ಜಮ್ಮು ಮತ್ತು ಕಾಶ್ಮೀರ(ಜು.18): ಆಕಸ್ಮಿಕವಾಗಿ ಗ್ರೆನೇಡ್ಸ ಸ್ಫೋಟಗೊಂಡ ಕಾರಣ ಗಡಿ ರಕ್ಷಣಾ ಕರ್ತವ್ಯದಲ್ಲಿ ನಿರತರಾಗಿದ್ದ ಭಾರತೀಯ ಸೇನಯ ಕ್ಯಾಪ್ಟನ್ ಹಾಗೂ ಕಿರಿಯ ಕಮಿಷನ್ಡ್ ಆಫೀಸರ್ ನಿಧನರಾಗಿದ್ದಾರೆ. ಜಮ್ಮ ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಈ ಘಟನೆ ನಡೆದಿದೆ.
LOC ಮೆಹಂದಾರ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಚಾನಕ್ಕಾಗಿ ಗ್ರೆನೇಡ್ ಕೆಳಕ್ಕೆ ಬಿದ್ದು ಸ್ಫೋಟಗೊಂಡಿದೆ. ಪರಿಣಾಮ ಕ್ಯಾಪ್ಟನ್ ಆನಂದ್ ಹಾಗೂ ನೈಬ್ ಸುಬೇದಾರ್ ಭಗವಾನ್ ಸಿಂಗ್ ಮೃತಪಟ್ಟಿದ್ದಾರೆ. ಮೆಹಂದಾರ್ ಸೆಕ್ಟರ್‌ನಲ್ಲಿ ಸೇನಾ ಟ್ರೋಪ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಕ್ಷಣ ಇಬ್ಬುರು ಸೇನಾಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಉಧಮಪುರದಲ್ಲಿರುವ ಸೇನಾ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರಗಾಯಗೊಂಡಿದ್ದ ಕ್ಯಾಪ್ಟನ್ ಆನಂದ್ ಹಾಗೂ ಸುಬೇದಾರ್ ಭಗವಾನ್ ಸಿಂಗ್ ನಿಧನರಾಗಿದ್ದಾರೆ.
ಕಳೆದ(ಜು.17) ರಾತ್ರಿ ಪೂಂಚ್ ಜಿಲ್ಲೆಯ ಮೆಹಂದಾರ್ ಸೆಕ್ಟರ್‌ನಲ್ಲಿ ಸ್ಫೋಟ ಸಂಭವಿಸಿದೆ. ತಕ್ಷಣವೇ ಸೇನಾ ಹೆಲಿಕಾಪ್ಟರ್ ನೆರವಿಗೆ ಧಾವಿಸಿದೆ. ಕಮಾಂಡ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಬ್ಬರು ಯೋಧರು ಬದುಕುಳಿಯಲಿಲ್ಲ. ಈ ಘಟನೆ ಕುರಿತು ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.
ಕ್ಯಾಪ್ಟನ್ ಆನಂದ್ ಬಿಹಾರದ ಚಂಪಾನಗರದ ಬಗಲಪುರ ಮೂಲದವರಾಗಿದ್ದು, ಭಗವಾನ್ ಸಿಂಗ್ ಉತ್ತರ ಪ್ರದೇಶದ ಅಂಬೇಡ್ಕರ್ ನಗರದವರಾಗಿದ್ದಾರೆ. ಎರಡು ಕುಟಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮೃತದೇಹಕ್ಕ ಸೇನಾ ಗೌರವ ನೀಡಲಾಗಿದೆ. ಕರ್ತವ್ಯದಲ್ಲಿದ್ದ ಸೇನಾ ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ಭಾರತೀಯ ಸೇನೆ ಹೇಳಿದೆ.
ಇತ್ತೀಚೆಗೆ ಭಾರತೀಯ ಸೇನೆ ಗಡಿ ಪ್ರದೇಶದಲ್ಲಿ ಕ್ಷಿಪಣಿಗಳನ್ನು ನಿರ್ವಹಣೆ ಮಾಡಿತ್ತು. ಈ ವೇಳೆ ಯೋಧರಿಂದ ಅಚಾನಕ್ಕಾಗಿ ಮಿಸೈಲ್ ಸಿಡಿದು ಪಾಕಿಸ್ತಾನದಲ್ಲಿ ಸ್ಫೋಟಗೊಂಡಿತ್ತು. ಮಾರ್ಚ್ 9 ರಂದು ನಡೆದ ಮಿಸೈಲ್ ಸ್ಫೋಟ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಚರ್ಚೆಯಾಗಿತ್ತು. ಅಂತಾರಾಷ್ಟ್ರೀಯ ಗಡಿ ರೇಖೆಯಿಂದ ಪಾಕಿಸ್ತಾನ ಪ್ರದೇಶಕ್ಕೆ ನುಗ್ಗಿದ ಈ ಮಿಸೈಲ್ ಬರೋಬ್ಬರಿ 125 ಕಿಲೋಮೀಟರ್ ಕ್ರಮಿಸಿತ್ತು. ಆಕಸ್ಮಿಕವಾಗಿ ಸಿಡಿದ ಮಿಸೈಲ್‌ನಿಂದ ಯಾವುದೇ ಪ್ರಾಣಹಾನಿ ಸಂಭವಿಸರಿಲಿಲ್ಲ. ಘಟನೆ ಕುರಿತು ಭಾರತೀಯ ರಕ್ಷಣಾ ಸಚಿವಾಯ ವಿಷಾಧ ವ್ಯಕ್ತಪಡಿಸಿತ್ತು. ಬಳಿಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿತ್ತು. ಅತ್ತ ಪಾಕಿಸ್ತಾನ ಈ ಘಟನೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದು ಉದ್ದೇಶಪೂರ್ಕವಾಗಿ ಸಿಡಿಸಿದ ಮಿಸೈಲ್ ಎಂದಿತ್ತು. ಈ ಕುರಿತಾಗಿ ಪ್ರತಿಭಟನೆ ವ್ಯಕ್ತಪಡಿಸಿರುವ ಪಾಕಿಸ್ತಾನ ಭಾರತೀಯ ರಾಯಭಾರಿಗೆ ಸಮನ್ಸ್ ಸಹ ನೀಡಿತ್ತು. ಯಾವುದೇ ಸ್ಪೋಟಕ ಅಳವಡಿಸದ ಭಾರತದ ಕ್ಷಿಪಣಿ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದಿತ್ತು. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.