Breaking News

ಸರ್ಕಾರಿ ದಾಖಲೆಗಳನ್ನು ತಿದ್ದಿ ಅಕ್ರಮ: ಪೌರಾಯುಕ್ತ, ಕಂದಾಯ ಸಿಬ್ಬಂದಿ ವಿರುದ್ಧ ಎಫ್​ಐಆರ್

ಮೈಸೂರು, ಫೆ.19: ಸರ್ಕಾರಿ ದಾಖಲೆಗಳನ್ನು ತಿದ್ದಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಹಿನ್ನೆಲೆ ಪೌರಾಯುಕ್ತ, ಕಂದಾಯ ಸಿಬ್ಬಂದಿಯ ವಿರುದ್ಧ ಸೆಕ್ಷನ್ 420 ಅಡಿ ಪ್ರಕರಣ ದಾಖಲಾಗಿದೆ. ಸರ್ಕಾರಿ ದಾಖಲೆಗಳನ್ನು (Government Documents) ತಿದ್ದಿ ಕೆಲವು ಕಡತಗಳನ್ನು ನಾಪತ್ತೆ ಮಾಡಲಾಗಿದೆ. ನಿವೇಶನಗಳ ಖಾತೆ ಮಾಡುವ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ (Nanjangud Town Police …

Read More »

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್

ಬೆಂಗಳೂರು, ಫೆ.19: ವಿಶ್ವ ವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ (Bengaluru Karaga) ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ಬೆಂಗಳೂರು ಕರಗ ಉತ್ಸವ ನಡೆಯಲಿದೆ. ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ (A Jnanendra) ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ನಿನ್ನೆ (ಫೆ.18) ನಡೆದ ಸಭೆಯಲ್ಲಿ ಧರ್ಮರಾಯ …

Read More »

ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ! ಚರ್ಚೆಗೆ ಗ್ರಾಸವಾಯ್ತು ಸರ್ಕಾರದ ನಡೆ

ವಿಜಯಪುರ, : ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ (Department of Social Welfare, Karnataka) ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿ ಬೇರೆಯೇ ಧ್ಯೇಯವಾಕ್ಯ ಅಳವಡಿಸಲಾಗಿದೆ. ವಿಜಯಪುರ (Vijayapura)ಜಿಲ್ಲೆಯ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು (Kuvempu)ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಿಸಲಾಗಿದೆ. ವಿಜಯಪುರ …

Read More »

1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ವಿಶ್ವವಿದ್ಯಾಲಯ

ಫೆಬ್ರವರಿ 19: ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi Kannada University) 1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್ ಬಿಲ್ (Current Bill) ಬಾಕಿ ಉಳಿಸಿ ಕೊಂಡಿದ್ದು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (GESCOM) ನೋಟಿಸ್​ ನೀಡಿದೆ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದ್ದರಿಂದ, ಜೆಸ್ಕಾಂ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ವಿದ್ಯುತ್​ ಸರಬರಾಜು ಅನ್ನು ಸ್ಥಗಿತಗೊಳಿಸಿತ್ತು. ಆದರೆ “ನುಡಿ ಹಬ್ಬ” ಇದ್ದ ಕಾರಣ ವಿದ್ಯುತ್​ ಸರಬರಾಜು ಮಾಡಿ ಎಂದು ವಿಶ್ವವಿದ್ಯಾಲಯ …

Read More »

ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ

ಹಿಂದಿ ಚಿತ್ರರಂಗದ ಮೇರು ಚಿತ್ರಸಾಹಿತಿ, ಭಾರತದ ಪ್ರಸ್ತುತ ಅತ್ಯುತ್ತಮ ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಗುಲ್ಜಾರ್ ಸಾಗಿ ಬಂದ ಹಾದಿ ಎಂಥಹುದು ಗೊತ್ತೆ?ಕೇಂದ್ರ ಸರ್ಕಾರವು (Central Government) ಇಂದು ಖ್ಯಾತ ಚಿತ್ರಸಾಹಿತಿ ಗುಲ್ಜಾರ್ ಹಾಗೂ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ. ಒಬ್ಬರು ಸಂಸ್ಕೃತ ವಿದ್ವಾಂಸರಾದರೆ ಮತ್ತೊಬ್ಬರು ಭಾರತದ ಈಗಿನ ಅತ್ಯುತ್ತಮ ಉರ್ದು ಕವಿ. ಬಾಲಿವುಡ್ ಸಿನಿಮಾ ಸಾಹಿತ್ಯವನ್ನು ತಮ್ಮ ಲೇಖನಿ ಮೂಲಕ …

Read More »

ಮರೆಯಾಗಿರುವ ನಮ್ಮ ಮಣ್ಣಿನ ಬ್ಯಾಂಕುಗಳು ಕರ್ಣಾಟಕ ಬ್ಯಾಂಕ್‌ನಲ್ಲಿ ವಿಲೀನವಾಗಬೇಕು: ಡಿಕೆಶಿ

ಮಂಗಳೂರು: ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್‌ಗಳು ಕಣ್ಮರೆಯಾಗಿವೆ. ಹೀಗಾಗಿ ನಮ್ಮ ಮಣ್ಣಿನಲ್ಲಿ ಹುಟ್ಟಿ ಕಣ್ಮರೆಯಾಗಿರುವ ಬ್ಯಾಂಕುಗಳು ಹಾಗೂ ಇತರೆ ಬ್ಯಾಂಕ್‌ಗಳನ್ನು ಕರ್ಣಾಟಕ ಬ್ಯಾಂಕ್ (Karnataka Bank) ಜತೆ ವಿಲೀನ ಮಾಡಿಕೊಳ್ಳುವಂತಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಗರದಲ್ಲಿ ನಡೆದ ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ …

Read More »

ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯ ಹತ್ಯೆ ಮಾಡಿದ ಪತಿ

ಮೈಸೂರು, ಫೆಬ್ರವರಿ 19: ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ (Murder) ಮಾಡಿದ ದಾರುಣ ಘಟನೆ ಮೈಸೂರಿನ (Mysuru)ನಾಯ್ಡುನಗರದಲ್ಲಿ ನಡೆದಿದೆ. ಇದೀಗ ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಅಖಿಲಾ ಭಾನು (46) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಆರೋಪಿ ಪತಿ ಅಬ್ಬ ಥಾಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್​ನನ್ನು ಪೊಲೀಸರು …

Read More »

ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಿದ ಶಾಲಾ ಮುಖ್ಯ ಶಿಕ್ಷಕ

ವಿಜಯಪುರ, ಫೆ.18: ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಿವೆ. ಇದೀಗವಿಜಯಪುರ (Vijayapura)ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ತನ್ನ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಅವರು ಶಾಲಾ ಆವರಣದಲ್ಲಿಯೇ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಚ ಮಾಡಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕಾರ್ ಸ್ವಚ್ಛ ಮಾಡುತ್ತಿರುವ …

Read More »

ರಾಮಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ಕಟ್ಟಿಲ್ಲ. :ಸಂತೋಷ್ ಲಾಡ್

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ಕಟ್ಟಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆ ಆಗಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೇವಲ ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕಾಗಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.   ಅದರ ಹೊರತಾಗಿ ಬೇರೆ ಏನೂ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆಯಾಗುವುದಿಲ್ಲ ಎಂಬುದಾಗಿ …

Read More »

ಹಾವೇರಿಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಹಾವೇರಿ, : ನಗರದ ಮಣಿಗಾರ ಓಣಿಯಲ್ಲಿಹೆಸ್ಕಾಂ(Hescom) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಕನೋರ್ವ ಬಲಿಯಾದ ಘಟನೆ ನಡೆದಿದೆ. ಸುರೇಶ್ (38) ಮೃತ ದುರ್ದೈವಿ. ಮತ್ತೋರ್ವನಿಗೆ ಲೈನ್​ಮನ್ ನಿಂಗಪ್ಪನಿಗೆ ಗಂಭಿರ ಗಾಯವಾಗಿದ್ದು, ಹಾವೇರಿ(Haveri) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಖಡಿತಗೊಳಿಸಿ ಇಬ್ಬರು ಯುವಕರು ಹೊಸ ಲೈನ್ ಎಳೆಯುವ ಕಾಮಗಾರಿ ಮಾಡುತ್ತಿದ್ದರು. ಈ ವೇಳೆ ಸಿಬ್ಬಂದಿ ಏಕಾಏಕಿ ವಿದ್ಯುತ್ ಕನೆಕ್ಟ್ ಮಾಡಿದ್ದಾನೆ. ಇನ್ನು ಲೈನ್ ಮನ್ ಶವ ಕಂಬದಲ್ಲಿಯೇ ನೇತಾಡುತ್ತಿದೆ. ಕುಟುಂಬಕ್ಕೆ 5 ಲಕ್ಷ …

Read More »