ಹುಬ್ಬಳ್ಳಿ, ಮೇ 5ಅವರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಂಡು ಲ್ಯಾಪ್ ಟ್ಯಾಪ್ ಮುಂದಿಸಿಕೊಂಡು ತಾಂತ್ರಿಕ ಲೋಕದಲ್ಲಿ ಸದಾ ಮಗ್ನರಾಗುತ್ತಿದ್ದ ಯುವಕರು ಈಗ ಬದಲಾದ ಸಂದರ್ಭದಲ್ಲಿ ಹೊಲಗಳತ್ತ ಬಂದಿದ್ದಾರೆ. ಅದು ನೇಗಿಲು ಹೊತ್ತುಕೊಂಡು. ತಮ್ಮ ತಂದೆ ,ತಾಯಿ, ಅಣ್ಣ ತಂಗಿ, ತಮ್ಮಂದಿರ, ಆಳು ಕಾಳು ಜೊತೆಗೆ. ಇನ್ನು ಕೇಲವರು ಬೀದಿ ಬದಿಯಲ್ಲಿ ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ.
ಹೌದು ಇದು ಕರೋನಾ ವೈರಸ್ ತಂದಿಟ್ಟ ಪರಿಸ್ಥಿತಿ.
ಲಂಡನ್, ಕಲ್ಕತ್ತಾ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇತರೆ ದೊಡ್ಡ ನಗರದಲ್ಲಿಸಾಫ್ಟ್‍ವೇರ್ ಕೆಲಸ ಮಾಡುತ್ತಿರುವ ಗ್ರಾಮೀಣ ಪ್ರದೇಶದವರು ಲಾಕ್‍ಡೌನ್ ನಿಂದಾಗಿ ಮರಳಿ ಬಂದಿದ್ದು, ಕೃಷಿ ಕೆಲಸ ಸೇರಿದಂತೆ ತರಕಾರಿ ವ್ಯಾಪಾರದಲ್ಲಿತೊಡಗಿದ್ದಾರೆ.
‘ಕೃಷಿ ಮಾಡುವುದು ನನ್ನಿಂದ ಸಾಧ್ಯವಿಲ್ಲ’ ಎಂದು ಮನೆ ಬಿಟ್ಟು ಕಂಪನಿಯಲ್ಲಿಕೆಲಸ ಮಾಡುತ್ತಿದ್ದವರೂ ಸಹ ಈಗ ತಮ್ಮ ಮೂಲ ಉದ್ಯೋಗವಾದ ಕೃಷಿಯಲ್ಲಿತೊಡಗಿಸಿಕೊಂಡಿದ್ದು, ರೈತರಿಗೆ ಅನುಕೂಲವಾಗಿದೆ.
ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿಕೆಲಸ ಮಾಡುತ್ತಿದ್ದೆ. ಲಕ್ಷಾಂತರ ಸಂಬಳ ಪಡೆಯುತಿದ್ದ ಯುವಕರು ಕೊರೊನಾ ಬಂದಿದ್ದರಿಂದ ನಮ್ಮ ಊರಿಗೆ ಬಂದಿದ್ದು ಮನೆಯಲ್ಲಿಕುಳಿತು ಬೇಜಾರು ಆಗುತ್ತಿದೆ. ಹೀಗಾಗಿ ಹೊಲದಲ್ಲಿಉಳುಮೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಕೃಷಿಯಿಂದ ಖುಷಿಯಾಗುತ್ತಿದೆ ಎನ್ನುತ್ತಾರೆ.
ಮನೆಮಂದಿಯೆಲ್ಲ ಸೇರಿ ಕೃಷಿ ಚಟುವಟಿಕೆಗಳಲ್ಲಿತೊಡಗಿದ್ದರಿಂದ ನಗರದಿಂದ ಯುವಕರು ಕೃಷಿಯಲ್ಲಿಹೊಸ ಪದ್ಧತಿ ಅಳವಡಿಕೆಗೆ ಮುಂದಾಗಿದ್ದಾರೆ. ಹೀಗಾಗಿ ನೆಗಿಲ ಹೊಡಿಸು ವುದು, ಹರಗುವುದು, ಬದುವು ಹಾಕಿಸುವುದು, ಕೃಷಿ ಹೊಂಡ ತೆಗಿಸುವ ಕೆಲಸದ ಜತೆ ಹಳ್ಳದಲ್ಲಿರುವ ಗಿಡ ಕಂಠಿಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸುವ ಕೆಲಸ ಜೋರಾಗಿದೆ