Breaking News

ಪೆಂಡಾಲ್ ಕೆಲಸದಲ್ಲೂ ನಂ.1,ಕುಲ ಭಾಂದವರಿಗೆ ಸಹಾಯ ಮಾಡೊದ್ರಲ್ಲೂ ನಂ.1ಬೆಳಗಾವಿಯ ಪಕ್ಕಿರಪ್ಪ ಮುರಗೋಡ..!!

Spread the love

ಪಕ್ಕಿರಪ್ಪ ಮುರಗೋಡ ಅಂದ್ರೆ ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬರ ಬಾಯಲ್ಲಿ ಬರೊದು ನಂ.1 ಪೆಂಡಾಲ್ ಗುತ್ತಿಗೆದಾರ ಅಂತ.ಮೇದಾರರಿಂದಲೇ ಮೇದಾರಿಕೆ ಕಲಿತು ಪೆಂಡಾಲ್ ಗುತ್ತಿಗೆದಾರರಾಗಿ, ಮೇದಾರರಿಗೆ ಹಿಂದಕ್ಕೆ ಹಾಕುತ್ತಿದ್ದ ಅನ್ಯ ಸಮಾಜದವರಿಗೆ ಪೈಪೋಟಿ ನೀಡಿ ನಂ.1 ಗುತ್ತಿಗೆದಾರ ಸ್ಥಾನ ಪಡೆಯುವಲ್ಲಿ ಕಿತ್ತೂರು ತಾಲೂಕಿನ ನಿವಾಸಿ ಪಕ್ಕಿರಪ್ಪ ಮುರಗೋಡ ಅವರು ಯಶಸ್ವಿಯಾಗಿದ್ದಾರೆ. ಸಾಕಷ್ಟು ಏಳು ಬೀಳು, ಕಷ್ಟ ನಷ್ಟಗಳನ್ನು ಅನುಭವಿಸಿ ಬೆಳಗಾವಿ ಜಿಲ್ಲೆಯಲ್ಲಿ ನಂ.1 ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ.ತಾವು ಗುತ್ತಿಗೆ ಹಿಡಿದ ಕೆಲಸದಲ್ಲಿ ತಾವಷ್ಟೇ ಅಲ್ಲದೆ ಉಳಿದ ಮೇದಾರ ಸಮಾಜದವರಿಗೂ ಕೆಲಸ ನೀಡಿ ಸಮಾಜದ ಜನರಿಗೆ ಆಸರೆಯಾಗಿದ್ದಾರೆ.

ತಾವು ಮಾಡುವ ಕೆಲಸದಲ್ಲಿಯೂ ಕೂಡ ತಮ್ಮ ಕುಲಭಾಂದವರಿಗೆ ಕೈಲಾದಷ್ಟು ಸಹಾಯ ಮಾಡುವುದರ ಜೊತೆಗೆ ಅವರ ಹಲವಾರು ಕಷ್ಟಗಳಿಗೆ ಸ್ಪಂದಿಸುತ್ತ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಬಡವರ ಜೀವನ ಅಸ್ತವ್ಯಸ್ತಗೊಳಿಸಿ ಊಟಕ್ಕೂ ಪರದಾಡುವಂತೆ ಮಾಡಿದ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಸಮಾಜ ಭಾಂದವರ ಕೈ ಹಿಡಿದು ಆಹಾರ ಸಾಮಗ್ರಿಗಳನ್ನು ಪಕ್ಕಿರಪ್ಪ ಮುರಗೋಡ ಅವರು ವಿತರಿಸಿದ್ದರು.ಬುಟ್ಟಿ ವ್ಯಾಪಾರ ನಂಬಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳಿಗೆ ಕೊರೊನಾ ಸಂಕಷ್ಟಕ್ಕೆ ದೂಡಿತ್ತು. ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿತ್ತು.ಆದರೆ ತಮ್ಮ ಸಮಾಜದವರ ಕಷ್ಟ ನನ್ನ ಕಷ್ಟ ಎಂದು ಭಾವಿಸಿ ಪಕ್ಕಿರಪ್ಪ ಮುರಗೋಡ ಅವರು ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳ ಜೊತೆಗೆ ದಿನವಿ ವಸ್ತುಗಳನ್ನು ನೀಡಿ ದೊಡ್ಡತನ ಮೇರೆದಿದ್ದರು.ಅದೇ ರೀತಿ ಕೋರೊನಾ ಎರಡನೇ ಅದೇ ಯಿಂದ ವಿಧಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ತಾಲೂಕಿನ ಎಲ್ಲ ಮೇದಾರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸಿ ನಾನು ನಿಮ್ಮ ಕಷ್ಟಕ್ಕೆ ಯಾವತ್ತು ಕೈಬಿಡದೇ ನಿಮಗೆಲ್ಲ ಆಸರೆಯಾಗಿ ನಿಲ್ಲುತ್ತೆನೆಂದು ಸಾಬಿತು ಮಾಡಿದ್ದಾರೆ.ಪ್ರತಿ ತಾಲೂಕಿನಲ್ಲಿ ಪಕ್ಕಿರಪ್ಪ ಮುರಗೋಡ ಅವರಂತ ಹೃದಯವಂತರು ಇದ್ದರೆ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ಬರುವುದಿಲ್ಲ.

ಅವರಲ್ಲಿರುವ ದೊಡ್ಡ ಗುಣ ಎಲ್ಲ ನಾಯಕರಿಗೆ ಮಾದರಿಯಾಗಿದೆ.ಸಮಾಜ ಅಂತ ಬಂದಾಗ ಹಿಂದೆ ಮುಂದೆ ನೊಡದೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತ ಬಂದರೂ ಎಲ್ಲಿಯೂ ಕೂಡ ಅವರು ತಾವು ಮಾಡಿದ ಸೇವೆ ಬಗ್ಗೆ ಹೇಳಿಕೊಳ್ಳುವುದಿಲ್ಲ.ಹತ್ತು ರೂಪಾಯಿ ಕೂಡ ದಾನ ಮಾಡಲು ಹಿಂದೆ ಮುಂದೆ ಯೋಚನೆ ಮಾಡುವ ಜನರ ಮಧ್ಯೆ ಲಕ್ಷಾಂತರ ರೂಪಾಯಿ ಬಡವರಿಗಾಗಿಯೇ ಮಿಸಲಿಡುವ ಪಕ್ಕಿರಪ್ಪ ಮುರಗೋಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ..


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ