Breaking News

ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್,ಆದರೆ ಸಾಮಾಜಿಕ ಅಂತರ ಕಾಪಾಡಿ……….

Spread the love

ನವದೆಹಲಿ: ದೇಶಾದ್ಯಂತದ ಮದ್ಯದಂಗಡಿಗಳಲ್ಲಿ ಜನಸಂದಣಿ ಕಡಿಮೆಗೊಳಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಮಯವನ್ನು ಜಾರಿಗೊಳಿಸಲು ಹೋಮ್ ಡೆಲಿವರಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕೆಲ ರಾಜ್ಯಗಳು ಸುಪ್ರೀಂ ಕೋರ್ಟಿಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಸಿದ್ದವು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವನ್ನು ಆಲಿಸಿದೆ.

“ಮದ್ಯದಂಗಡಿ ಬಂದ್ ಮಾಡುವ ಕುರಿತು ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರಗಳು ಮದ್ಯವನ್ನು ಹೋಮ್ ಡೆಲಿವರಿ ಮೂಲಕ ಗ್ರಾಹಕರಿಗೆ ತಲುಪಿಸಬಹುದು” ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.

“ಮದ್ಯವನ್ನು ಹೋಮ್ ಡೆಲಿವರಿ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕೆಂದು ನೀವು ಬಯಸುತ್ತೀರಿ” ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅರ್ಜಿರಾರರ ಪರ ವಕೀಲ ದೀಪಕ್ ಸಾಯಿ ಅವರಿಗೆ ಪ್ರಶ್ನಿಸಿದರು.

“ಮದ್ಯ ಮಾರಾಟದಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದು ಬಯಸುತ್ತೇನೆ. ಗೃಹ ಸಚಿವಾಲಯವು ಮದ್ಯ ಮಾರಾಟದ ಬಗ್ಗೆ ರಾಜ್ಯಗಳಿಗೆ ಸ್ಪಷ್ಟೀಕರಣವನ್ನು ನೀಡಬೇಕು” ಎಂದು ವಕೀಲ ದೀಪಕ್ ಸಾಯಿ ವಾದಿಸಿದರು.

ಆದರೆ ಅರ್ಜಿಯನ್ನು ವಜಾಗೊಳಿಸಿದ ನ್ಯಾಯ ಪೀಠವು  ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಜನಸಂದಣಿ ಕಡಿಮೆಗೊಳಿಸಲು ಹೋಮ್ ಡೆಲಿವರಿ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.

ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್‍ಡೌನ್ ಹಿನ್ನೆಲೆ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯವನ್ನೂ ಡೆಲಿವರಿ ಮಾಡಲು ನಿರ್ಧರಿಸಿದೆ. ಹೀಗಾಗಿ ಮದ್ಯವನ್ನು ಹೋಮ್ ಡಿಲೆವರಿ ಮೂಲಕ ಗ್ರಾಹಕರಿಗೆ ತಲುಪಿಸುವ ಚಿಂತನೆ ನಡೆಸಿದೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಮ್ ಡಿಲೆವರಿ ಮೂಲಕ ಮಾರಬಹುದು ಎಂದು ಸಲಹೆ ನೀಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ