Breaking News

ಸಂವಿಧಾನ ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿ ರಕ್ತಪಾತ: ಸಿಎಂ

ಬೆಂಗಳೂರು, ಮಾರ್ಚ್​ 11: ಬಿಜೆಪಿಯವರು ಒಂದು ವೇಳೆ ಸಂವಿಧಾನ ಬದಲಾವಣೆ ಮಾಡುವ ಕೆಲಸಕ್ಕೆ ಹೊರಟರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಗಡೆ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಚಿವರಾಗಿದ್ದಾಗಲೂ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾಗಲೇ …

Read More »

ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು?

ನವದೆಹಲಿ, ಮಾರ್ಚ್ 11: ಜನವರಿಯಲ್ಲಿ ಶೇ. 5.1ರಷ್ಟಿರುವ ಹಣದುಬ್ಬರ ಫೆಬ್ರುವರಿಯಲ್ಲೂ ಮುಂದುವರಿದಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು (economists poll) ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ 15 ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ (India inflation) ಶೇ. 5.1ರಷ್ಟಿರಬಹುದು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಆರ್​ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ( ಶೇ. 6ರ ಒಳಗೆ ಹಣದುಬ್ಬರ ಇರಲಿದೆ. ಮಾರ್ಚ್ 12, ಮಂಗಳವಾರ …

Read More »

ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್

ರಾಮನಗರ, ಮಾರ್ಚ್​.11: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್​ನನ್ನು …

Read More »

ಇಂದಿನಿಂದ ಆನೆಗೊಂದಿಯಲ್ಲಿ ಎರಡು ದಿನಗಳ ಉತ್ಸವ

ಕೊಪ್ಪಳ, ಮಾರ್ಚ್​.11; ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆನೆಗೊಂದಿ ಉತ್ಸವವನ್ನು (Anegondi Utsav) ಹಮ್ಮಿಕೊಳ್ಳಲಾಗಿದೆ. ಈ ಭಾಗದ ಇತಿಹಾಸ, ಕಲೆ, ಸಂಸ್ಕ್ರತಿಯನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕೊಪ್ಪಳ ಜಿಲ್ಲಾಡಳಿತದಿಂದ ಎರಡು ದಿನಗಳ ಉತ್ಸವನನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಇಂದು ಮುಂಜಾನೆ ಆನೆಗೊಂದಿಯ ಆಧಿಶಕ್ತಿ ದೇವಸ್ಥಾನದಲ್ಲಿ ಸಾಂಸ್ಕ್ರತಿಕ ಕಲಾತಂಡಗಳ ಮೆರವಣಿಗೆಗೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ …

Read More »

ಮಹಾಶಿವರಾತ್ರಿಗೆ ನಾನ್​ ವೆಜ್​ ಪೂಜೆ

ಹೆಚ್ಚಾಗಿ ತಮಿಳುನಾಡಿನಲ್ಲೇ ಪ್ರಚಲಿತವಿರುವ ಇಂಥಾದೊಂದು ಆಚರಣೆ ನಮ್ಮ ರಾಜ್ಯದ ಗಡಿಯಭಾಗವಾದ ಕೆಜಿಎಫ್​ನಲ್ಲೂ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ವಿಶೇಷವಾದ ದಿನದಂದು ಈ ನರಕಾಸುರ ಸಂಹಾರವನ್ನು ನೋಡಲು ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರ್ತಾರೆ. ತಮಿಳುನಾಡು, ಆಂಧ್ರ, ಬೆಂಗಳೂರುನಿಂದಲೂ ಜನ ಬರುತ್ತಾರೆ. ಶಿವರಾತ್ರಿ ಅಂದ್ರೆ ಬಹುತೇಕರು ಕಟ್ಟುನಿಟ್ಟಾಗಿ ಉಪವಾಸವಿದ್ದು ಶಿವರಾತ್ರಿಯನ್ನು ಆಚರಣೆ ಮಾಡ್ತಾರೆ, ಅದೇ ರೀತಿ ಇಲ್ಲೊಂದಷ್ಟು ಜನ ಶಿವರಾತ್ರಿಯನ್ನು ಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ದಿನ ಸ್ಮಶಾನವಾಸಿಯಾದ ಶಿವನನ್ನು ವಿಭಿನ್ನವಾಗಿ …

Read More »

ಕೃಷಿ ಹೊಂಡದಲ್ಲಿ ಈಜಲು ಹೋಗಿತಂದೆ ಮಕ್ಕಳು ಸಾವು…!

ಚಿಕ್ಕೋಡಿ : ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಸಾವಣಪ್ಪಿರುವ ಘಟನೆ ಭಾನುವಾರ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ  ಕಲ್ಲಪ್ಪ ಗಾಣಿಗೇರ (36) ಮಕ್ಕಳಾದ  ಮನೋಜ ಕಲ್ಲಪ್ಪ ಗಾಣಿಗೇರ (11) ಹಾಗೂ ಮದನ ಕಲ್ಲಪ್ಪ ಗಾಣಿಗೇರ (9) ಮೃತ ದುರ್ದೈವಿಗಳು. ವೃತ್ತಿಯಲ್ಲಿ‌ ಸರ್ಕಾರಿ ಶಿಕ್ಷಕರಾಗಿದ್ದ ಕಲ್ಲಪ್ಪ ಗಾಣಿಗೇರ ನಿಡಗುಂದಿ ಗ್ರಾಮದ ಹುಕ್ಕೇರಿ ತೋಟದ ಮಗದುಮ ಸರ್ಕಾರಿ …

Read More »

ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ?

ಬೆಂಗಳೂರು, ಮಾರ್ಚ್.11: ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯನ್ (Gobi Manchurian) ಮಾದರಿ ಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ನಿರ್ಬಂಧ ಹೇರಲು ಮುಂದಾಗಿದೆ. ಈ ಬಗ್ಗೆ ಇಂದು (ಮಾ.11) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಹತ್ವದ ಸುದ್ದಿಗೋಷ್ಠಿಗೂ ಮುಂದಾಗಿದ್ದಾರೆ.ಕರ್ನಾಟಕ …

Read More »

ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಸ್ಪರ್ಧಿಸಲ್ಲ: ಪ್ರಕಾಶ್ ಹುಕ್ಕೇರಿ

ಚಿಕ್ಕೋಡಿ, ಮಾರ್ಚ್​ 11: ಲೋಕಸಭೆ ಚುನಾವಣೆ (Lok Sabha Election) ಕಲವೇ ತಿಂಗಳು ಬಾಕಿ ಉಳಿದಿವೆ. ಕಾಂಗ್ರೆಸ್​ (Congress) ಮತ್ತು ಬಿಜೆಪಿ (BJP) ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್​​ ವಿಚಾರವಾಗಿ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿದೆ. ರಾಜ್ಯ ರಾಜಕೀಯ ಪವರ್​ ಸೆಂಟರ್​ ಆಗಿರುವ ಬೆಳಗಾವಿ ಮತ್ತು ಚಿಕ್ಕೋಡಿ (Chikkodi) ಎರಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಯಾರಿಗೆ ಸಿಗಲಿದೆ ಎಂಬುವುದು ಗೊಂದಲ ಗೂಡಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ …

Read More »

ಮಗಳ ಪ್ರೇಮ್ ಕಹಾನಿಗೆ ರೈಲಿಗೆ ತಲೆ ಕೊಟ್ಟು ತಂದೆ

ಅದು ರಾಯಚೂರು ನಗರದಲ್ಲಿ ವಾಸವಿದ್ದ ಬಡ ಕುಟುಂಬ..ಅಲ್ಲಿ ಮನೆ ಯಜಮಾನ 44 ವರ್ಷದ ಸಮೀರ್ ಅಹ್ಮದ್, ಪತ್ನಿ ಜುಲ್ಲಾಕಾ ಬೇಗಂ.. ಈ ದಂಪತಿಗೆ ಮೆಹಾಮುನ್ ಅನ್ನೋ ಮುದ್ದು ಮಗಳಿದ್ಲು.. ಸಮೀರ್ ಆಟೋ ಓಡಿಸುತ್ತಿದ್ರೆ, ಪತಿಗೆ ಆರ್ಥಿಕ ಸಹಾಯ ತುಂಬಲು ಪತ್ನಿ ಜುಲ್ಲಾಕಾ ಬೇಗಂ ಮೊಹಮ್ಮದ್ ಹುಸೇನ್ ಅನ್ನೋ ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ರು.. ಕಷ್ಟ ಪಟ್ಟು ಹಗಲಿರುಳು ದುಡಿದು ಮಗಳು ಮೆಹಾಮುನ್ ಳನ್ನ ಇಂಜಿನಿಯರಿಂಗ್ ಓದಿಸಿದ್ರು.. ಅವ್ರು ತಾನಾಯ್ತು ತಮ್ಮ …

Read More »

ವಿರೂಪಾಕ್ಷ’ ಹೆಸರಿನ ಶಾಸನ ಪತ್ತೆ

ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತ ಈಗಾಗಲೇ ಹಲವು ಶಾಸನಗಳು ದೊರೆತು ಪ್ರಕಟವಾಗಿದ್ದರೆ, ಇನ್ನಷ್ಟು ಶಾಸನಗಳು ಬೆಳಕಿಗೆ ಬರುತ್ತಲೇ ಇವೆ. ವಿಜಯನಗರ ತಿರುಗಾಟ ತಂಡವು ಇದೀಗ ಪತ್ತೆಹಚ್ಚಿದ ಶಾಸನ ‘ವಿರೂಪಾಕ್ಷದೇವಪುರ’ ಎಂಬ ಹೆಸರು ಊರೊಂದಕ್ಕೆ ಇದ್ದುದನ್ನು ಕಂಡುಕೊಂಡಿದೆ. ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮರಗುಡ್ಡದ ಬಳಿಯ ಉತ್ತರ ದಿಕ್ಕಿನ ಜಮೀನೊಂದರಲ್ಲಿರುವ ಕರಿಯಮ್ಮ ದೇವಾಲಯದ ಕಂಬದಲ್ಲಿನ ಶಾಸನ ಈವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ‘ಶ್ರೀ ವಿರೂಪಾಕ್ಷ ದೇವರಪುರ’ …

Read More »