ಶಿವಮೊಗ್ಗಕ್ಕೆ ಆಗಮಿಸಿದ ಮಾನ್ಯ ಆರೋಗ್ಯ ಸಚಿವರಾದ ಶ್ರೀ ಶ್ರೀರಾಮುಲು ಅವರಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಎಲ್ಲಾ ವರ್ಗದ ನೌಕರರ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಕುರಿತಾಗಿ ಸಚಿವರಲ್ಲಿ ಖುದ್ದಾಗಿ ವಿವರಿಸಿ ಮನವಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಬೇಡಿಕೆಗಳು ಈಡೇರದಿದ್ದರೆ ಮುಷ್ಕರಕ್ಕೆ ಸಜ್ಜಾಗಿರುವ ಬಗ್ಗೆಯೂ ಹೇಳಿರುತ್ತಾರೆ.
ಇದೇ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮಾಧ್ಯಮದ ಮೂಲಕ ತಮ್ಮ ಅಳಲನ್ನು ತಿಳಿಸಿರುತ್ತಾರೆ ಇದು ಅವರೊಬ್ಬರ ಸಮಸ್ಯೆ ಅಲ್ಲ ಇಡೀ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನೋವಾಗಿರುತ್ತದೆ.
ಈ ಭೇಟಿಯ ಕುರಿತಾದ ಪತ್ರಿಕಾ ವರದಿಗಳು/ ಚಿತ್ರಗಳು ತಮ್ಮ ಮಾಹಿತಿಗಾಗಿ.
ಸಂಘದ ಕರೆಯಂತೆ ಹೋರಾಟದ ಸಂಪೂರ್ಣ ವಿವರವನ್ನು ಅಧಿಕೃತವಾಗಿ ತಿಳಿಸಲಾಗುವುದು.
*ನಾವೆಲ್ಲ ಸೇವೆಗೂ ಬದ್ದ, ಮುಷ್ಕರಕ್ಕೂ ಸಿದ್ದ*
*ಸಂಘಟನೆಯೇ ಶಕ್ತಿ*