು (Accident) ಸಂಭವಿಸಿವೆ. ಇದು ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಗರಿಷ್ಠ ಅಪಘಾತಗಳ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಂಗಳವಾರ ಹಂಚಿಕೊಂಡ ಅಂಕಿಅಂಶ ತಿಳಿಸಿದೆ. 2013 ರಲ್ಲಿ 733 ಅಪಘಾತಗಳು ಸಂಭವಿಸಿದ್ದವು. 2023ರಲ್ಲಿ 4,959 ಅಪಘಾತಗಳು ಸಂಭವಿಸಿದ್ದು, 899 ಜನರು ಮೃತಪಟ್ಟಿದ್ದಾರೆ. 4,959 ಅಪಘಾತಗಳಲ್ಲಿ, 4,089 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 4,176 ಜನರು …
Read More »ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ, ವರ ಹಿಂಡಲಗಾ ಜೈಲಿಗೆ!
ಬೆಳಗಾವಿ, ಜನವರಿ 2: ಕೊನೇ ಕ್ಷಣದಲ್ಲಿ ಮದುವೆಯೊಂದು (Marriage) ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ ವಿಚಿತ್ರ ವಿದ್ಯಮಾನವೊಂದು ಬೆಳಗಾವಿಯ (Belagavi) ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಅಷ್ಟಕ್ಕೂ ಮದುವೆ ಮುರಿದು ಬೀಳಲು, ವರ ಜೈಲುಪಾಲಾಗಲು ಕಾರಣವಾಗಿದ್ದು ಮತ್ತೇನೂ ಅಲ್ಲ; ವರದಕ್ಷಿಣೆ ಬೇಡಿಕೆ. ಪಟ್ಟು ಹಿಡಿದು ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕೆ ಮದುವೆ ಮುರಿದುಬಿದ್ದ ವಿದ್ಯಮಾನ ಮೂರು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಡೆದಿದ್ದೇನು? ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಆಯೋಜನೆಯಾಗಿತ್ತು. ಈ ಮದುವೆಯ …
Read More »ಬೆಳಗಾವಿ ಗೂಂಡಾಗಳ ಗುಂಪಿನ ಅಟ್ಟಹಾಸ: ನಾವಗೆ ಗ್ರಾಮ ಸದ್ಯಕ್ಕೆ ಶಾಂತ
ಬೆಳಗಾವಿ: ಕಳೆದ ರಾತ್ರಿ ಶಸ್ತ್ರಧಾರಿ ಗೂಂಡಾಗಳ (armed goondas) ಗುಂಪೊಂದು ಬೆಳಗಾವಿ ತಾಲ್ಲೂಕಿನನಾವಗೆ ಗ್ರಾಮಕ್ಕೆ(Navage village) ನುಗ್ಗಿ ನಾಲ್ಕೈದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗಳ ಮುಂದಿದ್ದ ವಾಹನಗಳನ್ನು ಜಖಂಗೊಳಿರುವ ಘಟನೆ ಗ್ರಾಮಸ್ಥರನ್ನು (residents) ಹೆದರಿಕೆ ಮತ್ತು ಆತಂಕದಿಂದ ತಲ್ಲಣಿಸುವಂತೆ ಮಾಡಿದೆ. ಗ್ರಾಮದ ಈ ಮಹಿಳೆ ಹೇಳುವ ಹಾಗೆ ಸುಮಾರ 25-30 ಸದಸ್ಯರಿದ್ದ ಮುಸಕುಧಾರಿ ಪುಂಡರ ಗುಂಪು ಕೈಗಳಲ್ಲಿ ತಲ್ವಾರ್, ರಾಡ್ ಮತ್ತು ಪಿಸ್ತೂಲುಗಳನ್ನು ಹಿಡಿದು ಪಂಚಾಯಿತಿ ಸದಸ್ಯರು ಮತ್ತು …
Read More »ಬೆಳಗಾವಿಯಲ್ಲಿ ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ
ಬೆಳಗಾವಿ, ಜ.02: ಬೆಳಗಾವಿಯ ಮಜಗಾವಿ ಬಳಿ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರು ಡಿಕ್ಕಿಯ(Accident) ರಭಸಕ್ಕೆ ಯುವತಿ ಬರೊಬ್ಬರಿಐವತ್ತು ಮೀಟರ್ಹಾರಿ ಬಿದ್ದಿದ್ದಾರೆ. ಬ್ರಹ್ಮನಗರದ ನಿವಾಸಿ ದಿವ್ಯಾ ಪಾಟೀಲ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟೆ ಅಲ್ಲ, ಸ್ಕೂಟಿಗೆ ಗುದ್ದಿದ ಬಳಿಕ ಎದರಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಘಟನೆ ಬೆಳಗಾವಿ ದಕ್ಷಿಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Read More »
Laxmi News 24×7