Breaking News

ಶಾಸಕ ದುರ್ಯೋಧನನಿಗೆ ಖಾದಿ ಮತ್ತು ಗ್ರಾಮೋದ್ಯೋಗ  ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ

Spread the love

ಬೆಳಗಾವಿ:  ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ  ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ  ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.

ರಾಯಬಾಗ ಕ್ಷೇತ್ರಿದಂದ ಸತತ ಮೂರು ಬಾರಿ ಶಾಸಕರಾಗಿ ದುರ್ಯೋಧನ ಐಹೊಳೆ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.   ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಸಂಭ್ರಮದ ಮಧ್ಯೆಯೇ 24 ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ. 

24 ಶಾಸಕರ ಪೈಕಿ ರಾಯಬಾಗ ಶಾಸಕ ದುರ್ಯೋಧ ಐಹೊಳೆ ಅವರಿಗೆ ಖಾಗಿ ಮತ್ತು ಗ್ರಾಮೋದ್ಯಮ  ನಿಗಮ ಮಂಡಳಿಅಧ್ಯಕ್ಷ ಪಟ್ಟ ಒಲಿದು ಬಂದಿದೆ. 

ಬೆಂಗಳೂರು: ಬಿಜೆಪಿ ಸರ್ಕಾರ ಇಂದಿಗೆ ಒಂದು ವರ್ಷ ಪೂರೈಸಿದೆ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 24 ಜನ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ  ಗಿಫ್ಟ್ ನೀಡಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಈ ಕಳಗಿನಂತಿದೆ.

1) ಶಾಸಕ ಅರಗ ಜ್ಷಾನೇಂದ್ರ- ಕರ್ನಾಟಕ ಗೃಹ ಮಂಡಳಿ ಬೆಂಗಳೂರು

2) ಎಂ. ಚಂದ್ರಪ್ಪ- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು

3) ನರಸಿಂಹ ನಾಯಕ(ರಾಜುಗೌಡ)- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು

4)ಎಂ.ಪಿ. ಕುಮಾರಸ್ವಾಮಿ- ಕರ್ನಾಟಕ ಮಾರುಕಟ್ಟೆ, ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಲಿಮಿಟೆಡ್(ಎಂಸಿಎ) ಬೆಂಗಳೂರು

5) ಎ.ಎಸ್. ಪಾಟೀಲ್(ನಡಹಳ್ಳಿ)- ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಯಮಿತ,ಬೆಂಗಳೂರು

6) ಕೆ. ಮಾಡಾಳ ವಿರುಪಾಕ್ಷಪ್ಪ- ಕರ್ನಾಟಕ ಸಾಬೂನು ಮತ್ತು ಮಾರ್ಜಕ  ನಿಯಮಿತ.

7) ಎಚ್. ಹಾಲಪ್ಪ- ಮೈಸೂರು ಸೆಲ್ಸ್ ಇಂಟರ್ ನ್ಯಾಶನಲ್, ಲಿಮಿಟೆಡ್(ಎಂಎಸ್ಐಎಲ್) ಬೆಂಗಳೂರು

8)ಜಿ.ಹೆಚ್. ತಿಪ್ಪಾರೆಡ್ಡಿ- ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ಬೆಂಗಳೂರು

9) ಕೆ. ಶಿವನಗೌಡ ನಾಯಕ್- ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ, ಬೆಂಗಳೂರು

10) ಕಳಕಪ್ಪ ಗುರುಶಾಂತಪ್ಪ ಬಂಡಿ- ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮ ನಿಯಮಿತ.

11) ಪರಪ್ಪ ಈಶ್ವರಪ್ಪ ಮುನವಳ್ಳಿ- ಕರ್ನಾಟಕ ರಾಜ್ಯ ಹಣಕಾಸು  ಸಂಸ್ಥೆ, ಬೆಂಗಳೂರು

12) ಸಿದ್ದು ಸವದಿ- ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ನಿಯಮಿತ, ಬೆಂಗಳೂರು

13) ಪ್ರೀತಮ್ ಗೌಡ-  ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ

14) ರಾಜಕುಮಾರ್ ಪಾಟೀಲ್ ತೇಲ್ಕೂರ್- ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ ಸಾರಿಗೆ ಸದನ, ಕಲಬುರಗಿ

15) ದತ್ತಾತ್ರೇಯ ಚಂದ್ರಶೇಖರ್ ಪಾಟೀಲ್ ರೇವೂರ್- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಕಲಬುರಗಿ

16) ಶಂಕರ್ ಪಾಟೀಲ್ ಮುನೇನಕೊಪ್ಪ- ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮ

17) ಎಚ್. ನಾಗೇಶ್- ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮ  ನಿಯಮಿತ ಬೆಂಗಳೂರು

18) ಎಸ್.ವಿ. ರಾಮಚಂದ್ರ- ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ದಿ ನಿಗಮ

19) ಓಲೇಕಾರ ನೆಹರು ಚನ್ನಬಸಪ್ಪ- ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ, ಬೆಂಗಳೂರು

20) ಐಹೊಳೆ ದುರ್ಯೋಧನ ಮಹಾಲಿಂಗಪ್ಪ- ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ  ಅಭಿವೃದ್ದಿ ನಿಗಮ, ಬೆಂಗಳೂರು

21) ಲಾಲಜಿ. ಆರ್. ಮಂಡೆನ್- ಕರ್ನಾಟಕ ರಾಜ್ಯ ಹಿಂದುಳಿದ ಆಯೋಗ ಬೆಂಗಳೂರು

22) ಬಸವರಾಜ ದಡೆಸೂರ್- ಕರ್ನಾಟಕ ರಾಜ್ಯ ಸಮಜ ಕಲ್ಯಾಣ ಮಂಡಳಿ, ಬೆಂಗಳೂರು

23) ಡಾ. ಶಿವರಾಜ್ ಪಾಟೀಲ್- ಕರ್ನಾಟಕ ರಾಜ್ಯ ಜೈವಿಕ್ ಇಂಧನ ಅಭಿವೃದ್ದಿ ಮಂಡಳಿ, ಬೆಂಗಳೂರು

24) ಸಿ.ಎಸ್. ನಿರಂಜನ್ ಕುಮಾರ್- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ, ಬೆಂಗಳೂರು


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ