Breaking News

ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸುವುದನ್ನು ಕಂಡು ಜಾನಪದ ಹಾಡು

Spread the love

ಮೂಡಲಗಿ: ಅರಬಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸುವುದನ್ನು ಕಂಡು ಜಾನಪದ ಜಾಣ ಶಬ್ಬೀರ್ ಡಾಂಗೆ ಅವರು “ಮಂದಿಯ ಕಷ್ಟ ನೋಡ್ಯಾರ,ಎನ್ ಚಂದ ಸಂತಿ ಮಾಡ್ಯಾರ ” ಜಾನಪದ ಹಾಡು ರಚಿಸಿ ಹಾಡಿದ್ದು, ಸೋಮವಾರ ಹಳ್ಳೂರ ಗ್ರಾಮದಲ್ಲಿ ಆಡಿಯೋ ಸಿ.ಡಿಯನ್ನು ಬಿಡುಗಡೆಗೊಳಿಸಿದರು.

ಕಳೆದ 15-16ವರ್ಷಗಳಿಂದ ಕಷ್ಟದಲ್ಲಿದ್ದ ಕ್ಷೇತ್ರದ ಜನತೆಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಕೊರೋನಾ ಲಾಕ್‍ಡೌನ ಸಮಯದಲ್ಲಿ ಉದ್ಯೋಗವಿಲ್ಲದೆ ಜನತೆ ಹಸಿವಿನಿಂದ ಇರಬಾರದು ಎಂದು ಪಕ್ಷಬೇದ, ಜಾತಿ ಭೇದ ಮಾಡದೆ 86 ಸಾವಿರಕ್ಕೂ ಹೆಚ್ಚು ಅಹಾರ ಸಾಮಗ್ರಿಗಳ ಕಿಟ್ ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ. ಅವರ ಜನ ಹಿತ ಕಾರ್ಯಗಳ ಕುರಿತಾದ ಹಾಡಿದ ಹಾಡು ಎಲ್ಲರೂ ಮೆಚ್ಚುವಂತಾಗಿದೆ ಹಳ್ಳೂರ ಜಿ.ಪಂ.ಸದಸ್ಯೆ ವಾಸಂತಿ ತೇರದಾಳ ಹೇಳಿದರು.

ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಹಳ್ಳೂರ ಪಿ.ಕೆ.ಪಿ.ಎಸ್.ಮಾಜಿ ಅದ್ಯಕ್ಷ ಹಾಲಿ ನಿರ್ದೇಶಕ ಹಣಮಂತ ತೇರದಾಳ ಅವರ ಪ್ರಾಯೋಜಿತ ಶಾಸಕರ ಕುರಿತಾದ ಹಾಡಿದ ವಿಡಿಯೋ ಸಿ.ಡಿ.ಯಲ್ಲಿ ಜನತೆಗೆ ಹಂಚಿದ ಅಹಾರ ಕಿಟ್, ಮಾಸ್ಕ್ ಮತ್ತು ಕೆ.ಎಮ್.ಎಫ್ ಹಾಲನ್ನು ರಾಜ್ಯದ ಜನತೆಗೆ ವಿತರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿ ವಿಡಿಯೋ ಹಾಡಿಗೆ ಶ್ರಮಿಸಿದ ತಂಡಕ್ಕೆ ಶುಭ ಕೋರಿದರು.

ಅದ್ಯಕ್ಷತೆ ವಹಿಸಿದ್ದ ಹಳ್ಳೂರ ಗ್ರಾ.ಪಂ. ಮಾಜಿ ಅದ್ಯಕ್ಷ ಬಿ.ಜಿ. ಸಂತಿ ಹಳ್ಳೂರ ಗ್ರಾಮಕ್ಕೆ ಒದಗಿಸಿದ ಸೌಕರ್ಯಗಳ ಬಗ್ಗೆ ಹೇಳಿದರು.


Spread the love

About Laxminews 24x7

Check Also

ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಿ : ಅಧಿವೇಶನದಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ.

Spread the loveಮೂಡಲಗಿ: ನಕಲಿ ವೈದ್ಯರು ಮತ್ತು ತರಬೇತಿ ಪಡೆಯದ ವೈದ್ಯಕೀಯ ವೃತ್ತಿಪರರು ಯಾವುದೇ ಅರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ