Breaking News

ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌

Spread the love

ಬೆಂಗಳೂರು: ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್‌ ಗೆಳತಿಯನ್ನು ವಿವಾಹಿತ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ವರ್ತೂರಿನಲ್ಲಿ  ನಡೆದಿದೆ.

ಕೊಡಗು ಮೂಲದ ರಂಜಿತಾಳನ್ನು (23) ಆರೋಪಿ ಅಯ್ಯಪ್ಪ ಕೊಲೆ ಮಾಡಿದ್ದಾನೆ. ಇಬ್ಬರು ಲಿವ್‌ ಇನ್‌ ರಿಲೇಶನ್ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದಿರಲಿಲ್ಲ. ಇದೀಗ ಈ ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ತಾರಕಕ್ಕೇರಿ ಆರೋಪಿ ವೈಯರ್‌ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.

ಸದ್ಯ ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 8-10 ರೂ. ಏರಿಕೆ

Spread the loveಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಈಗ ದೇಶದಲ್ಲಿ ಗ್ಯಾಸ್ ಎಮರ್ಜೆನ್ಸಿ  ಸೃಷ್ಟಿ ಮಾಡಿದೆ. ಈಗಾಗಲೇ ಗೃಹ ಬಳಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ