ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಎರಡು ಎಮ್ಮೆಗಳಿಗೆ ತಲಾ 50 ಸಾವಿರ ರೂಪಾಯಿ ಯಂತೆ ಒಂದು ಲಕ್ಷ ರೂ. ಪರಿಹಾರವನ್ನು ಶಾಸಕ ಸತೀಶ ಜಾರಕಿಹೊಳಿ ನೀಡಿದರು.
ಇಲ್ಲಿನ ಗೃಹಕಚೇರಿಯಲ್ಲಿ ಎಮ್ಮೆ ಮಾಲೀಕ ರವೀಂದ್ರ ಪಾಟೀಲ ಅವರಿಗೆ ವಿದ್ಯುತ್ ಇಲಾಖೆ ನಿಧಿಯಿಂದ ಪರಿಹಾರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಎಇಇ ವಿವೇಕ ನಾಯಿಕ, ಜಯರಾಮ ಗುರ್ಲಿ, ಜಾಳುಬಾ ಲಾಡ, ಲಕ್ಷಣ ರಾದಾಯಿ, ಶಿವಾಜಿ ಗುರ್ಲಿ, ಪರಶುರಾಮ ಗುಡಗನಟ್ಟಿ, ಮಲಗೌಡ ಪಾಟೀಲ ಇದ್ದರು.