ಗೋಕಾಕ : ಮಾನವ ಕುಲಕ್ಕೇ ಮಹಾಮಾರಿಯಾಗಿ ರೂಪಿತವಾಗಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಜನತಾ ಕರ್ಫ್ಯೂಗೆ ಜನತೆ ಬೆಂಬಲಿಸಿದ ಹಿನ್ನೆಲೆ ಮಾತಾನಾಡಿದ ಅವರು,ಕೊರೊನಾ ವೈರಸ್ ಸೋಂಕು ಸಾಮುದಾಯಿಕವಾಗಿ ಹರಡದಂತೆ ಇನ್ನು ಕೆಲ ವಾರಗಳ ಕಾಲ ಸ್ವಯಂ ಕರ್ಫ್ಯೂ ಆಚರಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಿದ್ದು ಈ ಸೋಂಕನ್ನು ಎದುರಿಸಿ ಸ್ವಸ್ಥ ಭಾರತವನ್ನು ನಿರ್ಮಿಸಬೇಕಾಗಿದೆ.
ಇದಕ್ಕಾಗಿ ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ ಜನತಾ ಕರ್ಫ್ಯೂ ನ್ನು ಬೆಂಬಲಿಸಿದ ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೂ ವಂದನೆಗಳು.
ಈ ಸೋಂಕು ಮುಕ್ತ ಸಮಾಜಕ್ಕಾಗಿ ಹಗಲಿರುಳು ದುಡಿಯುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಎಷ್ಟು ಅಭಿನಂದಿಸಿದರೂ ಸಾಲದು.
ಭಾರತೀಯ ಸೈನ್ಯ, ಪೋಲಿಸ್ ವ್ಯವಸ್ಥೆ, ಸಮಾಜದ ಸ್ವಸ್ಥತೆಗೆ ಕಾರಣರಾಗಿರುವ ಪೌರಕಾರ್ಮಿಕರು ಮತ್ತು ಅತೀವ ಜನಪರ ಕಾಳಜಿಯಿಂದ ಮಹಾಮಾರಿಯ ವಿರುದ್ಧ ಚಳುವಳಿಯನ್ನೇ ರೂಪಿಸಿರುವ ಮಾಧ್ಯಮಗಳ ಸ್ನೇಹಿತರಿಗೂ ಸಹಾ ನನ್ನ ಧನ್ಯವಾದಗಳು ತಿಳಿಸಿದರು
Laxmi News 24×7