ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಕೈಗಾರಿಕ ವಲಯದ ಶೇ.70 ರಷ್ಟು ಭಾಗದ ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಉಳಿದ ಶೇ.30 ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ವಿಷಾದನೀಯ ಸಂಗತಿ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಗಂಭೀರವಾಗಿದ್ದು, ಮುಚ್ಚುವ ಸ್ಥಿತಿಗೆ ತಲುಪಿವೆ. ಪರಿಣಾಮ ಕಾರ್ಮಿಕರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅದಷ್ಟೂ ಬೇಗ ಧಾವಿಸಬೇಕು ಎಂದು ಅಸ್ರಣ್ಣ ಮನವಿ ಮಾಡಿದರು.
ಇದೇ ವೇಳೆ ಕಾರ್ಮಿಕರಿಗೆ ಶೇ.50 ವೇತನ ನೀಡಬೇಕು ಎಂದು ಮನವಿ ಮಾಡಿದ ಅಸ್ರಣ್ಣ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಅನುದಾನ ನೀಡುವಂತೆ ಆಗ್ರಹಿಸಿದರು. ಕೈಗಾರಿಗೆಗಳ ಆರು ತಿಂಗಳ ಸಾಲದ ಬಡ್ಡಿಯನ್ನು ಮನ್ನ ಮಾಡಬೇಕು ಎಂದರು. ಇತ್ತ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವಿಗೆ ದಾವಿಸುವಂತೆ ಸಣ್ಣ ಕೈಗಾರಿಕಾ ವಲಯದ ಪದಾಧಿಕಾರಿಗಳು ಒತ್ತಾಯಿಸಿದರು.
ಏಷ್ಯಾದಲ್ಲೇ ಅತೀದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ವಲಯ ಹಲವಾರು ಹೆಸರಾಂತ ಕಂಪನಿಗಳು ಇಲ್ಲಿವೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ, ಉಪಾಧ್ಯಕ್ಷರಾದ ಪ್ರಕಾಶ್, ಪ್ರಾಣೇಶ್, ಕಾರ್ಯದಶೀ ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಂಜುನಾಥ್, ಜಂಟಿ ಖಜಾಂಚಿ ಮುರುಳಿ ಕೃಷ್ಣ, ನಿಕಟಪೂರ್ವ ಅಧ್ಯಕ್ಷ ಗಿರಿ ಇತರರು ಹಾಜರಿದ್ದರು.