Breaking News

ಜಿಲ್ಲೆ ವಿಭಜನೆ: ಸರ್ಕಾರ ಮಾಹಿತಿ ಕೇಳಿಲ್ಲ; -ನಿತೇಶ್‌ ಪಾಟೀಲ

ಬೆಳಗಾವಿ: ‘ಈ ಬಾರಿ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆ ಘೋಷಣೆ ಆಗಲಿದೆ’ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಆದರೆ, ಯಾವುದೇ ಅಧಿಕೃತ ಮೂಲ ಇದನ್ನು ಖಚಿತಪಡಿಸಿಲ್ಲ. ‘ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿ ಮನವಿ ಮಾಡಿದೆ. ಅದೇ ರೀತಿ ಅಥಣಿ ಕೇಂದ್ರವಾಗಿ ಹೊಸ ಜಿಲ್ಲೆ ಮಾಡಬೇಕೆಂದು ಇನ್ನೊಂದು ಹೋರಾಟ ಸಮಿತಿ ಆಗ್ರಹಿಸಿದೆ. ಸಂಕೇಶ್ವರವನ್ನು ತಾಲ್ಲೂಕು ಕೇಂದ್ರ ಮಾಡುವಂತೆ ಮನವಿ ಬಂದಿವೆ. …

Read More »

ಟೆಂಪೊ- ಟ್ರ್ಯಾಕ್ಟರ್‌ ಡಿಕ್ಕಿ: 13 ಪೊಲೀಸರಿಗೆ ಗಾಯ

ಗೋಕಾಕ: ತಾಲ್ಲೂಕಿನ ಹಿರೇನಂದಿ ಕ್ರಾಸ್ ಬಳಿ ರಸ್ತೆ ಮೇಲೆ ನಿಂತಿದ್ದ ಕಬ್ಬು ಹೇರಿದ ಟ್ರ್ಯಾಕ್ಟರ್‌ಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ 13 ಪೊಲೀಸ್‌ ಸಿಬ್ಬಂದಿ ಹಾಗೂ ಚಾಲಕ ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡ ದಾವಣೆಗೆರೆ ಜಿಲ್ಲೆಯ ಹೊನ್ನಾಳಿಯ ಕಡಬಕಟ್ಟಿ ಗ್ರಾಮದ ಅಣ್ಣಪ್ಪ, ಕೊಪ್ಪಳ ಜಿಲ್ಲೆ ಕನಕಗಿರಿಯ ಸೋಮನಾಥ ನಿಂಗಪ್ಪ ಕುಂಬಾರ, ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಗಿ ಗ್ರಾಮದ ರಘು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. …

Read More »

ಬೆಳಗಾವಿ ಎಪಿಎಂಸಿ ಆದಾಯ ಕುಸಿತ!

ಬೆಳಗಾವಿ: ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ನೆರವು) ಕಾಯ್ದೆ-2020 ಜಾರಿ, ಇಳಿಕೆಯಾದ ಆವಕದ ಪ್ರಮಾಣ ಮತ್ತಿತರ ಕಾರಣದಿಂದ ಇಲ್ಲಿನ ಎಪಿಎಂಸಿ ಆದಾಯ ಕುಸಿಯುತ್ತಿದೆ. 2021-22ರಲ್ಲಿ ‘ಸೆಸ್‌’ ರೂಪದಲ್ಲಿ ₹4.07 ಕೋಟಿ ಆದಾಯ ಎಪಿಎಂಸಿಗೆ ಬಂದಿತ್ತು. 2022-23ರಲ್ಲಿ ಅದು ₹3.70 ಕೋಟಿಗೆ ಇಳಿಕೆಯಾಗಿತ್ತು. ಪ್ರಸಕ್ತ ವರ್ಷ(2023ರ ಏಪ್ರಿಲ್‌ 1ರಿಂದ 2024ರ ಫೆ.13ರವರೆಗೆ) ₹3.02 ಕೋಟಿಗೆ ಆದಾಯ ಸಂಗ್ರಹವಾಗಿದೆ. ಈಗ ಬರುತ್ತಿರುವ ಆದಾಯದಲ್ಲಿ …

Read More »

ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಮಂತ್ರಿಯೊಬ್ಬ 10 ಕೋಟಿ ರೂ. ಆಮಿಶವೊಡ್ಡಿದ್ದ: ಬಸನಗೌಡ ಪಾಟೀಲ್ ಯತ್ನಾಳ್

ಶಿವಮೊಗ್ಗ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ (Panchamasali 2A reservation protest) ಪುನಃ ಶುರುವಾಗಿದೆ. ಸಮುದಾಯದವರು ಶಿವಮೊಗ್ಗದಲ್ಲಿ ಕೂಡಲಸಂಗಮ ಮಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ (Basava Jaya Mruthyunjaya Swamy) ನೇತೃತ್ವದಲ್ಲಿ ನಗರದ ಶಿವಪ್ದ ನಾಯಕ್ ವೃತ್ತದಿಂದ ಗೋಪಿವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚೌಕಿಮಠದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯವರು ಲಿಂಗ ಪೂಜೆ ನೆರವೇರಿಸಿದ ಬಳಿಕ ಪ್ರತಿಭಟನೆ ಯಲ್ಲಿ ಭಾಗಿಯಾಗಿರುವ ಶಾಸಕ ಬಸನನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡಿ, ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು …

Read More »

ವಿಕಲಾಂಗ ಮಗನನ್ನು ನಿಂದಿಸಿದಕ್ಕೆ ಅಣ್ಣನ ಮಗನ ಕೊಲೆ

ಹಾವೇರಿ, : ಜಿಲ್ಲೆಯ ಹಾನಗಲ್(Hangal) ತಾಲೂಕಿನ ಮಲಗುಂದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದರು. ರಾತ್ರಿಯಿಡೀ ಗ್ರಾಮದಲ್ಲಿ ಸಂಭ್ರಮದಿಂದ ದುರ್ಗಮ್ಮ ದೇವಿ ಜಾತ್ರೆ ಮಾಡಿ ಮಲಗಿದ್ದ ಜನರಿಗೆ ಬೆಳಗ್ಗೆ ಗ್ರಾಮದಲ್ಲಿ ವ್ಯಕ್ತಿಯ ಕೊಲೆಯಾಗಿದೆ ಎನ್ನುವ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದರು. ಹೀಗೆರಕ್ತದ ಮಡುವಿನಲ್ಲಿಹೆಣವಾಗಿ ಮಲಗಿರುವ ವ್ಯಕ್ತಿಯ ಹೆಸರು ಯಲ್ಲಪ್ಪ ದೊಡ್ಡಕೋವಿ. ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರೂ ಕೂಡ ಏಕಾಂಗಿಯಾಗಿ ಗ್ರಾಮದಲ್ಲಿ ವಾಸವಾಗಿದ್ದ. ಇತನಿಗೆ ಅಣ್ಣಾ ಹಜಾರೆ ಎಂದು ಗ್ರಾಮದ ಜನರು ಕರೆಯುತ್ತಿದ್ದರು. ಆದರೆ, …

Read More »

ರಾಯಚೂರು: ವ್ಯಕ್ತಿ ನಾಪತ್ತೆ, 45 ದಿನದ ಬಳಿಕ ಬೆಟ್ಟದಲ್ಲಿ ಬಿದ್ದಿತ್ತು ಆತನ ಮುಂಡ,

ಮಂಗಳವಾರ : ಆತನ ಅಸ್ಥಿಪಂಜರ (Skeleton) ಪತ್ತೆಯಾಗಿದೆ. ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. 45 ದಿನಗಳ ಹಿಂದೆ ಹೊಲಕ್ಕೆ ಹೋದ ರಸೂಲ್ ಸಾಬ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದನು. ರಸೂಲ್​ಗಾಗಿ ಕುಟುಂಬಸ್ಥರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ದೇವಸ್ಥಾನ, ದರ್ಗಾಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹುಡುಕಾಡಿದರೂ ರಸೂಲ್ ಸಿಗಲ್ಲಿ. ಕೊನೆಗೆ ಕುಟುಂಬಸ್ಥರು ಕೈಚೆಲ್ಲಿ, ಪೊಲೀಸರಿಗೆ (Police) ದೂರು ನೀಡದೆ ಸುಮ್ಮನಾದರು.   ಇದೆ ಫೆಬ್ರವರಿ 11 ರಂದು ಕೊರ್ತಕುಂದ ಹೊರಭಾಗದ …

Read More »

ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು, ಫೆಬ್ರವರಿ 14: ನಗರದ ಸ್ಯಾಂಕಿ ಕೆರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆ(dead body)ಆಗಿರುವಂತಹ ಘಟನೆ ನಡೆದಿದೆ. ಸ್ಯಾಂಕಿ ಕೆರೆಯಲ್ಲಿ ತೆಲುತ್ತಿದ್ದ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಕಂಡು ಕೂಡಲೇ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿಯ ರಾಜೋತ್ಸವ ನಗರದಲ್ಲಿ …

Read More »

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 1 ಕೋಟಿ ರೂ ಅಪಘಾತ ವಿಮಾ ಪರಿಹಾರ

ಬೆಂಗಳೂರು, ಫೆಬ್ರವರಿ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)ವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ 1 ಕೋಟಿ ರೂ. ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ …

Read More »

ಕರ್ನಾಟಕ ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಎಲ್ಲಿ ಲೈವ್ ವೀಕ್ಷಿಸಬಹುದು? ಇಲ್ಲಿದೆ ವಿವರ

ಬೆಂಗಳೂರು, : ಈಗಾಗಲೇ ಕರ್ನಾಟಕದ 2024-25ನೇ ಸಾಲಿನ ಬಜೆಟ್​ (Karnataka Budget) ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರು ಫೆಬ್ರವರಿ 16ರಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಮಹತ್ವದ ಘೋಷಣೆಗಳು ಮಾಡುವ ನಿರೀಕ್ಷೆಗಳಿವೆ. ಬಜೆಟ್​ ಯಾವಾಗ? ಯಾವ ಸಮಯಕ್ಕೆ? ಫೆ.16ರ …

Read More »

ಸಂದೇಶಖಾಲಿ ಪ್ರತಿಭಟನೆ: ಲಾಠಿ ಚಾರ್ಜ್ ವೇಳೆ ಬಂಗಾಳ ಬಿಜೆಪಿ ಮುಖ್ಯಸ್ಥರಿಗೆ ಗಾಯ

ಕೊಲ್ಕತ್ತಾ  ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸಂಘರ್ಷವೇರ್ಪಟ್ಟಾಗ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡಪಶ್ಚಿಮ ಬಂಗಾಳದ (West Bengal) ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ (Sukanta Majumdar) ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಬಸಿರ್‌ಹತ್ ಮಲ್ಟಿ ಫೆಸಿಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕೊಲ್ಕತ್ತಾದಲ್ಲಿರುವ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ (Sandeshkhali) ಬಿಜೆಪಿ ಪ್ರತಿಭಟನೆ ವೇಳೆ ಲಾಠಿಚಾರ್ಜ್ ನಡೆದಿದೆ.ಸಂದೇಶಖಾಲಿಯಲ್ಲಿ ಮಹಿಳೆಯರು ಟಿಎಂಸಿ …

Read More »