Breaking News

ಅಕ್ರಮ ಜಾನುವಾರು ಸಾಗಾಟ: ವಾಹನವನ್ನು ಬೆನ್ನಟ್ಟಿ ರಾಸುಗಳನ್ನು ರಕ್ಷಿಸಿದ ಖಾಕಿ ಪಡೆ

Spread the love

ಮಂಗಳೂರು: ಗಾಳಿಯಲ್ಲಿ ಗುಂಡು ಹಾರಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ.

ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಜಾನುವಾರು ಸಾಗಿಸ್ತಿದ್ದವರ ಬಂಧಿಸಲು ಮೂಡುಬಿದ್ರೆ ವೃತ್ತ ನಿರೀಕ್ಷಕ BS ದಿನೇಶ್ ಕುಮಾರ್ ತಂಡ ಚೇಸಿಂಗ್ ಮಾಡಿದೆ. ಈ ವೇಳೆ ಜೀಪ್‌ಗೆ ಡಿಕ್ಕಿ ಹೊಡೆಯಲು ಕದೀಮರು ಪ್ರಯತ್ನಿಸಿದ್ದಾರೆ.

ಆಗ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಪೊಲೀಸರು 6 ಜಾನುವಾರು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ