ಭದ್ರಾವತಿ: ಕಾರಿನಲ್ಲಿ ಬರುತ್ತಿದ್ದ ಶಾಸಕರು ದ್ವಿಚಕ್ರ ವಾಹನದಿಂದ ಕೆಳಬಿದ್ದಿದ್ದ ದಂಪತಿಯನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಶಾಸಕ ಬಿ.ಕೆ.ಸಂಗಮೇಶ್ವರ ಅರಳಿಹಳ್ಳಿ ಗ್ರಾಮದಿಂದ ಹಿಂತಿರುಗುತ್ತಿದ್ದ ವೇಳೆ ರೆಡ್ಡಿ ಕ್ಯಾಂಪ್ ವಾಸಿಗಳಾದ ಯತಿರಾಜಲುನಾಯ್ಡು ಮತ್ತು ವಿಜಯಮ್ಮ ದಂಪತಿ ದ್ವಿಚಕ್ರ ವಾಹನದಿಂದ ಬಿದ್ದರು.
ಕೂಡಲೇ ಕಾರು ನಿಲ್ಲಿಸಿ ಅವರನ್ನು ಉಪಚರಿಸಿದ ಶಾಸಕರು, ಕೂರಿಸಿ ಮಾತನಾಡಿಸಿದರು. ತಲೆ ಸುತ್ತು ಬಂದು ಬಿದ್ದಿರುವುದಾಗಿ ತಿಳಿಸಿದರು.