ನವದೆಹಲಿ: ಒಂದೇ ದಿನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಚಿತ್ರಣ ಬದಲಾಗುವ ಸಾಧ್ಯತೆ ಕಂಡು ಬಂದಿದೆ. ಒಂದೇ ದಿನದಲ್ಲಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟಾಗುವ ಸಾಧ್ಯತೆ ಇದೆ.
ದೆಹಲಿಯ ನಿಜ್ಜಾಮುದ್ದಿನ್ ಮರ್ಕಸ್ ನಲ್ಲಿದ್ದ 163 ಮಂದಿಯನ್ನ ಲೋಕ ನಾಯಕ ಆಸ್ಪತ್ರೆಗೆ ರವಾನಿಸಿದ್ದು, ಐಸೋಲೇಷನ್ ನಲ್ಲಿ ಇಡಲಾಗಿದೆ. ಇವರ ಎಲ್ಲರ ಸ್ಯಾಂಪಲ್ ಗಳನ್ನು ಪಡೆದು ಲ್ಯಾಬ್‍ಗಳಿಗೆ ಕಳುಹಿಸಲಾಗಿದ್ದು ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಈ 163 ಮಂದಿಯಲ್ಲೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ 85, ಸೋಮವಾರ 34 ಜನರು ಪ್ರತ್ಯೇಕವಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಇವರಲ್ಲಿ ಕೆಲವರ ವರದಿ ಕೂಡಾ ಇಂದು ನಿರೀಕ್ಷಿಸಲಾಗಿದೆ. ದೆಹಲಿಯಲ್ಲಿ ಸದ್ಯ 97 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಕೇರಳಕ್ಕೆ ದೆಹಲಿ ಪೈಪೋಟಿ ನೀಡುವ ಲಕ್ಷಣಗಳು ಕಂಡು ಬರ್ತಿದೆ.
ದೆಹಲಿಯಲ್ಲಿ ಸೋಂಕಿತರ ಪ್ರಮಾಣದ ಏರಿಕೆಯಾಗುತ್ತಿರುವ ಹಿನ್ನೆಲೆ ಲೋಕ ನಾಯಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 500 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಹೆಚ್ಚು 500 ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ವೆಂಟಿಲೇಟರ್ ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.