Breaking News

ಮಹಾನಟಿ’ ರಿಯಾಲಿಟಿ ಶೋ ಹಾಗೂ ಜಡ್ಜಸ್ ವಿರುದ್ಧ ದಾಖಲಾಯ್ತು ಕೇಸ್..!

Spread the love

ಬೆಂಗಳೂರು:- ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಕೇಸ್ ದಾಖಲಾಗಿದೆ. ನಟಿಯಾಗಲು ಬಯಸುವ ಕಲಾವಿದರಿಗೆ ಝೀ ಕನ್ನಡ ವಾಹಿನಿ ವೇದಿಕೆ ನೀಡಿತ್ತು. ಇದೀಗ ಈ ಶೋ ಗೆ ದೊಡ್ಡ ಶಾಕ್ ಸಿಕ್ಕಿದೆ.

ಈ ರಿಯಾಲಿಟಿ ಶೋ ನ ನಿರೂಪಣೆಯನ್ನು ಅನುಶ್ರೀ ಮಾಡುತ್ತಿದ್ದಾರೆ. ನಿರ್ದೇಶಕ ತರುಣ್‌ ಸುಧೀರ್‌, ಹಿರಿಯ ನಟಿ ಪ್ರೇಮಾ, ನಟ ರಮೇಶ್ ಅರವಿಂದ್ ಮತ್ತು ನಟಿ ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿದ್ದಾರೆ. ಇದೀಗ ಈ ಶೋನಲ್ಲಿ ಬಳಕೆಯಾದ ಸಾಲಿನ ಬಗ್ಗೆ ಅಪಸ್ವರ ಕೇಳಿ ಬಂದಿದೆBreaking News: ಮಹಾನಟಿ' ರಿಯಾಲಿಟಿ ಶೋ ಹಾಗೂ ಜಡ್ಜಸ್ ವಿರುದ್ಧ ದಾಖಲಾಯ್ತು ಕೇಸ್..!

ಈ ಶೋನಲ್ಲಿ ಸ್ಪರ್ಧಿಯೊಬ್ಬರು ನಟನೆ ಮಾಡುವಾಗ ಬಳಕೆ ಮಾಡಿದ ಶಬ್ದ ಚರ್ಚೆ ಹುಟ್ಟುಹಾಕಿದೆ. ‘ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯ ಬಳಕೆ ಆಗಿದೆ. ಇದು ಮೆಕ್ಯಾನಿಕ್​ ಕೆಲಸ ಮಾಡುವವರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯದ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಅಲ್ಲದೇ, ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲು ಮಾಡಿದ್ದಾರೆ.

ಈ ಶೋನ ನಿರ್ಮಾಪಕರು, ನಿರ್ದೇಶಕರು, ದೃಶ್ಯದಲ್ಲಿ ಆಯಕ್ಟ್ ಮಾಡಿದ ಗಗನಾ ವಿರುದ್ಧವೂ ಕೇಸ್ ದಾಖಲಾಗಿದೆ. ಅಲ್ಲದೇ, ನಿರೂಪಕಿ ಅನುಶ್ರೀ, ಜಡ್ಜ್​ಗಳಾದ ರಮೇಶ್ ಅರವಿಂದ್, ನಟಿ ಪ್ರೇಮಾ ಮೇಲೂ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ