ಘಟಪ್ರಭಾ :ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರದಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ನಿನ್ನೆ ಪೂರ್ವ ಬೆಂಬಲ ವ್ಯಕ್ತವಾಗಿದೆ
ಬೆಳಗಾವಿ ಜಿಲ್ಲೆಯ ಗೋಕಾಕ ಸೇರಿದಂತೆ ಘಟಪ್ರಭಾ,ಕೊಣ್ಣೂರ ಪಟ್ಟಣ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು
ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಗೋಕಾಕ ತಾಲೂಕಿನ ಜನತೆ ಪ್ರದಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಘಟಪ್ರಭಾ, ಧುಪದಾಳ, ಕೊಣ್ಣೂರ, ಮಲ್ಲಾಪೂರ್(ಪಿ.ಜಿ), ಬಡಿಗವಾಡ ಸೇರಿದಂತೆ ಸುತ್ತ ಮುತ್ತ ಹಳ್ಳಿಗಳಿಂದಲು ಕೂಡ ಬೆಂಬಲ ವ್ಯಕ್ತ ಪಡಿಸಿ ಸುಮಾರು 35 ಹೆಚ್ಚು ಹಳ್ಳಿಗಳಿಂದ ಕೂಡಿ ನಡೆಯಬೇಕಾದ ಪ್ರಸಿದ್ದ ಘಟಪ್ರಭಾ ಸಂತೆ ಸಂಪೂರ್ಣ ರದ್ದು ಮಾಡಿದ್ದಾರೆ,
ಘಟಪ್ರಭಾ ಸಂತೆಯಿಂದ ಬೇರೆ ರಾಜ್ಯಗಳಿಗೆ ಹೋಗುವ ಕಾಯಿ ಪಲ್ಯ ಸಂಪೂರ್ಣ ರದ್ದು ಮಾಡಲಾಗಿದೆ
ಎಲ್ಲಾ ಗ್ರಾಮಗಳಲ್ಲಿ ಅಂಗಡಿಗಳು, ಹೋಟೆಲ್ಗಳು, ಸಂಪೂರ್ಣ ಬಂದ್ ಮಾಡಿ ಮನೆಯಿಂದ ಯಾರು ಹೊರಗೆ ಬರದೇ ಕೊರೋನಾ ವೈರಸ್ ವಿರೋಧ ಸಮರ ಸಾರಿದಾರೆ
ಹಳ್ಳಿಗಳಿಗೆ ಹೋಗಿ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ
Laxmi News 24×7