Breaking News

ಖಾತೆಯಲ್ಲಿಯ 15 ಕೋಟಿ ಹೋಗಿದ್ದು ಯಾರ ಖಾತೆಗೆ?ಪಂಚ ಸವಾಲುಗಳಿಗೆ ಉತ್ತರ ಬೇಕೆಂದ ಸುಶಾಂತ್ ತಂದೆ

Spread the love

ಮುಂಬೈ/ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನದಿಂದ ದಿನ ಜಟಿಲವಾಗುತ್ತಾ ಹೋಗ್ತಿದೆ. ಸುಶಾಂತ್ ತಂದೆ ಕೆಕೆ ಸಿಂಗ್ ನಟಿ ರಿಯಾ ಚಕ್ರವರ್ತಿ ಮತ್ತು ಇಂದ್ರಜಿತ್ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಕೆ ಸಿಂಗ್ ದೂರಿನಲ್ಲಿ ತಮಗೆ ಐದು ಪ್ರಶ್ನೆಗಳಿಗೆ ಉತ್ತರ ಬೇಕಂದಿದ್ದಾರೆ.

ಪಂಚ ಸವಾಲುಗಳು:
1. 2019ಕ್ಕಿಂತ ಮೊದಲು ನನ್ನ ಮಗನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ರಿಯಾಳ ಸಂಪರ್ಕಕ್ಕೆ ಬಂದ ಮೇಲೆ ಏನಾಯ್ತು?
2. ಒಂದು ವೇಳೆ ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ರೆ ಈ ಬಗ್ಗೆ ನಮಗೆ ಮಾಹಿತಿ ಏಕೆ ನೀಡಲಿಲ್ಲ?
3. ಪುತ್ರನಿಗೆ ಚಿಕಿತ್ಸೆ ನೀಡಿರುವ ವೈದ್ಯರ ರಿಯಾಳ ಮೋಸದಾಟದಲ್ಲಿ ಭಾಗಿಯಾಗಿದ್ದಾರೆ. ಚಿಕಿತ್ಸೆ ವೇಳೆ ಸುಶಾಂತ್ ಯಾವ ಔಷಧಿ ನೀಡಲಾಗಿತ್ತು?
4. ನನ್ನ ಮಗನ ಬ್ಯಾಂಕ್ ಖಾತೆಯಲ್ಲಿ 17 ಕೋಟಿ ರೂ. ಹಣವಿತ್ತು. ಕಳೆದ ವರ್ಷ ಅಪರಿಚಿತರ ಖಾತೆಗಳಿಗೆ 15 ಕೋಟಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಎಲ್ಲ ಖಾತೆಗಳ ಬಗ್ಗೆ ತನಿಖೆ ನಡೆಯಬೇಕು.
5. ರಿಯಾಳ ಸಂಪರ್ಕಕ್ಕೆ ಬಂದ ಕೂಡಲೇ ಸುಶಾಂತ್ ಗೆ ಬರುತ್ತಿದ್ದ ಸಿನಿಮಾ ಆಫರ್ ಗಳು ಕಡಿಮೆ ಆಗಿದ್ದೇಕೆ?

ಸುಶಾಂತ್ ಗೆ ಬರುತ್ತಿದ್ದ ಸಿನಿಮಾಗಳಿಗೆ ರಿಯಾ ಷರತ್ತು ವಿಧಿಸುತ್ತಿದ್ದಳು. ಸುಶಾಂತ್ ಸಿನಿಮಾದಲ್ಲಿ ತನ್ನನ್ನೇ ನಾಯಕಿಯನ್ನಾಗಿ ಕಾಸ್ಟ್ ಮಾಡಬೇಕು ಎಂದು ನಿರ್ದೇಶಕರ ಮುಂದೆ ಕಂಡೀಷನ್ ಹಾಕುತ್ತಿದ್ದಾರೆ. ಸುಶಾಂತ್ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಲ್ಲ ಆಪ್ತರನ್ನು ರಿಯಾ ಬದಲಿಸಿದ್ದಳು. ತನಗೆ ಬೇಕಾದವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಳು. ಇತ್ತೀಚೆಗೆ ಸುಶಾಂತ್ ಫೋನ್ ನಂಬರ್ ಸಹ ರಿಯಾ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಸುಶಾಂತ್ ನನಗೆ ಫೋನ್ ಮಾಡಿದ್ದಾಗ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಗ್ತಿದೆ ಎಂದು ಹೇಳಿಕೊಂಡಿದ್ದನು. ಕೆಲ ದಿನಗಳ ಬಳಿಕ ಸುಶಾಂತ್ ದೆಹಲಿಯಲ್ಲಿರು ಸೋದರಿಯ ಮನೆಗ ಹೋಗಿದ್ದನು. ಮೂರು ದಿನಗಳ ಬಳಿಕ ಪದೇ ಪದೇ ಫೋನ್ ಮಾಡಿದ್ದ ರಿಯಾ ಮಗನನ್ನು ಕರೆಸಿಕೊಂಡಿದ್ದಳು ಎಂದು ಕೆ.ಕೆ.ಸಿಂಗ್ ಹೇಳಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ