Breaking News

ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿ……..

Spread the love

ಬೆಳಗಾವಿ – ಮಹಾರಾಷ್ಟ್ರದಿಂದ ಔಷಧಿ ಸಾಗಿಸುವ ಕಂಟೇನರ್ ನಲ್ಲಿ ಕದ್ದು ಮುಚ್ವಿ ಕರ್ನಾಟಕದ ಗಡಿ ಪ್ರವೇಶ ಮಾಡಲು ಪ್ರಯತ್ನಿಸಿದ್ದ 24 ಜನರನ್ನು ತಡೆದಿರುವ ನಿಪ್ಪಾಣಿ ಪೋಲೀಸರು ದೊಡ್ಡ ಅನಾಹುತವನ್ನೇ ತಪ್ಪಸುವಲ್ಲಿ ಯಶಸ್ವಿಯಾಗಿದ್ದಾರೆ .

ಏಪ್ರಿಲ್ 16 ರಂದು ಔಷಧಿ ಸಾಗಿಸುವ ಕಂಟೇನರ್ ಕಾಗಲ್ ಬಳಿ ಕರ್ನಾಟಕದ ಗಡಿ ಪ್ರವೇಶಿಸುವಾಗ ಕಂಟೇನರ್ ತಡೆದು ಕಂಟೇನರ್ ಚೆಕ್ ಮಾಡಿದಾಗ 24 ಜನರು ಔಷಧಿ ಭಾಕ್ಸ್ ಗಳ ನಡುವೆ ಮುಚ್ಚಿ ಕುಳಿತುಕೊಂಡಿದ್ದರು ಅವರನ್ನು ವಶಕ್ಕೆ ಪಡೆದ ನಿಪ್ಪಾಣಿ ಪೋಲೀಸರು ಮಹಾರಾಷ್ಟ್ರದ ಪೋಲೀಸರಿಗೆ ಒಪ್ಪಸಿದ್ದರು‌.

ಕರಗನಾಟಕದ ಗಡಿ ನುಸುಳುವ ಪ್ರಯತ್ನ ಮಾಡಿದ್ದ 24 ಜನರನ್ನು ಕಾಗಲ್ ಬಳಿಯ ಕಾಸಬಾಸಾ ಗಾಂವ ಬಳಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿತ್ತು

ಕೊಲ್ಹಾಪೂರ ಜಿಲ್ಲಾಡಳಿತ 24 ಜನರ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ 24 ಜನರಲ್ಲಿ ಇಬ್ಬರ ರಿಪೋರ್ಟ್ ಪಾಸಿಟೀವ್ ಬಂದಿದ್ದು ನಿಪ್ಪಾಣಿ ಪೋಲೀಸರ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ

ನಿಪ್ಪಾಣಿ ಪೋಲೀಸರ ಕಾರ್ಯಕ್ಕೆ ಜಿಲ್ಲಾ ಪೋಲೀಸ್ ಇಲಾಖೆ ಪ್ರಶಂಸೆ ಮಾಡುವ ಮೂಲಕ ನಿಪ್ಪಾಣಿ ಪೋಲೀಸರಿಗೆ ಬಹುಮಾನ ಘೋಷಿಸಿದೆ ಎಂದು ತಿಳಿದು ಬಂದಿದೆ .

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿಂಬರಗಿ ಅವರು ಗಡಿಯಲ್ಲಿ ಯಾರೊಬ್ಬರೂ ಆಕ್ರಮವಾಗಿ ನುಸುಳಿ ಬಾರದಂತೆ ಬಿಗಿ ಬಂದೋಬಸ್ತ ಮಾಡಿ ತೀವ್ರ ನಿಗಾ ವಹಿಸಿದ ಪರಿಣಾಮ ನುಸುಳುಕೋರರಿಗೆ ಲಗಾಮು ಹಾಕಿದಂತಾಗಿದೆ ….


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ