ಬೆಂಗಳೂರು : ಗೃಹ ಜ್ಯೋತಿ(Gruha Jyothi)) ಯೋಜನೆ ಜೊತೆಗೆ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು ಸರ್ಕಾರ ವಿದ್ಯುತ್ ದರ(Electricity Price) ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಸರಾಸರಿ 100 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಬಳಕೆದಾರರಿಗೆ ಯುನಿಟ್ ಮೇಲೆ 1 ರೂಪಾಯಿ 10 ಪೈಸ್ ಇಳಿಕೆ ಮಾಡಿದ್ದು ವಾಣಿಜ್ಯ ಬಳಕೆದಾರರಿಗೂ ಕೂಡ ಪ್ರತಿ ಯುನಿಟ್‌ಗೆ 1 ರೂಪಾಯಿ 25 ಪೈಸೆ ಇಳಿಕೆ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ.
ಹೊಸ ದರ ಮಾರ್ಚ್ 1 ರಿಂದ ಅನ್ವಯವಾಗಲಿದೆ.
ಹೆಚ್ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳು ಪ್ರತಿ ರೂ.10 ರಷ್ಟು ಕಡಿಮೆಯಾಗಿದೆ. ಹೆಚ್ಟಿ ಖಾಸಗಿ ಏತ ನೀರಾವರಗೆ ಪ್ರತಿ ಯೂನಿಟ್‌ಗೆ 200 ಪೈಸೆ ಕಡಿಮೆಯಾಗಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ರಾಜ್ಯದ ಜನೆತೆಗೆ ಸರ್ಕಾರ ವಿದ್ಯುತ್ ದರ ವಿಚಾರದಲ್ಲಿ ಕೊಂಚ ರಿಲೀಫ್ ನೀಡಿದೆ.