ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದಲಿತ ಮುಖ್ಯಮಂತ್ರಿಗಾಗಿ (Dalit CM) ಬೇಡಿಕೆ ಇಂದು ನಿನ್ನೆಯದಲ್ಲ, ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಈ ವಿಷಯದಲ್ಲಿ ತಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ, ಸೆಂಚುರಿ (century) ಬಾರಿಸಲ್ಲ ಎಂದು ನಗುತ್ತಾ ಹೇಳಿದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯವನ್ನು ಮುನ್ನೆಲೆಗೆ ತರಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ …
Read More »ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು
ಘಟನೆ ನೋಡಿದ ಇನ್ನಿತರೆ ವಾಹನ ಸವಾರರು ಅಪಘಾತ ಮಾಡಿ, ಮರಿ ಕೋತಿಯ ಸಾವಿಗೆ ಮತ್ತು ತಾಯಿ ಕೋತಿ ಗಾಯಗೊಳ್ಳುವಂತೆ ಮಾಡಿದ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತವಾದ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ …
Read More »ರಾಹುಲ್ ಗಾಂಧಿ ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ ನೀಡುತ್ತಾರೆ: ಗೋವಾ ಸಿಎಂ
ಚಿತ್ರದುರ್ಗ, ಮಾರ್ಚ್ 7: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ (Rahul Gandhi) ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ ನೀಡುತ್ತಾರೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ವಾಗ್ದಾಳಿ ಮಾಡಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು …
Read More »ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್
ಧಾರವಾಡ, ಮಾ.07: ಜಿಲ್ಲೆಯ ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಭೂ ನ್ಯಾಯ ಮಂಡಳಿ ಆದೇಶದಂತೆ ಖಾತೆ ಬದಲಿಸಿಕೊಡಲು ರೈತ ಮಲ್ಲಿಕಾರ್ಜುನ ಕುರುಬರ ಎಂಬಾತನ ಬಳಿ 45 ಸಾವಿರ ರೂ. ಲಂಚ ಪಡೆಯುವಾಗ ಕಲಘಟಗಿ ತಹಶೀಲ್ದಾರ್ ಕಚೇರಿ ಶಿರಸ್ತೆದಾರ ಸುರೇಶ್ ಅಡವಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Read More »ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಬಸವಕಲ್ಯಾಣದಲ್ಲಿ ಸನ್ಮಾನ
ಬೀದರ್: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಟ್ಟಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಬಸವಕಲ್ಯಾಣ ಅನುಭವ ಮಂಟಪ ವಿಶ್ವಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು.
Read More »ಭದ್ರಾಮೇಲ್ದಂಡೆ ಯೋಜನೆ | ಬೇಡಿಕೆ ಈಡೇರಿಸದಿದ್ದರೆ ಬಿಜೆಪಿ ವಿರುದ್ಧ ಮತ
ಚಿತ್ರದುರ್ಗ. ಮಾ.07 : ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕಳೆದ 33 ದಿನಗಳಿಂದ ಜಿಲ್ಲಾ ಪಂಚಾಯಿತಿ ಎದುರು ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು. ಧರಣಿ ಸ್ಥಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1974 ರಲ್ಲಿದ್ದಂತ ಬರಗಾಲ ಈಗ ಮತ್ತೆ ಎದುರಾಗಿದೆ. ಭದ್ರಾಮೇಲ್ದಂಡೆ ವಿಚಾರವಾಗಿ …
Read More »ಪತ್ನಿ, ಮಕ್ಕಳು ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ
ಕನಕಪುರ: ಆಸ್ತಿಗಾಗಿ ನಿಂಗಪ್ಪ ಎಂಬುವರನ್ನು ಅಪಹರಿಸಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದ ಆತನ ಪತ್ನಿ, ಮೂವರು ಮಕ್ಕಳು, ನಾಲ್ವರು ಸುಪಾರಿ ಹಂತಕರು ಸೇರಿದಂತೆ 8 ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. ಅಪರಾಧಿಗಳಾದ ಆತನ ಪತ್ನಿ ರತ್ನಮ್ಮ, ಪುತ್ರ ಅಬಿಷೇಕ್ ಅಲಿಯಾಸ್ ಅಭಿ, ಪುತ್ರಿಯರಾದ ಶಿಲ್ಪಾ, ಪುಷ್ಪಾ ಹಾಗೂ ಸುಪಾರಿ ಹಂತಕರಾದ ರೌಡಿ ಶೀಟರ್ ಕೇಶವಮೂರ್ತಿ ಅಲಿಯಾಸ್ …
Read More »ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ;
ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ತಾಯಿಯೇ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಚಿಕ್ಕಮಗಳೂರು ವಿಶೇಷ ಕೋರ್ಟ್ ಬಾಲಕಿಯ ತಾಯಿ ಸೇರಿ ನಾಲ್ವರು ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ. ಚಿಕ್ಕಮಗಳೂರಿನ ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.ನಾಲ್ವರನ್ನು ದೋಷಿಗಳು ಎಂದು ಕೋರ್ಟ್ ತಿಳಿಸಿದೆ. ಈ ಮೂಲಕ ಸಲ್ಮಾನ್ ಅಭಿ, ಸಂತ್ರಸ್ತೆ ತಾಯಿ ಗೀತಾ, ಗಿರೀಶ್, ದೇವಿ …
Read More »ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ
ಕೊಪ್ಪಳ,: ಅಂತರ್ಜಾತಿ ವಿವಾಹವಾಗಿದ್ದಕ್ಕೆ (Inter Caste Marriage) ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಕೊಪ್ಪಳದ (Koppal) ಭಾಗ್ಯ ನಗರದಲ್ಲಿ (Bhagya Nagar) ನಡೆದಿರುವುದು ಗೊತ್ತಾಗಿದೆ. ಶಂಕ್ರಪ್ಪ ಬೇನಳ್ಳಿ ಎಂಬವರ ಕುಟುಂಬವನ್ನು ಕಳೆದ ಒಂದೂವರೆ ವರ್ಷದಿಂದ ಸಮಾಜದಿಂದ ಹೊರಗೆ ಇಡಲಾಗಿತ್ತು ಎಂಬ ಆರೋಪ ಈಗ ಕೇಳಿಬಂದಿದೆ. ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಶೆಂಕ್ರಪ್ಪ ಅವರ ಪುತ್ರ ಲಿಂಗಾಯತ ಸಮಾಜದ ಯುವತಿಯನ್ನು ಮದುವೆಯಾಗಿದ್ದರು. …
Read More »ಕರ್ನಾಟಕದಲ್ಲಿ ಹೆದ್ದಾರಿ ಯೋಜನೆಗೆ ಕೇಂದ್ರದಿಂದ 2,675 ಕೋಟಿ ರೂ. ಮಂಜೂರು
ನವದೆಹಲಿ ಮಾರ್ಚ್ 07: ಪಣಜಿ-ಹೈದರಾಬಾದ್ (Panaji-Hydarabad) EC10 ಕಾರಿಡಾರ್ ಅಡಿಯಲ್ಲಿ ಬಾಗಲಕೋಟೆ (Bagalkote) ಮತ್ತು ಬೆಳಗಾವಿ (Belagavi) ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ 92.40 ಕಿಮೀ ಉದ್ದದ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ 2,675 ಕೋಟಿ ರೂ. ಮಂಜೂರು ಮಾಡಿದೆ. ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಯಲ್ಲಿ ಹೆದ್ದಾರಿ ಉನ್ನತೀಕರಿಸಲಾಗುತ್ತದೆ. ಈ ಯೋಜನೆಯು ಪಣಜಿ-ಹೈದರಾಬಾದ್ ಆರ್ಥಿಕ ಕಾರಿಡಾರ್ನ ಅವಿಭಾಜ್ಯ ಅಂಗವಾಗಿದೆ. EC10 ಯೋಜನೆಯು ಪಣಜಿ ಸೇರಿದಂತೆ ಪ್ರಮುಖ …
Read More »
Laxmi News 24×7