Breaking News

ಚಿನ್ನ ತೊಳೆದು ಕೊಡುವ ನೆಪದಲ್ಲಿ ಮಹಿಳೆಯೋರ್ವಳನ್ನ ವಂಚನೆ

Spread the love

ಹುಬ್ಬಳ್ಳಿ: ಚಿನ್ನ ತೊಳೆದು ಕೊಡುವ ನೆಪದಲ್ಲಿ ಮಹಿಳೆಯೋರ್ವಳನ್ನ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ-ಬಂಗಾರ ಲೂಟಿ ಮಾಡಿದ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯ ಸರಕಾರಿ ಶಾಲೆಯ ಹಿಂಭಾಗ ನಡೆದಿದೆ.

ವಿಷ್ಣುಸಾ ಪವಾರ ಎಂಬುವವರ ಮನೆಯಲ್ಲಿ ಸರೋಜಾ ಹಾಗೂ ಸೊಸೆ ಅನಿತಾ ಎಂಬುವವರೇ ಮೋಸಕ್ಕೆ ಒಳಗಾಗಿದ್ದು, ಆರು ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ.

ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಸೊಸೆಯನ್ನ ಒಳಗಡೆ ಅತ್ತೆಯನ್ನ ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ ಒಳಗಡೆ ಕಳಿಸಿದ್ದಾರೆ.

ಮಾಜಿ ಪಾಲಿಕೆ ಸದಸ್ಯ ವಿಷ್ಣುಸಾ ಪವಾರ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, 19 ತೊಲೆ ಬಂಗಾರ ದೋಚುವುದು ಗೊತ್ತಾದ ತಕ್ಷಣವೇ ಮಹಿಳೆ ಬಾಗಿಲು ಹಾಕಲು ಪ್ರಯತ್ನಪಟ್ಟಿದ್ದಾರೆ. ಆದರೆ, ವಂಚಕರಿಬ್ಬರು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ವಿವಿಧೆಡೆ ನಾಕಾಬಂದಿ ಹಾಕಲಾಗಿದೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ